ಗದಗ: ಜಿಲ್ಲೆಯ ಜಿ.ಎಸ್.ಪಾಟೀಲ್, ಬಿ.ಆರ್.ಯಾವಗಲ್ ಮತ್ತು ರಾಮಪ್ಪ ಲಮಾಣಿಗೆ ಪ್ರಸಕ್ತ ಸಾಲಿನ ವಿಧಾನಸಭೆ ಚುನಾವಣೆ ಕೊನೆಯ ವೇದಿಕೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟು ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರದಲ್ಲಿ ಬೆವರಿಳಿಯುವಂತೆ ಸುತ್ತಾಡುತ್ತಿದ್ದಾರೆ. ವಯಸ್ಸು ಮತ್ತು ಪಕ್ಷದಲ್ಲಿ ಯುವಕರಿಗೆ ಅವಕಾಶ ಕಲ್ಪಿಸಿಕೊಡುವ ಹಿನ್ನೆಲೆ 2028ರ ಚುನಾವಣಾ (Election) ಸ್ಪರ್ಧೆಯಿಂದ ಈ ತ್ರಿಮೂರ್ತಿಗಳು ಹಿಂದೆ ಸರಿಯುವ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ.
ರೋಣ (Rona) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಜಿ.ಎಸ್.ಪಾಟೀಲ್ (G.S.Patil) ಅವರಿಗೆ 76ರ ವಯೋಮಾನ. ಇವರು ಪ್ರಬುದ್ಧ ಮತ್ತು ಪಕ್ಷ ನಿಷ್ಠೆಯ ಕಾಂಗ್ರೆಸ್ಸಿಗ. 7 ಬಾರಿ ಸ್ಪರ್ಧಿಸಿ 3 ಬಾರಿ ಗೆಲವು ಸಾಧಿಸಿದರೂ ಜಿಲ್ಲೆಯ ಸ್ವಪಕ್ಷದವರ ಒಳ ಸಂಚಿನ ರಾಜಕಾರಣದಿಂದಾಗಿ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. 1989, 1999, 2019ರಲ್ಲಿ ಗೆಲವು ಸಾಧಿಸಿದ್ದು, 4 ಬಾರಿ ಸೋಲುಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 8ನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ಇವರು ಉಗ್ರಾಣ ನಿಗಮದ ಅಧ್ಯಕ್ಷರಾಗಿ, ಕ್ರೆಡಿಲ್ ನಿಗಮ ಅಧ್ಯಕ್ಷರಾಗಿ, ಧರಂಸಿಂಗ್ (Dharam Singh) ಕೆಪಿಸಿಸಿ (KPCC) ಅಧ್ಯಕ್ಷರಾಗಿದ್ದ ವೇಳೆ ಕೆಪಿಸಿಸಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನು ಓದಿ: ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬ್ರ್ಯಾಂಡ್ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು: KMF ಸ್ಪಷ್ಟನೆ
Advertisement
Advertisement
ಜಿ.ಎಸ್ ಪಾಟೀಲ್, ತಮ್ಮ 40 ವರ್ಷದ ರಾಜಕಾರಣದಲ್ಲಿ ಎಂದೂ ಪಕ್ಷದ್ರೋಹ ಎಸಗಿದವರಲ್ಲ. ವಯಸ್ಸು 76 ಮೀರಿದರೂ ಪಕ್ಷ ಕಟ್ಟಿ ಬೆಳೆಸುವಲ್ಲಿ ಚಿರಯುವಕರಂತೆ ಸುಡು ಬಿಸಿಲಿನಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ತಿರುಗುತ್ತಿದ್ದಾರೆ.
Advertisement
1983ರಲ್ಲಿ ಕಾಂಗ್ರೆಸ್‌ನಿಂದ (Congress) ಅಂದಿನ ಪಂಚಾಯತ್ ಮತ್ತು ಎಪಿಎಂಸಿ ಅಧ್ಯಕ್ಷರಾಗಿ ಏಕಕಾಲಕ್ಕೆ ಆಯ್ಕೆಗೊಂಡರು. 2018ರಲ್ಲಿ 7ನೇ ಬಾರಿ ಸ್ಪರ್ಧೆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಉರುಳಿ ಬಿಟ್ಟಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಗಾಳಕ್ಕೆ ಸಿಕ್ಕು ಸೋಲುಂಡವರಲ್ಲಿ ಜಿ.ಎಸ್.ಪಾಟೀಲ್ ಕೂಡಾ ಒಬ್ಬರು. 1989ರಿಂದಲೂ ಕ್ಷೇತ್ರದಲ್ಲಿ ಟಿಕೆಟ್ ವಿಚಾರದಲ್ಲಿ ಇವರಿಗೆ ಸ್ಪರ್ಧಿಗಳೇ ಇಲ್ಲ ಎಂಬುದು ವಿಶೇಷ. ಇದನ್ನು ಓದಿ: ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್ ಫಿಕ್ಸ್ – ಪರೋಕ್ಷವಾಗಿ ಸುಳಿವು ಕೊಟ್ಟ HDK
Advertisement
ಇನ್ನು ರೈತ ಬಂಡಾಯದ ನಾಡು ನರಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್ ಯಾವಗಲ್ (B.R.Yavagal) ಅವರಿಗೆ ಇದು ಕೊನೆಯ ಚುನಾವಣೆಯಾಗಿದೆ. ಬಿ.ಆರ್.ಯಾವಗಲ್‌ಗೆ 75 ವರ್ಷ. ನರಗುಂದ (Naragunda) ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾದ ಮಾಜಿ ಸಚಿವ ಬಿ.ಆರ್.ಯಾವಗಲ್ ಅವರಿಗೆ 2ನೇ ಪಟ್ಟಿಯಲ್ಲಿ ಹೆಸರು ಘೋಷಣೆ ಮಾಡಿದೆ. ಈಗಾಗಲೇ 10 ಬಾರಿ ವಿಧಾನಸಭೆ ಹಾಗೂ ಒಂದು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. 10 ಬಾರಿ ಸ್ಪರ್ಧಿಸಿದ ಸಂದರ್ಭದಲ್ಲಿ 5 ಬಾರಿ ಸೋತು 5 ಬಾರಿ ಗೆದ್ದಿದ್ದಾರೆ. ಒಂದು ಬಾರಿ ಎಂಪಿ ಚುನಾವಣೆಯಲ್ಲೂ ಸೋಲುಂಡಿದ್ದಾರೆ. 2023ರ 11ನೇ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಸ್ವತಃ ಅವರೇ ಘೋಷಣೆ ಮಾಡಿಕೊಂಡಿದ್ದಾರೆ. ಅಖಂಡ ಧಾರವಾಡ ಜಿಲ್ಲೆ ಇದ್ದ ವೇಳೆ 1991ರಲ್ಲಿ ಧಾರವಾಡ ದಕ್ಷಿಣ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದನ್ನು ಓದಿ: ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್‌ಗಾಗಿ ದೇಗುಲ, ಮಸೀದಿಯಲ್ಲಿ ವಿಶೇಷ ಪೂಜೆ
ಬಿ.ಆರ್ ಯಾವಗಲ್ ಅವರು ಮೊದಲು ವಕೀಲರಾಗಿದ್ದರಿಂದ ಕ್ಷೇತ್ರದಲ್ಲಿ ಇವರಿಗೆ ವಕೀಲರು ಎಂದೇ ಕರೆಯುತ್ತಾರೆ. ಸರ್ಕಾರ ವಿಧಿಸಿದ ನೀರಿನ ಕರ ವಿರುದ್ಧ 1980ರಲ್ಲಿ ನರಗುಂದದಲ್ಲಿ ನಡೆದ ಬಂಡಾಯದ ಪ್ರಕಣದಲ್ಲಿ 89 ರೈತರ ಮೇಲೆ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಅವರ ಪರವಾಗಿ ವಕೀಲರಾಗಿ ಬೆಂಬಲಕ್ಕೆ ನಿಂತಿದ್ದ ಬಿ.ಆರ್.ಯಾವಗಲ್ ತಮ್ಮ ವಕೀಲ ವೃತ್ತಿಯಿಂದ ರೈತರನ್ನು ಬಿಡುಗಡೆಗೊಳಿಸಿದ್ದರು. ನಂತರ 1975ರಲ್ಲಿ ನವಲಗುಂದ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. 1978ರಲ್ಲಿ ಕಾಂಗ್ರೆಸ್ ಇಬ್ಬಾಗವಾದ ಕಾರಣ, ಕಾಂಗ್ರೆಸ್‌ನಿಂದ ಹೊರಬಂದು ಕ್ರಾಂತಿರಂಗ ಸೇರ್ಪಡೆಯಾದರು. ಕ್ರಾಂತಿರಂಗ ಮತ್ತು ಜನಾತಾ ಪಾರ್ಟಿ ಸೇರಿ ನಿಮಾಣವಾಗಿದ್ದ ಜನತಾರಂಗ, ಜನತಾದಳ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಂಡಿದ್ದಾರೆ. ಜನತಾಳದ ಪಕ್ಷನಿಷ್ಠರಾಗಿದ್ದ ಇವರು 1998 ರಲ್ಲಿ ಜಿ.ಎಚ್.ಪಟೇಲ್ ಸಿಎಂ ಆಗಿದ್ದ ಸಂದರ್ಭದಲ್ಲಿ ಕೇಂದ್ರ ಮಂತ್ರಿಯಾಗಿದ್ದ ಎಸ್.ಆರ್ ಬೊಮ್ಮಾಯಿ ಮತ್ತು ಅವರ ಪುತ್ರ, ಈಗಿನ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಜೊತೆಗಿನ ವೈಮನಸ್ಸಿನ ಕಾರಣ 1998ರಲ್ಲಿ ಜನತಾದಳ ತೊರೆದು ಕಾಂಗ್ರೆಸ್ ಸೇರಿದರು.
ಬಿ.ಆರ್ ಯಾವಗಲ್ ಅವರು 1981ರಲ್ಲಿ ಬಂಗಾರಪ್ಪ ನೇತೃತ್ವದ ಕ್ರಾಂತಿರಂಗ ಸೇರ್ಪಡೆಯಾದರು. ನಂತರ 1983ರಲ್ಲಿ ಜನತಾದಳ ಪಕ್ಷದಿಂದ ಸ್ಪಧಿರ್ಸಿ ಪ್ರಥಮ ಬಾರಿಗೆ ಶಾಸಕರಾದರು. ಬಳಿಕ 1984ರಲ್ಲಿ ಮಲಪ್ರಭಾ ಕಾಡಾ ಅಧ್ಯಕ್ಷರಾಗಿ ಆಯ್ಕೆಯಾದರು. 1984ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. 1985ರಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪಧಿರ್ಸಿ ಗೆಲವು ಸಾಧಿಸಿದರು. ನಂತರ 1989ರಲ್ಲಿ ಜನತಾದಳದಿಂದ ಸ್ಪಧಿರ್ಸಿ ಪರಾಭವಗೊಂಡರು. ಮತ್ತೆ 1994ರಲ್ಲಿ ಜನತಾದಳದಿಂದ ಗೆಲವು ಸಾಧಿಸಿದರು. ನಂತರ 1998ರಲ್ಲಿ ಜೆ.ಎಚ್. ಪಟೇಲ್ ಸಿಎಂ ಇದ್ದ ವೇಳೆ ಪಕ್ಷದ ವೈಮನಸ್ಸುಗಳಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾದರು. 1999ರಲ್ಲಿ ಕಾಂಗ್ರೆಸ್ಸಿನಿಂದ ಸ್ಪಧಿರ್ಸಿ ಗೆದ್ದರು. 2004ರಲ್ಲಿ ಸೋತರು. ನಂತರ 2008ರಲ್ಲಿ ಪಕ್ಷೇತರ ಸ್ಪರ್ಧೆ ಮಾಡಿ ಸೋತರು. 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪಧಿರ್ಸಿ ಗೆದ್ದರು. 2018ರಲ್ಲಿ ಬಿಜೆಪಿ ವಿರುದ್ಧ ಸೋಲುಂಡರು. 2023ರ ಕಾಂಗ್ರೆಸ್ ಟಿಕೆಟ್ ನೀಡಿದ್ದು ಕೊನೆಯ ಚುನಾವಣೆ ಎನ್ನಲಾಗುತ್ತಿದೆ. ಇದನ್ನು ಓದಿ: ದೇವೇಗೌಡ್ರು ಅಡುಗೆ ಮನೆಯಲ್ಲಿ ಅರ್ಧ ಗಂಟೆ ಕುಳಿತರೆ ಜೆಡಿಎಸ್ ಟಿಕೆಟ್ ಹಂಚಿಕೆ ಮುಗಿಯುತ್ತೆ: ತೇಜಸ್ವಿ ಸೂರ್ಯ ವ್ಯಂಗ್ಯ
ಶಿರಹಟ್ಟಿ ಕ್ಷೇತ್ರದ ಬಿಜೆಪಿ (BJP) ಶಾಸಕ ರಾಮಪ್ಪ ಲಮಾಣಿಗೆ (Ramappa Lamani) ಈ ಬಾರಿ ಕೊನೆಯ ಚುನಾವಣೆಯ ಅದೃಷ್ಟ ಪರೀಕ್ಷೆಯಾಗಿದೆ. ರಾಮಪ್ಪ ಲಮಾಣಿಗೆ 71 ವರ್ಷ. 3 ಬಾರಿ ಸ್ಪರ್ಧೆಯಲ್ಲಿ 2 ಬಾರಿ ಗೆಲುವು ಸಾಧಿಸಿದ್ದು, ಒಂದು ಬಾರಿ ಸೋಲಿನ ರುಚಿ ಕಂಡಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದವರು ಹಾಲಿ ಶಾಸಕ ರಾಮಪ್ಪ ಲಮಾಣಿ. ಪ್ರಸಕ್ತ ಸಾಲಿನಲ್ಲಿ ಶಿರಹಟ್ಟಿ (Shirahatti) ವಿಧಾನಸಭಾ ಕ್ಷೇತ್ರದಲ್ಲಿ ರಾಮಪ್ಪ ಲಮಾಣಿ ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಿದ್ದಾರೆ. ಪ್ರಸ್ತುತ ರಾಜಕಾರಣದ ಬೆಳವಣಿಗೆ ನೋಡಿದರೆ ಕ್ಷೇತ್ರದ ಲಿಂಗಾಯತ ಹಾಗೂ ಲಂಬಾಣಿ ಸಮುದಾಯ, ರಾಮಪ್ಪನ ವಿರುದ್ಧ ಅಸಮಧಾನ ವ್ಯಕ್ತಪಡಿಸಿದೆ. ಇವರಿಗೆ ಈ ಬಾರಿ ಟಿಕೆಟ್ ನೀಡದಂತೆ ಸ್ವಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಮೊದಲು ಮಾಗಡಿ ಕ್ಷೇತ್ರದಿಂದ 2006ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಶಿರಹಟ್ಟಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿದ್ದರಿಂದ 2008ರಲ್ಲಿ ಬಿಜೆಪಿಯಿಂದ ಮೊದಲ ಬಾರಿ ಶಾಸಕರಾದರು. 2013ರಲ್ಲಿ 2ನೇ ಬಾರಿ ಕೇವಲ 300 ಮತಗಳಿಂದ ಸೋಲುಂಡರು. ನಂತರ 2018ರಲ್ಲಿ 30 ಸಾವಿರ ಅತ್ಯಧಿಕ ಮತಗಳಿಂದ ಗೆದ್ದು ಬೀಗಿದರು. ಆದರೆ ಈ ಬಾರಿ ಟಿಕೆಟ್ ವಿಚಾರದಲ್ಲಿ ರಾಮಣ್ಣನಿಗೆ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಆದ್ದರಿಂದ 4ನೇ ಬಾರಿ ಟಿಕೆಟ್ ಸಿಗುತ್ತಾ ಅಥವಾ ಕೈ ತಪ್ಪುತ್ತಾ ಎಂದು ಕಾದುನೋಡಬೇಕಿದೆ. ಇದನ್ನು ಓದಿ: ಹಿಂದೂಗಳ ಭಾವನೆಗೆ ಧಕ್ಕೆ ಆರೋಪ: ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ಜೆಡಿಎಸ್ ದೂರು