ಪ್ರಿಯಾಂಕ್ ಖರ್ಗೆಯನ್ನು ಜಿರಲೆಗೆ ಹೋಲಿಸಿದ ಸಚಿವ ಈಶ್ವರಪ್ಪ

Public TV
2 Min Read
ks eshwarappa 2

ಬೀದರ್: ಪ್ರಧಾನಿ ಮೋದಿ (Narendra Modi) ಗೆ ನಾಲಾಯಕ್ ಎಂದ ಪ್ರಿಯಾಂಕ್ ಖರ್ಗೆಯನ್ನ ಜಿರಲೆಗೆ ಹೋಲಿಸಿ ಮಾಜಿ ಸಚಿವ ಈಶ್ವರಪ್ಪ (KS Eshwarappa) ಲೇವಡಿ ಮಾಡಿದ್ದಾರೆ.

ಬೀದರ್ (Bidar) ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಠಾಕೂರ್ ಪರ ಪ್ರಚಾರಕ್ಕೆ ಆಗಮಿಸಿದ ಕೆ.ಎಸ್ ಈಶ್ವರಪ್ಪ, ಇನ್ನೂ ಮರಿ ಖರ್ಗೆಗೆ ಮೀಸೆ ಕೂಡ ಬಂದಿಲ್ಲ, ಇವನು ನಮ್ಮ ಪ್ರಧಾನಿಗಳನ್ನು ನಾಲಾಯಕ್ ಎನ್ನುತ್ತಾನೆ ಎಂದು ಏಕವಚನದಲ್ಲಿ ತೀರುಗೇಟು ನೀಡಿದರು.

NARENDRA MODI 3 1

ಇವನು ಎಷ್ಟರಮಟ್ಟಿಗೆ ಅಯೋಗ್ಯ ಇರಬೇಕು. ಮೋದಿ ಎಲ್ಲಿ, ಪ್ರಿಯಾಂಕ್ ಖರ್ಗೆ (Priyank Kharge) ಎಲ್ಲಿ. ಹೀಗಾಗಿ ರಾಜ್ಯದ ಜನರ ಕ್ಷೇಮೆ ಕೇಳಬೇಕು ಇಲ್ಲವಾದರೆ ಈ ಚುನಾವಣೆಯಲ್ಲಿ ಜನರೇ ಪ್ರಿಯಾಂಕ್ ಖರ್ಗೆ ಠೇವಣಿ ಕಳೆದುಕೊಳ್ಳುವಂತೆ ಮಾಡುತ್ತಾರೆ ಎಂದು ಗರಂ ಆದರು. ಇದನ್ನೂ ಓದಿ: ಖರ್ಗೆ ಹತ್ಯೆಗೆ ಬಿಜೆಪಿ ಅಭ್ಯರ್ಥಿಯಿಂದ ಸಂಚು: ಕಾಂಗ್ರೆಸ್‌ ಆಡಿಯೋ ಬಾಂಬ್‌

priyank kharge

ಕಾಂಗ್ರೆಸ್ (Congress) ನವರು ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಾರೆ. ಬಜರಂಗದಳವನ್ನು ಪಿಫ್‍ಐಗೆ ಹೋಲಿಕೆ ಮಾಡುತ್ತಾರೆ. ಪಿಎಫ್‍ಐ ರಾಷ್ಟ್ರದ್ರೋಹ ಸಂಸ್ಥೆ ಎಂದು ಬ್ಯಾನ್ ಮಾಡಿದ್ದೇವೆ ಎಂದರು. ಸತ್ತೋಗಿರೋ ಹೆಣಕ್ಕೆ ಮೊತ್ತೊಂದು ಬಾರಿ ಗುಂಡು ಹೊಡೆಯುತ್ತಾರೆ. ಬ್ಯಾನ್ ಆಗಿರೋ ಸಂಸ್ಥೆಯನ್ನು ಯಾರಾದರೂ ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಾರಾ..? ಬಜರಂಗದಳವನ್ನು ಬ್ಯಾನ್ ಮಾಡಿ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುತ್ತೆವೆ ಎಂದು ಕಾಂಗ್ರೆಸ್ ಅಂದುಕೊಂಡಿದೆ ಎಂದರು.

Siddaramaiah

ವರುಣಾ (Varuna Constituency) ದಲ್ಲಿ ನಾವು ಸಿದ್ದರಾಮಯ್ಯನ ಸೋಲಿಸಲ್ಲ ಅವರೇ ಸೋಲುವ ತೀರ್ಮಾನ ಮಾಡಿದ್ದು. ಯಾಕೆ ಕೋಲಾರ, ಬಾದಾಮಿ, ಚಾಮುಂಡೇಶ್ವರಿಗೆ ಹೋಗಿಲ್ಲ. ಎಲ್ಲಾ ಸುತ್ತಿ ಕೊನೆಗೆ ವರುಣಾಗೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್ ಗೆದ್ದರೆ ತಾಲಿಬಾನ್‌ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ: ಸಿ.ಟಿ.ರವಿ ವಾಗ್ದಾಳಿ

ರಾಜ್ಯದಲ್ಲೇ ಮೊದಲು ಕಾರ್ಯಕರ್ತರಿಗೆ ಬೈದ ಲೀಡರ್ ಸಿದ್ದರಾಮಯ್ಯ. ಇನ್ನೂ ಬಿಜೆಪಿಯಲ್ಲಿ ಲಿಂಗಾಯತರೋ, ಕುರುಬರೋ ಬಬ್ಬ ಹಿಂದೂ ರಾಜ್ಯದಲ್ಲಿ ಸಿಎಂ ಆಗುತ್ತಾರೆ. ಬಿಜೆಪಿ ಚಿತ್ರ ನಟರನ್ನು ಪ್ರಚಾರಕ್ಕೆ ಕರೆಸುತ್ತಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ನಿನ್ನೆ ವರುಣದಲ್ಲಿ ರಮ್ಯಾ, ದುನಿಯಾ ವಿಜಿ ಸಿದ್ದರಾಮಯ್ಯ ಪರ ಯಾಕೆ ಪ್ರಚಾರ ಮಾಡಿದ್ರು ಎಂದರು ತೀವ್ರ ವಾಗ್ದಾಳಿ ನಡೆಸಿದ್ರು.

Share This Article