ಚಳಿಯಲ್ಲಿ ಬೆಂಕಿ ಕಾಯಿಸಿಕೊಳ್ಳುವ ಚಟ ಈಶ್ವರಪ್ಪರಿಗಿದೆ, ನನಗಿಲ್ಲ: ಮಧು ಬಂಗಾರಪ್ಪ

Public TV
2 Min Read
KS Eshwarappa Madhu Bangarappa

ಶಿವಮೊಗ್ಗ: ನಮ್ಮ ಪ್ರಣಾಳಿಕೆಯನ್ನು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಸುಟ್ಟು ಹಾಕಿದ್ದಾರೆ. ಚಳಿಯಲ್ಲಿ ಬೆಂಕಿ ಕಾಯಿಸಿಕೊಳ್ಳುವ ಚಟ ನನಗಿಲ್ಲ. ಅದು ಈಶ್ವರಪ್ಪರಿಗೆ ಇದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ (Madhu Bangarappa) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ (Shivamogga) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣಾಳಿಕೆ ಬಗ್ಗೆ ತಲೆ ಕೆಡಿಸಿಕೊಂಡು, ಸಮಯೋಚಿತವಾಗಿ ಮಾಡಿದ್ದೇವೆ. ಪ್ರಣಾಳಿಕೆ ಅಂಶಗಳನ್ನು ಅನುಷ್ಠಾನಗೊಳಿಸುತ್ತೇವೆ. ನೀಡಿರುವ ಅಷ್ಟು ಭರವಸೆಗಳನ್ನು ಈಡೇರಿಸುತ್ತೇವೆ. ಜನರು ಕಾಂಗ್ರೆಸ್ (Congress) ಪಕ್ಷದ ಪರವಾಗಿದ್ದು, ಈ ಬಾರಿ ನಮ್ಮ ಸರ್ಕಾರ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Madhu Bangarappa

ಪ್ರಣಾಳಿಕೆಯಲ್ಲಿ ಹಲವಾರು ಅಂಶಗಳನ್ನು ಸೇರಿಸಿದ್ದೇವೆ. ರಾಜ್ಯದ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ, ಮೈಸೂರು, ಬೆಂಗಳೂರು ಭಾಗಗಳಿಗೆ ಪ್ರತ್ಯೇಕವಾಗಿ ಅಂಶಗಳನ್ನು ಅಡಕ ಮಾಡಲಾಗಿದೆ. ಕರಾವಳಿ ಭಾಗದ ಸಮಸ್ಯೆಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸರ್ವಜನಾಂಗದ ಶಾಂತಿಯ ತೋಟ ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಇದು ರಾಜ್ಯಕ್ಕೆ ಅಗತ್ಯವಾಗಿದೆ ಎಂದಿದ್ದಾರೆ.

ಬಜರಂಗದಳ ಬ್ಯಾನ್ ವಿಚಾರ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ. ನಾವು ಈ ಎಲ್ಲಾ ವಿಚಾರಗಳನ್ನು ಚರ್ಚಿಸಿಯೇ ನಿರ್ಧರಿಸಿದ್ದೇವೆ. ದೊಡ್ಡ ದೊಡ್ಡ ಲೀಡರ್‌ಗಳ ಮಕ್ಕಳು ಯಾರಾದರೂ ಬಜರಂಗದಳಲ್ಲಿದ್ದಾರಾ? ಕೇವಲ ಬಡವರ ಮಕ್ಕಳೇ ಅದರಲ್ಲಿ ಬಲಿಯಾಗುತ್ತಿದ್ದಾರೆ. ಮಹೇಂದ್ರ ಕುಮಾರ್ ಅವರೇ ಬಜರಂಗದಳದ ವಿರುದ್ಧ ಈಗ ಭಾಷಣ ಮಾಡಿದ್ದಾರೆ. ಅವರು ನನ್ನ ಜೊತೆ ಜೆಡಿಎಸ್‌ನಲ್ಲಿದ್ದರು. ಅವರೇ ನಾನು ತಪ್ಪು ಮಾಡಿದ್ದೆ ಅಂತಾ ಒಪ್ಪಿಕೊಂಡಿದ್ದಾರೆ. ಬಜರಂಗದಳ ವಿಚಾರ ಸೇರ್ಪಡೆ ಅನಿವಾರ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ ಭವಿಷ್ಯ ಸುಟ್ಟು ಬೂದಿಯಾಗಲಿದೆ: ಪ್ರಹ್ಲಾದ್ ಜೋಶಿ ಕಿಡಿ

ಪಿಎಫ್‌ಐ ಬ್ಯಾನ್ ಮಾಡಿದ್ದಕ್ಕೆ ಪ್ರಶ್ನೆ ಮಾಡಲಾಗಿದೆ. ಅವರು ಸುಪ್ರೀಂ ಕೋರ್ಟ್‌ಗೆ ಹೋಗ್ತಾರೆ. ನೈತಿಕ ಪೊಲೀಸ್ ಗಿರಿ ಸೇರಿದಂತೆ ಕೇಸು ಹಾಕಿಕೊಂಡ ಸಂಘಟನೆಗಳನ್ನು ನಿಷೇಧ ಮಾಡುತ್ತೆವೆಂದು ಹೇಳಿದ್ದೇವೆ. ನಮ್ಮ ಪ್ರಣಾಳಿಕೆಯನ್ನು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸುಟ್ಟು ಹಾಕಿದ್ದಾರೆ. ಚಳಿಯಲ್ಲಿ ಬೆಂಕಿ ಕಾಯಿಸಿಕೊಳ್ಳುವ ಚಟ ನನಗಿಲ್ಲ. ಅದು ಈಶ್ವರಪ್ಪರಿಗೆ ಇದೆ. ಹಾಗಾಗಿ ನಮ್ಮ ಪ್ರಣಾಳಿಕೆಗೆ ಬೆಂಕಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾರಿನ ಮೇಲೆ ನಿಂತಿದ್ದ ಸಚಿವ ಸೋಮಣ್ಣರನ್ನು ಕೆಳಗೆ ಬೀಳಿಸಿದ ಸುದೀಪ್ ಅಭಿಮಾನಿ

Share This Article