ಮಂಡ್ಯ: ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ (KR Pete) ಜೆಡಿಎಸ್‌ನಲ್ಲಿ (JDS) ಭಿನ್ನಮತ ಸ್ಫೋಟಗೊಂಡಿದ್ದು, ಕಳೆದ ಉಪಚುನಾವಣೆಯ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು (B.L.Devaraj) ಅಂಡ್ ಟೀಮ್ ಇದೀಗ ಕಾಂಗ್ರೆಸ್ ಕಡೆ ಮುಖ ಮಾಡಿದ್ದು, ಈ ಮೂಲಕ ಜೆಡಿಎಸ್‌ಗೆ ಟಕ್ಕರ್ ನೀಡಲು ಭಿನ್ನಮತೀಯರು ಮುಂದಾಗಿದ್ದಾರೆ.
ಕೆಆರ್‌ಪೇಟೆಯಲ್ಲಿ ಜೆಡಿಎಸ್‌ನಿಂದ ಹೆಚ್.ಡಿ.ಮಂಜುಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆ ಬಿ.ಎಲ್.ದೇವರಾಜು ಅಂಡ್ ಟೀಮ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಟಿಕೆಟ್ ಘೋಷಣೆ ಮಾಡಿದಾಗಿನಿಂದಲೂ ದೇವರಾಜು ಮತ್ತು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಮಾತ್ರ ಅಭ್ಯರ್ಥಿ ಬದಲಾವಣೆಯ ಮಾತು ಇಲ್ಲ ಎಂದು ಕಡ್ಡಿ ತುಂಡಾಗುವ ಹಾಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಕೊನೆಯ ಸ್ಪರ್ಧೆ ತವರಲ್ಲೇ ಆಗಲಿ- ಸಿದ್ದು ಪರವಾಗಿ ದೆಹಲಿ ಅಂಗಳಕ್ಕೆ ಹೋಗಲು ಸಿದ್ಧವಾಯ್ತಾ ಟೀಂ ಮೈಸೂರು?
Advertisement
Advertisement
ಈಗಾಗಲೇ ಮೊದಲು ತಮ್ಮ ಬೆಂಬಲಿಗರ ಸಭೆ ಕರೆದು ತಮ್ಮ ಅಸಮಾಧಾನ ಹೊರಹಾಕಿದ್ದ ಬಿ.ಎಲ್.ದೇವರಾಜು ಅಂಡ್ ಟೀಮ್ ಇದೀಗ ಮತ್ತೊಂದು ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ತಮಗೆ ಕಾಂಗ್ರೆಸ್‌ನಿಂದ ಆಹ್ವಾನ ಇದ್ದು, ಜೆಡಿಎಸ್‌ನಲ್ಲಿ ಅಭ್ಯರ್ಥಿ ಬದಲಾವಣೆಯಾಗದೆ ಇದ್ರೆ ನಾನು ಪಕ್ಷ ಬದಲಾವಣೆಯ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ದೇವರಾಜು ತಿಳಿಸಿದ್ದಾರೆ. ಅಲ್ಲದೇ ಒಂದು ವಾರ ಕಾದು ನೋಡುವುದಾಗಿ ಹೇಳಿರುವ ದೇವರಾಜು ಅಂಡ್ ಟೀಮ್ ಜೆಡಿಎಸ್ ನಾಯಕರಿಂದ ಸೂಕ್ತ ಸ್ಪಂದನೆ ದೊರಕದೆ ಇದ್ರೆ ಬಹುತೇಕ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಇದನ್ನೂ ಓದಿ: ನರೇಂದ್ರ ಮೋದಿ, ಅಮಿತ್ ಶಾ ಬಳಿಕ ಬೆಳಗಾವಿಗೆ ರಾಜನಾಥ್ ಸಿಂಗ್ ಪ್ರವಾಸ