ಕೋಲಾರ: ಕಳೆದ ಹತ್ತು ವಿಧಾನಸಭಾ ಚುನಾವಣೆಯಲ್ಲಿ ಪ್ರತಿಸಲ ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ನಡುವೆ ಜಿದ್ದಾಜಿದ್ದಿ ಹೋರಾಟ ಮತ್ತು ರಕ್ತಸಿಕ್ತ ರಾಜಕಾರಣಕ್ಕೆ ಶ್ರೀನಿವಾಸಪುರ (Srinivaspura) ಕ್ಷೇತ್ರ ಫೇಮಸ್. ಚುನಾವಣೆಯ ಸಮಯದಲ್ಲಿ ರಾಜಕೀಯ ಕೊಲೆಗಳು ಗಲಭೆಗಳು ಹಲವು ಬಾರಿ ನಡೆದಿದ್ದು ಪ್ರತಿ ಚುನಾವಣೆ ರೋಚಕವಾಗಿರುತ್ತದೆ.
ಕಾಂಗ್ರೆಸ್‌ನಿಂದ ರಮೇಶ್ ಕುಮಾರ್ (Ramesh kumar) ಆರನೇ ಬಾರಿ ಗೆದ್ದ ಕ್ಷೇತ್ರವಿದು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಮೇಶ್ ಕುಮಾರ್ 93,571 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದರೆ, ಜೆಡಿಎಸ್‌ನ ವೆಂಕಟಶಿವಾರೆಡ್ಡಿ (Vekntashiva Reddy) 83,019 ಮತಗಳನ್ನು ಪಡೆದುಕೊಂಡು ಸೋಲನ್ನು ಅನುಭವಿಸಿದ್ದರು. ಬಿಜೆಪಿಯ ಡಾ.ವೇಣುಗೋಪಾಲ್ 4,208 ಮತಗಳನ್ನು ಪಡೆದು ಠೇವಣಿಯನ್ನು ಕಳೆದುಕೊಂಡಿದ್ದರು.
Advertisement
ಪ್ರಸ್ತುತ ಶಾಸಕ ರಮೇಶ್‌ಕುಮಾರ್ ಕಾಂಗ್ರೆಸ್‌ನಿಂದ, ಜೆಕೆ.ವೆಂಕಟಶಿವಾರೆಡ್ಡಿ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದರೆ ಬಿಜೆಪಿಯಿಂದ ಡಾ.ವೇಣುಗೋಪಾಲ್ ಮತ್ತು ಆಮ್‌ಆದ್ಮಿ ಪಕ್ಷದಿಂದ ಡಾ.ವೆಂಕಟಾಚಲ ಕಣಕ್ಕಿಳಿಯುವ ಸಾಧ್ಯತೆಯಿದೆ. ಕರ್ನಾಟಕ ಮತ್ತು ಆಂಧ್ರ ಗಡಿಗಳನ್ನು ಶ್ರೀನಿವಾಸಪುರ ಹೊಂದಿರುವ ಕಾರಣ ʼರಾಯಲಸೀಮʼ ಕ್ಷೇತ್ರವೆಂದು ಕರೆಯುತ್ತಾರೆ. ರಾಯರಸೀಮ ಶ್ರೀಕೃಷ್ಣ ದೇವರಾಯನ ಆಳ್ವಿಕೆಗೆ ಒಳಪಟ್ಟಿದ್ದ ಕ್ಷೇತ್ರ. ಹಾಗಾಗಿ ರಾಯರಸೀಮ ಈಗ ಜನರ ಬಾಯಲ್ಲಿ ರಾಯಲಸೀಮವಾಗಿ ಬದಲಾಗಿದೆ. ಇದನ್ನೂ ಓದಿ: ಇಂದು ಬಿಡುಗಡೆ ಆಗಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಗೆ ತಡೆ – ಡಿಕೆಶಿ ಹೇಳಿದ್ದೇನು?
Advertisement
Advertisement
ಈ ಪ್ರದೇಶದಲ್ಲಿ ತೆಲುಗು ಮತ್ತು ಕನ್ನಡ ಭಾಷೆಗಳ ಮಧ್ಯೆ ತಾರತಮ್ಯ ಇಲ್ಲ. ಪ್ರತಿಯೊಬ್ಬರೂ ಎರಡೂ ಭಾಷೆಗಳನ್ನು ಮಾತೃಭಾಷೆಯಾಗಿ ಬಳಸುತ್ತಾರೆ. ಸ್ವಲ್ಪ ತೆಲುಗು ಪ್ರಭಾವ ಹೆಚ್ಚಾಗಿಯೇ ಇದೆ. ಗಡಿ ತಾಲೂಕು ಆದರೂ ಕೂಡ ಭಾಷೆಗಳ ನಡುವೆ ಘರ್ಷಣೆ ಇಲ್ಲ.
Advertisement
ಕಳೆದ ಹತ್ತು ಚುನಾವಣೆಗಳಲ್ಲಿ ಇಲ್ಲಿಯ ಮತದಾರರು ಒಮ್ಮೆ ಜೆಡಿಎಸ್ ಮತ್ತೊಮ್ಮೆ ಕಾಂಗ್ರೆಸ್‌ಗೆ ಗೆಲುವು ನೀಡುತ್ತಾ ಬಂದಿದ್ದಾರೆ. ಒಮ್ಮೆ ರಮೇಶ್‌ಕುಮಾರ್ ಗೆದ್ದರೆ ನಂತರ ವೆಂಕಟಶಿವಾರೆಡ್ಡಿ ಗೆಲವು ಆಗುತ್ತಿತ್ತು. ಆದರೆ ಕಳೆದ 2013 ಮತ್ತು 2018ರ ಚುನಾವಣೆಗಳಲ್ಲಿ ರಮೇಶ್ ಕುಮಾರ್ ಗೆದ್ದಿದ್ದು ಈ ಬಾರಿ ಹ್ಯಾಟ್ರಿಕ್ ಸಾಧನೆಯ ನಿರೀಕ್ಷೆಯಲ್ಲಿದ್ದಾರೆ.
ಮಾವು ಫೇಮಸ್: ನಮ್ಮ ದೇಶದಲ್ಲಿಯೇ ಅತೀ ಹೆಚ್ಚು ಮಾವನ್ನು ಶ್ರೀನಿವಾಸಪುರದಲ್ಲಿ ಬೆಳೆಯಲಾಗುತ್ತದೆ. ಇಲ್ಲಿಯ ಒಣ ಭೂಮಿಯಲ್ಲಿ ಬೆಳೆದ ಮಾವು ತುಂಬಾ ರುಚಿಕರವಾದ ಹಲವು ಮಾವುಗಳನ್ನು ಇಲ್ಲಿ ಬೆಳೆಯುತ್ತಾರೆ. ಕ್ಷೇತ್ರದ ತುಂಬಾ ಮಾವು ತೋಟಗಳನ್ನು ಕಾಣಬಹುದು. ಇದರ ಜೊತೆ ತರಕಾರಿ ಬೆಳೆಗಳನ್ನು ರೈತರು ಬೆಳೆಯುತ್ತಾರೆ.