ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಯ್ತು, ಜಮೀರ್‌ರನ್ನು (Zameer Ahmed) ಡಿಸಿಎಂ ಮಾಡಿ ಎಂದು ಜಮೀರ್ ಅಭಿಮಾನಿಯೊಬ್ಬ ಸಿದ್ದರಾಮಯ್ಯ ನಿವಾಸದ ಮುಂದೆ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ನೀಡಿದ್ದು, ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಡಿಸಿಎಂ ಪಟ್ಟವನ್ನು ನೀಡಿತ್ತು. ಆದರೆ ಡಿಕೆ ಶಿವಕುಮಾರ್ (D.K.Shivakumar) ಅವರು ತನಗೆ ಆ ಪಟ್ಟ ಬೇಡ, ಸಿಎಂ ಪಟ್ಟ ಬೇಕು ಎಂದು ಪಟ್ಟು ಹಿಡಿದಿದ್ದರು. ಹಲವು ಸುತ್ತಿನ ಸಭೆಗಳನ್ನು ನಡೆಸಿದ ಬಳಿಕ ಹೈಕಮಾಂಡ್ ಅವರ ಮನವೊಲಿಸಿದೆ. ಆದರೆ ಈಗ ಜಮೀರ್ ಅಭಿಮಾನಿಗಳು ಜಮೀರ್ ಅವರೇ ಡಿಸಿಎಂ (DCM) ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಶನಿವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪ್ರಮಾಣವಚನ
ಜಮೀರ್ ಡಿಸಿಎಂ ಆಗುತ್ತಾರೆ ಎಂದೇ ಇಡೀ ಮುಸ್ಲಿಂ ಸಮುದಾಯ ಕಾಂಗ್ರೆಸ್ (Congress) ಜೊತೆ ನಿಂತಿದೆ. ಈಗ ಡಿಸಿಎಂ ಹುದ್ದೆ ಕೊಡದೇ ಇರುವುದು ಸರಿಯಲ್ಲ. ಒಂದೊಮ್ಮೆ ಜಮೀರ್‌ಗೆ ಡಿಸಿಎಂ ಹುದ್ದೆ ಕೊಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತೇವೆ ಎಂದು ಹರಿಹರ (Harihara) ಮೂಲದ ಜಮೀರ್ ಅಹ್ಮದ್ ಅಭಿಮಾನಿ ಆಸೀಫ್ ಅಲಿ ಸಿದ್ದರಾಮಯ್ಯ ಮನೆಮುಂದೆ ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ಸಿಎಂ ಕುರ್ಚಿ ಕದನ ಅಂತ್ಯ – ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ