ಬೆಳಗಾವಿ: ಮಗ ಸೌರಭ್ ಛೋಪ್ರಾಗೆ (Saurabh Chopra) ಸವದತ್ತಿಯಲ್ಲಿ (Savadatti) ಕಾಂಗ್ರೆಸ್ (Congress) ಟಿಕೆಟ್ ಕೈ ತಪ್ಪಿದ್ದಕ್ಕಾಗಿ ತಾಯಿ ಕಾಂತಾದೇವಿ ಛೋಪ್ರಾ (Kantadevi Chopra) ಬೆಂಬಲಿಗರ ಮುಂದೆಯೇ ವೇದಿಕೆ ಮೇಲೆ ಮಂಡಿಯೂರಿ ಕಣ್ಣೀರು ಹಾಕಿದ್ದಾರೆ.
ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸೌರಭ್ ಛೋಪ್ರಾ ಹಾಗೂ ತಾಯಿ ಕಾಂತಾದೇವಿ ಛೋಪ್ರಾ ಕಣ್ಣೀರು ಹಾಕಿದ್ದಾರೆ. 2013-2018ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ತೀವ್ರ ಪೈಪೋಟಿ ಒಡ್ಡಿದ್ದ ಆನಂದ ಚೋಪ್ರಾ (Anand Chopra) ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕಳೆದ ಚುನಾವಣೆಯಲ್ಲೂ (Election) ಆನಂದ ಮಾಮನಿಗೆ ತೀವ್ರ ಪೈಪೋಟಿಯನ್ನು ಛೋಪ್ರಾ ನೀಡಿದ್ದರು. ಆನಂದ ಚೋಪ್ರಾ ಸಾವಿನ ನಂತರ ‘ಕೈ’ ಟಿಕೆಟ್ ಆಕಾಂಕ್ಷಿಯಾಗಿದ್ದ ಸೌರಭ್ ಛೋಪ್ರಾಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ನಿನ್ನೆ ಸವದತ್ತಿಯಲ್ಲಿ ಬೆಂಬಲಿಗರ ಸಭೆ ನಡೆಸಲಾಗಿತ್ತು. ಇದನ್ನೂ ಓದಿ: ಹಾಲಾಡಿ ಶ್ರೀನಿವಾಸ ಶೆಟ್ಟಿ ಒಂದು ಸಾವಿರ ಅಂತರದಿಂದ ಕೊನೆಗೆ ಲಕ್ಷ ಮತ ಪಡೆದ ರೋಚಕ ಕಥೆ!
ನನ್ನ ಗಂಡನನ್ನು ಕಳೆದುಕೊಂಡಿದ್ದೇನೆ. ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ. ನೀವೇನು ಮಾಡುತ್ತೀರಿ ನಿಮಗೆ ಬಿಟ್ಟದ್ದು ಎಂದು ಸಭೆಯಲ್ಲಿ ಕಾಂತಾದೇವಿ ಕಣ್ಣೀರು (Tears) ಹಾಕಿದ್ದಾರೆ. ಸವದತ್ತಿಯಲ್ಲಿ ಬಂಡಾಯದ ಕಹಳೆ ಊದಿದ ಸೌರಭ್ ಛೋಪ್ರಾ ಬಳಿಕ ಕಾಂತಾದೇವಿ ಮಗನಿಗಾಗಿ ಮಂಡಿಯೂರಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಸವದತ್ತಿ ಕ್ಷೇತ್ರದಲ್ಲಿ ಮತ್ತೆ ಬಂಡಾಯದ ಬೆಂಕಿ ಹೊತ್ತಿಸಿದ ಸೌರಭ್ ಚೋಪ್ರಾ