2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ

Public TV
2 Min Read
Subhash Guttedar vs BR Patel

ಕಲಬುರಗಿ: ಕಲಬುರಗಿ (kalaburagi) ಜಿಲ್ಲೆಯ 9 ವಿಧಾನಸಭೆ ಮತಕ್ಷೇತ್ರಗಳಿದ್ದು ಅದರಲ್ಲಿ ಆಳಂದ ವಿಧಾನಸಭಾ ಕ್ಷೇತ್ರ ಮಾತ್ರ ಬಹಳ ವಿಶೇಷವಾಗಿ ಗುರುತಿಸಲ್ಪುಡುತ್ತಿದೆ. ಕಳೆದ ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಸತತ ಎರಡು ಬಾರಿ ಯಾವೊಬ್ಬ ವ್ಯಕ್ತಿಯೂ ಆಯ್ಕೆಯಾಗಿಲ್ಲ.

ಈ ಕ್ಷೇತ್ರದಲ್ಲಿ 1999ರಿಂದ ಇಲ್ಲಿಯವರೆಗೆ ಸುಭಾಶ್ ಗುತ್ತೇದಾರ್ ಹಾಗೂ ಬಿ.ಆರ್.ಪಾಟೀಲ್ ಇಬ್ಬರ ನಡುವೆ ನೇರಾ ನೇರ ಹಣಾಹಣಿಯಿದ್ದು ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಮಹತ್ವ ಜಾಸ್ತಿಯಾಗಿದೆ. ಹೀಗಾಗಿ ಈ ಇಬ್ಬರು ನಾಯಕರು ಯಾವ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಆ ಎರಡು ಪಕ್ಷಗಳ‌ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.

1999 ರಲ್ಲಿ ಜನತಾದಳ(ಎಸ್) (Janata Dal) ಸುಭಾಶ್ ಗುತ್ತೇದಾರ್‌ (Subhash Guttedar) ಸ್ಪರ್ಧಿಸಿದರೆ ಇತ್ತ ಲೋಕಶಕ್ತಿಯಿಂದ ಬಿ.ಆರ್.ಪಾಟೀಲ್ (B.R Patel) ಸ್ಪರ್ಧಿಸಿದ್ದರು. ಆಗ 2 ಸಾವಿರ ಮತಗಳ ಆಸುಪಾಸಿನಲ್ಲಿ ಸುಭಾಶ್ ಗುತ್ತೇದಾರ್‌ ಜಯಗಳಿಸಿದ್ದರು. ನಂತರ 2004ರಲ್ಲಿ ಬಿ.ಆರ್.ಪಾಟಿಲ್ ಜೆಡಿಎಸ್ ನಿಂದ ಸ್ಪರ್ಧಿಸಿದ್ದರೆ ಸುಭಾಶ್ ಗುತ್ತೇದಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.‌ ಆಗ ಕೈ ಅಭ್ಯರ್ಥಿ ವಿರುದ್ಧ 17 ಸಾವಿರ ಮತಗಳ ಅಂತರದಿಂದ ಬಿ.ಆರ್.ಪಾಟೀಲ್ ಜಯಗಳಿಸಿದ್ದರು. ಇದನ್ನೂ ಓದಿ: ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

2008ರಲ್ಲಿ ಜೆಡಿಎಸ್ ನಿಂದ ಸುಭಾಶ್ ಗುತ್ತೇದಾರ್ ಸ್ಪರ್ಧೆ ಮಾಡಿದರೆ ಬಿ.ಆರ್.ಪಾಟೀಲ್‌ ಕಾಂಗ್ರೆಸ್ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಬಿ.ಆರ್.ಪಾಟೀಲ್ ವಿರುದ್ಧ ಸುಭಾಶ್ ಗುತ್ತೇದಾರ್‌ ಅವರು 4 ಸಾವಿರ ಮತಗಳಿಂದ ಜಯಗಳಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಕೆಜೆಪಿಯಿಂದ ಬಿ.ಆರ್.ಪಾಟೀಲ್ ಸ್ಪರ್ಧಿಸಿದರೆ ಜೆಡಿಎಸ್ ನಿಂದ ಸುಭಾಶ್ ಗುತ್ತೇದಾರ್‌ ಸ್ಪರ್ಧೆ ಮಾಡಿದ್ದರು. ಆಗ ಗುತ್ತೇದಾರ್‌ ವಿರುದ್ಧ ಬಿ.ಆರ್.ಪಾಟೀಲ್ ಅವರು 17 ಸಾವಿರ ಮತಗಳ‌ ಅಂತರದಿಂದ ಜಯಗಳಿಸಿದ್ದರು.

2018ರಲ್ಲಿ ಕಾಂಗ್ರೆಸ್‌ನಿಂದ (Congress) ಬಿ.ಆರ್.ಪಾಟೀಲ್ ಹಾಗೂ ಬಿಜೆಪಿಯಿಂದ (BJP) ಸುಭಾಶ್ ಗುತ್ತೇದಾರ್ ಇಬ್ಬರು ಮತ್ತೆ ಸ್ಪರ್ಧಿಸಿದ್ದಾಗ ಕೇವಲ 697 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುಭಾಶ್ ಗುತ್ತೇದಾರ್‌ ಜಯಗಳಿಸಿದ್ದರು.

ಈ ಮೂಲಕ ಕಳೆದ ಎರಡು ದಶಕಗಳಿಂದ ಈ ಇಬ್ಬರು ರಾಜಕೀಯ ಬದ್ದ ವೈರಿಗಳ ಹೋರಾಟದಲ್ಲಿ ಮತದಾರ ಪ್ರಭು ಮಾತ್ರ ಸತತ ಎರಡನೇ ಬಾರಿಗೆ ಗೆಲ್ಲಿಸಿರುವ ಉದಾಹರಣೆಯೆ ಇಲ್ಲ. ಹೀಗಾಗಿ 2023ರಲ್ಲಿ ಇದೇ ಇತಿಹಾಸ ಮುಂದುವರಿಯುತ್ತಾ? ಅಥವಾ ಇದಕ್ಕೆ ಸುಭಾಶ್ ಗುತ್ತೇದಾರ ಬ್ರೇಕ್ ಹಾಕಿ ಎರಡನೇ ಬಾರಿ ಜಯಗಳಿಸುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಭಾರತದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲಾರೆ: ವರುಣ್ ಗಾಂಧಿ

Share This Article
Leave a Comment

Leave a Reply

Your email address will not be published. Required fields are marked *