Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರೈತ ಯುವಕರನ್ನ ಮದುವೆ ಆಗೋರಿಗೆ 2 ಲಕ್ಷ ಪ್ರೋತ್ಸಾಹ ಧನ – JDS ಪ್ರಣಾಳಿಕೆ ಬಿಡುಗಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರೈತ ಯುವಕರನ್ನ ಮದುವೆ ಆಗೋರಿಗೆ 2 ಲಕ್ಷ ಪ್ರೋತ್ಸಾಹ ಧನ – JDS ಪ್ರಣಾಳಿಕೆ ಬಿಡುಗಡೆ

Bengaluru City

ರೈತ ಯುವಕರನ್ನ ಮದುವೆ ಆಗೋರಿಗೆ 2 ಲಕ್ಷ ಪ್ರೋತ್ಸಾಹ ಧನ – JDS ಪ್ರಣಾಳಿಕೆ ಬಿಡುಗಡೆ

Public TV
Last updated: April 27, 2023 6:33 pm
Public TV
Share
5 Min Read
hd kumaraswamy 7
SHARE

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಜನತಾ ಪ್ರಣಾಳಿಕೆ ಹೆಸರಿನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಪ್ರಣಾಳಿಕೆಯಲ್ಲಿ ಏನಿದೆ?: ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡಲಾಗುವುದು. ಮಾತೃಶ್ರೀ ಮತ್ತು ಗರ್ಭಿಣಿ ತಾಯಂದಿರ ಆರೈಕೆಗೆ 6 ತಿಂಗಳು 6 ಸಾವಿರ ರೂ. ಭತ್ಯೆ ನೀಡಲಾಗುವುದು. ವಿಧವಾ ವೇತನ 900 ರಿಂದ 2,500 ರೂ.ಗೆ ಹೆಚ್ಚಳವಾಗಿದೆ. ಅಂಗನವಾಡಿ ಕಾರ್ಯಕರ್ತರ ಸೇವೆ ಖಾಯಂ ಮಾಡುವುದು. ಅಂಗನವಾಡಿ ಕಾರ್ಯಕತರಿಗೆ 5 ಸಾವಿರ ರೂ. ಹೆಚ್ಚುವರಿ ವೇತನ ಪ್ರತಿ ತಿಂಗಳು ನೀಡುವುದು. 15 ವರ್ಷ ಸೇವೆ ಮಾಡಿದ ನಿವೃತ್ತಿ ಆಗುವ ಕಾರ್ಯಕರ್ತರಿಗೆ ಪಿಂಚಣಿ ವ್ಯವಸ್ಥೆ ಹಾಗೂ ಕೃಷಿ ಕಾರ್ಮಿಕ ಕುಟುಂಬಕ್ಕೆ ಪ್ರತಿ ತಿಂಗಳು 2,500 ರೂ. ಸಹಾಯ ಧನ ಮಾಡುವುದು.

JDS FLAG 1

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಪ್ರತಿ ಎಕರೆ ವಾರ್ಷಿಕ 10 ಸಾವಿರ ರೂ. ಸಹಾಯ ಧನ, ರೈತ ಯುವಕರನ್ನು ಮದುವೆ ಆಗೋರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಸಾರಿಗೆ ನೌಕರರಿಗೆ ನಗದುರಹಿತ ವೈದ್ಯಕೀಯ ಸವಲತ್ತು ನೀಡುವುದು ಹಾಗೂ ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಲಾಗುವುದು.

ನೊಂದಾಯಿತ ವಕೀಲರಿಗೆ ನ್ಯಾಯ ಕವಚ ವಿಮಾ ಯೋಜನೆ ಜಾರಿಗೊಳಿಸುವುದು, ವಕೀಲರ ಮಾಸಿಕ ಭತ್ಯೆ 2 ಸಾವಿರದಿಂದ 3 ಸಾವಿರ ರೂ. ಹೆಚ್ಚಳ ಮಾಡುವುದು. ಮುಸ್ಲಿಮರ 4% ಮೀಸಲಾತಿ ಮರು ಸ್ಥಾಪನೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆಗೆ ಬಜೆಟ್‌ನಲ್ಲಿ ಪ್ರತಿ ವರ್ಷ 5% ಮೀಸಲು ( ಬೌದ್ದ, ಪಾರ್ಸಿ, ಜೈನ, ಮುಸ್ಲಿಂ, ಸಿಖ್) ನೀಡುವುದು.

ನ್ಯಾ. ಸಾಚಾರ್ ವರದಿ ಜಾರಿಗೆ ಸಮಿತಿ ರಚನೆ ಮಾಡುವುದು, ಅಶಕ್ತ ಪುರುಷ ಮತ್ತು ಅಬಲೆಯರಿಗೆ ಸಹಾರಾ ಯೋಜನೆ ಜಾರಿಗೊಳಿಸುವುದು. ಕೋಮು ದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಕ್ಷಿಪ್ರ ವಿಚಾರಣೆಗೆ ನ್ಯಾಯಾಲಯ ಸ್ಥಾಪನೆ ಮಾಡುವುದು. ಮದರಸಾಗಳಲ್ಲಿ ಆಧುನಿಕ ಶಿಕ್ಷಣಕ್ಕೆ ಒತ್ತು ಹಾಗೂ ಬೌದ್ಧ ಚೈತ್ಯಾಲಯ, ಜೈನ ಬಸದಿ, ಮಸೀದಿ, ಚರ್ಚ್ ರಕ್ಷಣೆಗೆ ಮತ್ತು ಜೀರ್ಣೋದ್ಧಾರಕ್ಕೆ ವಿಶೇಷ ಯೋಜನೆ ನೀಡಲಾಗುವುದು.

ಎಸ್‍ಸಿ – ಎಸ್‍ಟಿ ಒಳ ಮೀಸಲಾತಿ ಜಾರಿಗೆ ನ್ಯಾ.ಸದಾಶಿವ ಅಯೋಗದ ಶಿಫಾರಸು ಯಥಾವತ್ತಾಗಿ ಅನುಷ್ಠಾನಗೊಳಿಸುವುದು. ವಸತಿ ಯೋಜನೆಯಲ್ಲಿ SC-STಗೆ 50% ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಬಗುರ್ ಹುಕ್ಕುಂ ಸಾಗುವಳಿ ಖಾಯಂ ಮಾಡಿ, ಬಡ ಉಳುಮೆದಾರರಿಗೆ ಮಂಜೂರು ಮಾಡಿ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಮಾನವ- ವನ್ಯ ಸಂಘರ್ಷದಿಂದ ನೊಂದ ಸಂತ್ರಸ್ತರಿಗೆ ಪರಿಹಾರದೊಂದಿಗೆ ಉದ್ಯೋಗ ಭದ್ರತೆ ನೀಡುವುದು. ಸರ್ಕಾರಿ ಉದ್ಯೋಗಿಗಳಿಗೆ OPS ಜಾರಿ ಪರಿಶೀಲನೆ ಮಾಡುವುದು ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಪರಾಮರ್ಶಿಸಿ ಸೂಕ್ತ ಬದಲಾವಣೆ ಮಾಡಲಾಗುವುದು. ಇದನ್ನೂ ಓದಿ: ಮೋದಿ ವಿಷದ ಹಾವು ಇದ್ದಂತೆ: ಖರ್ಗೆ

ಕನ್ನಡ ಉಳಿವಿಗೆ ಪ್ರತಿ ಆಯವ್ಯಯದಲ್ಲಿ ವಿಶೇಷ ಬಜೆಟ್ ಘೋಷಣೆ ಮಾಡಲಾಗುತ್ತೆ. ರಾಜ್ಯದ ಸಿ ವರ್ಗದ ತಸ್ತಿಕ್ ಹಣ 60 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಳ ಹಾಗೂ ಕಲಾವಿದರ ಮಾಶಾಸನ 2 ಸಾವಿರದಿಂದ 4 ಸಾವಿರ ರೂ.ಗೆ ಹೆಚ್ಚಳ ಮಾಡಲಾಗುವುದು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿಶೇಷ ಕಾಯ್ದೆ ಜಾರಿ ಮಾಡಲಾಗುವುದು. ಕೇಂದ್ರ ಸರ್ಕಾರದ ಎಲ್ಲಾ ಪರೀಕ್ಷೆ ಕನ್ನಡದಲ್ಲಿ ಬರೆಯಲು ಆದ್ಯತೆ ನೀಡಲು ಕೇಂದ್ರದ ಮೇಲೆ ಒತ್ತಾಯ ಮಾಡಲಾಗುವುದು.

ಹೈಸ್ಕೂಲ್‌ನಲ್ಲಿ ಓದುವ ಎಲ್ಲಾ ಮಕ್ಕಳಿಗೆ ಉಚಿತ ಬೈಸಿಕಲ್, ಡಿಗ್ರಿ ಕಾಲೇಜು ಓದುವ 18 ವರ್ಷ ತುಂಬಿರುವ 60 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯುತ್ ಚಾಲಿತ ಮೊಪೆಡ್ ಗಾಡಿ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಪದವಿ, ಎಂಜಿನಿಯರಿಂಗ್, ಮೆಡಿಕಲ್ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಅಂಗನವಾಡಿಗಳ ಬಲವರ್ಧನೆಗೆ ಕ್ರಮ, ಮಕ್ಕಳ ಅಪೌಷ್ಟಿಕ ನಿವಾರಣೆ ಕ್ರಮ ಕೈಗೊಳ್ಳಲಾಗುವುದು.

ದುಬಾರಿ ವೆಚ್ಚದ ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಸಿಎಂ ರಿಲೀಫ್ ಫಂಡ್‌ನಿಂದ 25 ಲಕ್ಷ ರೂ. ಪರಿಹಾರ ಧನ ಸಹಾಯ ನೀಡುವುದು.  ಆಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆ ಅಡಿ ಸೇರ್ಪಡೆಯಾಗದ ಕಾಯಿಲೆಗೂ ಪರಿಹಾರ ಹಾಗೂ ಜಿಲ್ಲೆಗೊಂದು ಜಯದೇವ ಮಾದರಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲಾಗುವುದು. ರಾಜ್ಯದಲ್ಲಿ ನಿಮ್ಹಾಮ್ಸ್ ಮಾದರಿಯಲ್ಲಿ 500 ಹಾಸಿಗೆಯುಳ್ಳ ನರರೋಗ ವೈದ್ಯಕೀಯ ಸಂಸ್ಥೆ ಸ್ಥಾಪನೆ ಮಾಡಲಾಗುವುದು. ಇದನ್ನೂ ಓದಿ: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪೈಪೋಟಿ

ಔರಾದ್ಕರ್ ವರದಿ ನ್ಯೂನತೆ ಸರಿ ಪಡಿಸಿ ಪೊಲೀಸರಿಗೆ ವೇತನ ಸೌಲಭ್ಯಗಳು ಜಾರಿ ಮಾಡಲಾಗುವುದು. KSFC ಪ್ರಸ್ತುತ ಶೇ. 4 ರಷ್ಟು ಬಡ್ಡಿ ವಿಧಿಸುತ್ತಿದ್ದು, ಇದಕ್ಕೆ ಇನ್ನಷ್ಟು ಸಬ್ಸಿಡಿ ನೀಡಿ SC-ST ಉದ್ದಿಮೆದಾರರಿಗೆ ಬಡ್ಡಿದರವನ್ನು 4% ನಿಂದ 2% ಗೆ ಇಳಿಸುವುದು. SC-ST ಉದ್ದಿಮೆದಾರರು/ ಗುತ್ತಿಗೆದಾರರಿಗೆ 2% ಬಡ್ಡಿ ದರದಲ್ಲಿ 5 ಕೋಟಿ ಬಂಡವಾಳ ಒದಗಿಸುವುದು.

ಒಂದು ವರ್ಷದ ಕೌಶಲ್ಯ ತರಬೇತಿಯಲ್ಲಿ ತೊಡಗಿಸಿಕೊಳ್ಳುವ ಯುವಕ-ಯುವತಿಯರಿಗೆ ಮಾಸಿಕ 8000 ರೂ. ಭತ್ಯೆ ನೀಡಲಾಗುವುದು. ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮ ವಲಯಗಳಲ್ಲಿ ತೊಡಗಿಸಿಕೊಳ್ಳುವ ಯುವಕ-ಯುವತಿಯರಿಗೆ 10 ಲಕ್ಷ ರೂ. ಆರ್ಥಿಕ ನೆರವು ಹಾಗೂ ತರಬೇತಿ ಮತ್ತು ಸೇವೆಗಳನ್ನು ಒದಗಿಸುವ ನಿರುದ್ಯೋಗ ಯುವಕರಿಗೆ 3 ಲಕ್ಷ ರೂ. ಸಹಾಯ ಧನ ನೀಡುವುದು. ಸಣ್ಣ ಉದ್ಯಮವಾಗಿ ವ್ಯಾಪಾರ-ವಹಿವಾಟು ನಡೆಸುವವರಿಗೆ 2 ಲಕ್ಷ ರೂ. ಸಹಾಯಧನ ಹಾಗೂ ಸಣ್ಣ ಉದ್ಯಮ ನಡೆಸುವ ಮಹಿಳಾ ಉದ್ಯಮಿಗಳಿಗೆ ಭದ್ರತೆ ರಹಿತ 2 ಕೋಟಿ ರೂ.ವರೆಗೂ ಬ್ಯಾಂಕ್ ಮುಖೇನ ಸಾಲ ನೀಡಲಾಗುವುದು.

ಸಕ್ಕರೆ ನಾಡು ಮಂಡ್ಯದ ಮೈಶುಗರ್ ಕಾರ್ಖಾನೆ ಸ್ಥಳದಲ್ಲಿ 1,000 ಕೋಟಿ ರೂ. ಅಂದಾಜು ಮೊತ್ತದಲ್ಲಿ ಹೊಸ ಮೈಶುಗರ್ ಕಾರ್ಖಾನೆ ಸ್ಥಾಪನೆ ಹಾಗೂ ಕಿತ್ತೂರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಚರ್ಮೋದ್ಯಮದ ಒಂದು ಕ್ಲಸ್ಟರ್‌ನ್ನು 1,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪನೆ ಮಾಡಲಾಗುವುದು. ಚಿನ್ನದ ಗಣಿನಾಡು ಕೋಲಾರ ಜಿಲ್ಲೆ ತರಕಾರಿ – ಹಣ್ಣು ಹಂಪಲು ತವರೂರು. ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಟೊಮೆಟೊ ಬೆಳೆ ಸಂಸ್ಕರಣೆಗೆ 1,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕ್ಲಸ್ಟರ್ ಸ್ಥಾಪನೆ ಮಾಡಲಾಗುವುದು.

ರೇಷ್ಮೆ ನಾಡುಗಳಾದ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,000 ಕೋಟಿ ರೂ. ಅಂದಾಜು ಮೊತ್ತದಲ್ಲಿ ರೇಷ್ಮೆ ಕ್ಲಸ್ಟರ್‌ಗಳ ಸ್ಥಾಪನೆ ಮಾಡಲಾಗುವುದು. ಇನ್ನುಳಿದ 15 ಜಿಲ್ಲೆಗಳಲ್ಲಿನ ಕೃಷಿ ಬೆಳೆ ಮತ್ತು ಉದ್ಯಮ ಆಧರಿತ ಉದ್ಯಮಗಳನ್ನು 5,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಮುಂದಿನ ವರ್ಷಗಳಲ್ಲಿ ಸ್ಥಾಪಿಸಲಾಗುವುದು. 2003ರ ನಗರಸಭೆ ಕಾಯಿದೆ ಅನ್ವಯ. ರಾಜ್ಯದಲ್ಲಿರುವ ಪ್ರಮುಖ ಕೈಗಾರಿಕೆ ಅಭಿವೃದ್ಧಿ ಕೇಂದ್ರಗಳಲ್ಲಿ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡಲಾಗುವುದು.

ರಾಜ್ಯದಲ್ಲಿರುವ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಟ್ರಕ್ ಟರ್ಮಿನಲ್ ಅಭಿವೃದ್ಧಿ ಮತ್ತು ಕೈಗಾರಿಕಾ ತ್ಯಾಜ್ಯ ವಿಂಗಡಣೆ, ವಿಲೇವಾರಿ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಜಮೀನನ್ನು ಮೀಸಲು ಇಡಲಾಗುವುದು. ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಉದ್ಯಮ, ಕೈಗಾರಿಕಾ ಯೋಜನೆ ಅನುಮೋದನೆ ಉಪಸಮಿತಿ ಮತ್ತು ಏಕ ಗವಾಕ್ಷಿಸಮಿತಿಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ಒದಗಿಸಲಾಗುವುದು.

ಮೈಸೂರು ಸೋಪ್ಸ್ ಅಂಡ್ ಡಿಟಜೆರ್ಂಟ್ ಲಿಮಿಟೆಡ್ ನ್ನು ಪುನಶ್ವೇತನಗೊಳಿಸುವ ಯೋಜನೆಯಲ್ಲಿ ಎರಡು ಜಿಲ್ಲೆಗಳಲ್ಲಿ ವಿಸ್ತರಣಾ ಘಟಕಗಳನ್ನು ಸ್ಥಾಪಿಸುವುದು ಮತ್ತು ದೇಶ ವಿದೇಶಗಳಲ್ಲಿ ಮೈಸೂರು ಸೋಪ್ಸ್ ಅಂಡ್ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜನೆಗಳನ್ನು ರೂಪಿಸಲಾಗುವುದು. ವಿಮಾನಯಾನ ಉದ್ಯಮಕ್ಕೆ ಏರ್ ಬಸ್ – 320 ಒಳಗೊಂಡಂತೆ ಪೂರಕವಾದ ದುರಸ್ತಿ ಮತ್ತು ನಿರ್ವಹಣೆ ಘಟಕಗಳನ್ನು ಹಾಸನದಲ್ಲಿ ಸ್ಥಾಪಿಸಲಾಗುವುದು.

TAGGED:hd kumaraswamyjdsKarnataka Electionಕರ್ನಾಟಕ ಚುನಾವಣೆಜೆಡಿಎಸ್ಪ್ರಣಾಳಿಕೆ
Share This Article
Facebook Whatsapp Whatsapp Telegram

Cinema news

BBK12 Kavya Shaiva congratulates Bigg Boss winner Gilli Nata
ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ – ಗಿಲ್ಲಿಯನ್ನು ಅಭಿನಂದಿಸಿದ ಕಾವ್ಯ
Cinema Latest Main Post TV Shows
AR Rahman 2
ರೆಹಮಾನ್ ಕೋಮುರಾಗ – ಪುತ್ರಿಯರ ಬೆಂಬಲ
Cinema Latest Top Stories
ashwini gowda gilli nata
ಗಿಲ್ಲಿ ನಿಜವಾದ ಬಡವ ಅಲ್ಲ, ಬಡವನ ಥರ ಗೆಟಪ್‌ ಹಾಕ್ಕೊಂಡು ಗೆದ್ದಿದ್ದಾರೆ: ಅಶ್ವಿನಿ ಗೌಡ
Cinema Latest Main Post TV Shows
ashwini gowda 1
ನಾನು ವಿನ್ನರ್‌ ಆಗುವ ನಿರೀಕ್ಷೆ ಹೆಚ್ಚಿತ್ತು: 2ನೇ ರನ್ನರ್‌ ಅಪ್‌ ಅಶ್ವಿನಿ ಗೌಡ ರಿಯಾಕ್ಷನ್‌
Cinema Latest Main Post TV Shows

You Might Also Like

budget 2026 tax
Latest

Budget 2026 income tax expectations: ಹೊಸ ತೆರಿಗೆ ಪದ್ಧತಿ ಮತ್ತಷ್ಟು ಲಾಭದಾಯಕವಾಗುತ್ತಾ?

Public TV
By Public TV
4 hours ago
RCB Women vs Gujarat Giants Women won by 61 runs RCB QUALIFY FOR THE PLAYOFFS
Cricket

ಗುಜರಾತ್‌ ವಿರುದ್ಧ 61 ರನ್‌ಗಳ ಭರ್ಜರಿ ಜಯ – ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ

Public TV
By Public TV
4 hours ago
Nitin Nabin
Latest

ಹೊಸ ತಲೆಮಾರಿನತ್ತ ಹೆಜ್ಜೆ ಹಾಕಿದ ಬಿಜೆಪಿ – 45 ವರ್ಷಕ್ಕೆ ನಿತಿನ್ ನಬಿನ್‌ಗೆ ಅಧ್ಯಕ್ಷ ಪಟ್ಟ

Public TV
By Public TV
6 hours ago
DGP Ramachandra Rao
Karnataka

ರಾಸಲೀಲೆ ವಿಡಿಯೋ ವೈರಲ್ – ರಾಮಚಂದ್ರ ರಾವ್‌ಗೆ 10 ದಿನಗಳ ಕಡ್ಡಾಯ ರಜೆ

Public TV
By Public TV
6 hours ago
SSLC Exams
Bengaluru City

SSLC ಪ್ರಶ್ನೆಪತ್ರಿಕೆಗೆ ಸಿಗುತ್ತಾ ಆಯ್ಕೆ?

Public TV
By Public TV
7 hours ago
UAE President Zayed Al Nahyan and PM Narendra Modi
Latest

ಜಸ್ಟ್‌ 2 ಗಂಟೆಗಳ ಭೇಟಿ – ಭಾರತಕ್ಕೆ ಯುಎಇ ಅಧ್ಯಕ್ಷರು ಬಂದಿದ್ದು ಯಾಕೆ?

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?