ಬೆಂಗಳೂರು: ಸಮಾಜದಲ್ಲಿ ಸಮಾನತೆ ಕೊಡುವುದು ಕಾಂಗ್ರೆಸ್ (Congress) ಪಕ್ಷದ ನಿಲುವು. ನಮ್ಮ ಪಕ್ಷಕ್ಕೆ ಸೇರಿದವರು ನಮ್ಮ ಧ್ಯೇಯೋದ್ದೇಶಗಳನ್ನು ಒಪ್ಪಿಕೊಳ್ಳುತ್ತಾರೆ. ಯಾಕೆಂದರೆ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಆ ರೀತಿಯಾಗಿವೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ (G.Parameshwar) ಹೇಳಿದರು.
ಬೆಂಗಳೂರಿನಲ್ಲಿ (Bengaluru) ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಶೆಟ್ಟರ್ ಆಗಮನ ನಮಗೆ ಉತ್ತರ ಕರ್ನಾಟಕ ಭಾಗದಲ್ಲಿ ಸಹಾಯವಾಗುತ್ತದೆ. ಏಕೆಂದರೆ ಶೆಟ್ಟರ್ ಒಬ್ಬ ಹಿರಿಯ ರಾಜಕಾರಣಿ ಹಾಗೂ ಬಹಳಷ್ಟು ಅನುಭವವುಳ್ಳವರು. ಅವರು ನಮ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇಲ್ಲ, ವ್ಯಕ್ತಿ ನಿಷ್ಠೆಯಿದೆ – ಜೋಷಿ ವಿರುದ್ಧ ಶೆಟ್ಟರ್ ಕಿಡಿ
Advertisement
Advertisement
ಅಖಂಡ ಶ್ರೀನಿವಾಸ್ ಮೂರ್ತಿ (Akhanda Srinivas Murthy) ಟಿಕೆಟ್ ಮಿಸ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಅಧ್ಯಕ್ಷರು ಫೈನಲ್ ಮಾಡುತ್ತಾರೆ. ಪುಲಕೇಶಿನಗರದ ಬಗ್ಗೆ ಚರ್ಚೆ ಏನಾಗಿದೆ ಎಂದು ಗೊತ್ತಿಲ್ಲ. ರಾಜ್ಯ ಸಮಿತಿಗೆ ನಾವು ಅಖಂಡ ಅವರ ಹೆಸರು ಕಳುಹಿಸಿದ್ದೆವು. ಆದರೆ ಹೈಕಮಾಂಡ್ (High Command) ಯಾವ ನಿರ್ಧಾರ ಮಾಡುತ್ತಾರೆ ಎಂದು ಗೊತ್ತಿಲ್ಲ. ಮಂಗಳವಾರ ಟಿಕೆಟ್ ಫೈನಲ್ ಮಾಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ : ಶೆಟ್ಟರ್ ನೇರ ಆರೋಪ
Advertisement
ಅಲ್ಪಸಂಖ್ಯಾತರ ವಿರೋಧ ಇರುವುದಕ್ಕೆ ಟಿಕೆಟ್ ಮಿಸ್ ಆಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಪುಲಕೇಶಿನಗರಕ್ಕೆ ನನ್ನ ಬೆಂಬಲಿಗರಿಗೆ ಟಿಕೆಟ್ ಕೊಡಬೇಕು ಎಂದು ನಾನು ಕೇಳಿಲ್ಲ. ನಮ್ಮ ಪ್ಯಾನಲ್‌ನಲ್ಲಿ ಅಖಂಡ ಅವರ ಹೆಸರು ಕಳುಹಿಸಿದ್ದೇವೆ. ಮುಂದಿನದ್ದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮಂಡ್ಯದಿಂದ ನಾನು ಸ್ಪರ್ಧೆ ಮಾಡಲ್ಲ: ಹೆಚ್‍ಡಿಕೆ
Advertisement
ಕಾಂಗ್ರೆಸ್‌ಭವನ ಉದ್ಘಾಟನೆಗೆ ಗೈರಾದ ವಿಚಾರದ ಕುರಿತು ಮಾತನಾಡಿದ ಅವರು, ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇರಲಿಲ್ಲ. ನಾನು ಉದ್ಘಾಟನೆಗೆ ಬರುವ ಸಲುವಾಗಿ ಅರ್ಧ ದಾರಿಗೆ ಹೊರಟಿದ್ದೆ. ನಮ್ಮ ಕ್ಷೇತ್ರದಲ್ಲಿ ಅಪಘಾತವಾಗಿತ್ತು. ಈ ಕಾರಣದಿಂದ ಬರಲಾರದೆ ವಾಪಸ್ ತೆರಳಿದೆ. ಭವನದ ಕೆಲಸವನ್ನು 80% ನಾನೇ ಮುಗಿಸಿದ್ದೆ. ಅದಕ್ಕೆ ಬೇರೆ ಅರ್ಥ ಬೇಡ. ಕೋಲಾರ (Kolar) ಸಮಾವೇಶಕ್ಕೆ ಬರುವುದಿಲ್ಲ ಎಂದು ಮೊದಲೇ ಹೇಳಿದ್ದೆ. ನಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಬೇಕು, ಅದಕ್ಕಾಗಿ ಬರಲಾಗುವುದಿಲ್ಲ ಎಂದು ಮೊದಲೇ ಹೇಳಿದ್ದೆ ಎಂದರು. ಇದನ್ನೂ ಓದಿ: ಅಪ್ಪ JDS, ಮಗ BJPಗೆ ಬೆಂಬಲ – ಮತದಾರ, ಕಾರ್ಯಕರ್ತರಲ್ಲಿ ಗೊಂದಲ
ಕಾಂಗ್ರೆಸ್ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಣಾಳಿಕೆ ರೆಡಿ ಆಗಿದೆ. ಫೈನಲ್ ಚರ್ಚೆಯ ಹಂತದಲ್ಲಿದೆ. ಚರ್ಚೆ ಮುಗಿದ ತಕ್ಷಣ ಪ್ರಣಾಳಿಕೆ ಬಿಡುಗಡೆ ಆಗುತ್ತದೆ ಎಂದರು. ಅಲ್ಲದೇ ಕಾಂಗ್ರೆಸ್ ಕೊನೆ ಪಟ್ಟಿ ಅಧ್ಯಕ್ಷರು ಚರ್ಚೆ ಮಾಡುತ್ತಿದ್ದಾರೆ. ಅದಕ್ಕೆ ಫೈನಲ್ ಟಚ್ ಕೊಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಕೊರೊನಾ