ರಾಜೀನಾಮೆ ವದಂತಿಗೆ ಜಗದೀಶ್ ಶೆಟ್ಟರ್ ಸ್ಪಷ್ಟನೆ

Public TV
1 Min Read
jagadish shettar

ಬೆಂಗಳೂರು/ಹುಬ್ಬಳ್ಳಿ: ಚುನಾವಣಾ (Election) ರಾಜಕೀಯದಿಂದ ಕೆ.ಎಸ್ ಈಶ್ವರಪ್ಪ (K.S.Eshwarappa) ದೂರ ಸರಿದ ಬೆನ್ನಲ್ಲೇ ಇತ್ತ ಜಗದೀಶ್ ಶೆಟ್ಟರ್ (Jagadish Shettar) ಕೂಡ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಸ್ವತಃ ಶೆಟ್ಟರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅದು ನನ್ನ ರಾಜೀನಾಮೆ (Resignation) ಲೆಟರ್ ಅಲ್ಲಾ, ಅದು ಫೇಕ್ ಆಗಿದೆ. ನಾನು ಯಾವುದೇ ರಾಜೀನಾಮೆ ನೀಡಿಲ್ಲ. ನಾನು ರಾಜೀನಾಮೆ ಪತ್ರ ಬರೆದಿಲ್ಲ, ಅದರ ಬಗ್ಗೆ ಯಾವುದೇ ಚಿಂತನೆ ಸಹ ಮಾಡಿಲ್ಲ. ರಾಜೀನಾಮೆ ಲೆಟರ್ ಇಂಗ್ಲಿಷ್ ನಲ್ಲಿ ಬರೆಯುತ್ತಾರೆ. ಅದು ಕನ್ನಡದಲ್ಲಿದೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ. ಇಂತಹ ನೂರಾರು ಫೇಕ್ (Fake) ಪತ್ರ ಬರುತ್ತಿರುತ್ತವೆ. ಹೀಗಾಗಿ ಯಾವುದೇ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜನ ನನ್ನನ್ನು ತೇಲು ಅಂದ್ರೆ ತೇಲುತ್ತೇನೆ, ಮುಳುಗು ಅಂದ್ರೆ ಮುಳುಗುತ್ತೇನೆ: ಸವದಿ 

bjp flag e1665156864461

ಫೇಕ್ ಪತ್ರದಲ್ಲೇನಿದೆ..? ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P.Nadda) ಅವರಿಗೆ ಪತ್ರ ಬರೆದಿರುವ ಅವರು, ಪ್ರಸ್ತುತ ನಡೆಯುತ್ತಿರುವ ಹಲವಾರು ಬೆಳವಣಿಗೆಗಳಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದ್ದು, ಬಿಜೆಪಿ (BJP) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಇದನ್ನೂ ಓದಿ: ಟಿಕೆಟ್ ನೀಡದಿದ್ರೂ ಸ್ಪರ್ಧೆ, 10 ವರ್ಷ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್ 

ಕಳೆದ ನಾಲ್ಕು ದಶಕಗಳಿಂದ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿವರೆಗೆ ನನ್ನ ಪ್ರಾಮಾಣಿಕ ಶ್ರಮದ ಬಗ್ಗೆ ತೃಪ್ತಿ ಇದೆ ಎಂದು ಬರೆಯಲಾಗಿದೆ. ಇದೀಗ ಶೆಟ್ಟರ್ ಸ್ಪಷ್ಟನೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಶಕ್ತಿ ಇಲ್ಲದಾಗ ಸಂಘಟನೆ ಮಾಡಿದವ್ರಲ್ಲಿ ಈಶ್ವರಪ್ಪ ಪ್ರಮುಖರು: ಹೆಚ್‍ಡಿಕೆ

Share This Article