ಹುಬ್ಬಳ್ಳಿ: ನಾನು ಕಾಂಗ್ರೆಸ್ (Congress) ಪಾರ್ಟಿ ಸೇರಿದ್ದು ಒಳ್ಳೆಯ ನಿರ್ಧಾರ ಅಂತ ಜನ ಹೇಳುತ್ತಿದ್ದಾರೆ. ಯಾವುದೇ ಪಕ್ಷಕ್ಕೆ ಪಕ್ಷ ಮತ್ತು ವ್ಯಕ್ತಿ ಬೇಕು. ನಾನು ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಬಗ್ಗೆ ಜನರಿಗೆ ಮನವೊಲಿಸಲು ಮುಂದಾಗಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ನಾನು 70 ವರ್ಷದ ಮೇಲೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಆದರೆ ಸಕ್ರಿಯ ರಾಜಕೀಯದಲ್ಲಿರುತ್ತೇನೆ. ಆದರೆ ಯಾವುದೇ ಮಾದರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh Shettar) ಹೇಳಿದರು.
Advertisement
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆಯಾದ ಮೇಲೆ ಸ್ಥಳೀಯ ನಾಯಕರು ನನಗೆ ಶಕ್ತಿ ತುಂಬವ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಸಹ ನನಗೆ ಬೆಂಬಲ ನೀಡಿದ್ದಾರೆ. ಕೊಪ್ಪಳ, ವಿಜಯಪುರ, ಸಿಂದಗಿ, ಹಾವೇರಿ, ಹಾನಗಲ್ಲನಲ್ಲಿ ನಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಾನೆ. ಎಲ್ಲಾ ಕಡೆ ಕಾಂಗ್ರೆಸ್‍ಗೆ ದೊಡ್ಡ ಬೆಂಬಲ ಸಿಗುತ್ತಿದೆ. ನಾನು ಕಳೆದ ಬಾರಿ ಮಾಡಿದ ಚುನಾವಣೆಗಿಂತ ಈ ಬಾರಿ ಜಾಸ್ತಿಯಾಗುತ್ತಿದೆ ಎಂದರು.
Advertisement
Advertisement
ದಿನದಿಂದ ದಿನಕ್ಕೆ ಜನರು ಮೇಲೆ ಒಲವು ತೋರಿಸುತ್ತಿದ್ದಾರೆ. ಎಲ್ಲಾ ಕಡೆ ಜನಸ್ಪಂದನ ಸೀಗುತ್ತಿದೆ. ಬಿಜೆಪಿ (BJP) ಯಲ್ಲಿ ಇದ್ದ ಗೌರವ, ಬೆಂಬಲ, ಪ್ರೀತಿ ಈಗ ಕಾಂಗ್ರೆಸ್ ಬಂದ ಮೇಲೂ ಸಿಗುತ್ತಿದೆ. ಆರು ಚುನಾವಣೆಗಿಂದ ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಆರಿಸಿ ಬರುತ್ತೇನೆ. ನಾನು ಕಾಂಗ್ರೆಸ್ ಸೇರಿದ ಮೇಲೆ ಬಿಜೆಪಿ ಚಿಂತೆಗೀಡಾಗಿದೆ. ಷಡ್ಯಂತ್ರ, ಕುತಂತ್ರದಿಂದ ಜಗದೀಶ್ ಶೆಟ್ಟರ್ ಸೋಲಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement
ಬಿಜೆಪಿ ಅಭ್ಯರ್ಥಿ ಜನಪರವಾಗಿಲ್ಲ, ಜನರ ಸುಖ ದುಃಖದಲ್ಲಿ ಭಾಗಿಲ್ಲ. ಕೆಲವೊಬ್ಬರು ಜಗದೀಶ್ ಶೆಟ್ಟರ್ ಸೋಲಿಸಿ ಖುಷಿಪಡಬೇಕು ಎಂದುಕೊಂಡಿದ್ದಾರೆ. ಆದರೆ ಅವರು ಕನಸು ನನಸಾಗಲ್ಲ ಎಂದ ಅವರು ಇದೇ ವೇಳೆ ಬಿಎಲ್ ಸಂತೋಷ್ ಹರಿಹಾಯ್ದು, ಲಿಂಗಾಯತ ನಾಯಕರನ್ನು ಮುಗಿಸುವ ತಂತ್ರ ಮತ್ತೆ ಮುಂದುವರಿಯುತ್ತಿದೆ. ಯಡಿಯೂರಪ್ಪ (BS Yediyurappa) ರನ್ನು ಯಾರ ಕಾರಣಕ್ಕೆ ಅಧಿಕಾರದಿಂದ ಕೇಳಗಿಳಿಸಿದ್ರಿ. ವಯಸ್ಸಾದ್ರೂ ಅವರಿಂದ ಈ ಚುನಾವಣೆಯಲ್ಲಿ ಉಪಯೋಗ ತೆಗೆದುಕೊಳ್ಳುತ್ತಿದ್ದೀರಿ. ಬಿಎಲ್ ಸಂತೋಷ್‍ರಿಂದ ಬಲಾಢ್ಯ ಮತ್ತು ಹಿರಿಯ ನಾಯಕರನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ನನ್ನ ಗುರಿ ಏಳನೇ ಬಾರಿ ಆರಸಿ ಬಂದು ಹುಬ್ಬಳ್ಳಿ ಅಭಿವೃದ್ಧಿ ಮಾಡಬೇಕು. ಜನರಿಂದ ಅತೀ ಹೆಚ್ಚು ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಅತೀ ಹೆಚ್ಚು ಲೀಡ್ ನಿಂದ ಗೆಲ್ಲುತ್ತೇನೆ. ಕೆಲವರು ನಾನು ಸೋಲುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ
ನನಗೆ ಕಾಂಗ್ರೆಸ್‍ನಲ್ಲಿ ಸಿಎಂ ಆಗುವ ದೊಡ್ಡ ಕನಸು ಇಲ್ಲ. ನೀವು ಏನೇ ಇಮ್ಯಾಜಿನೇಷನ್ ಮಾಡಿಕೊಳ್ಳಬೇಡಿ. ನಾನು ಬಿಜೆಪಿಯಲ್ಲಿದ್ದಾಗಲೇ ಸಿಎಂ ಆಸೆ ಕಂಡಿಲ್ಲ. ಈಗ ಕಾಂಗ್ರೆಸ್ ಯಾಕೆ ಕಾಣಲಿ, ಇಲ್ಲಿ ನಾನು ಸಾಮಾನ್ಯ ಕಾರ್ಯಕರ್ತ. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ನಾನು ಐಟಿ (Income Tax) ಇಡಿ ದಾಳಿಗೆ ಬೆದರುವುದಿಲ್ಲ. ನಾನೇನು ಹತ್ತಾರು ಸಾವಿರ ಕೋಟಿ ಆಸ್ತಿ ಮಾಡಿಲ್ಲ. ಪರೋಕ್ಷವಾಗಿ ಕೆಲವರು ಭಯಪಡಿಸಿದರು. ಆದರೆ ನಾನು ಯಾರಿಗೂ ಹೆದರುವುದಿಲ್ಲ. ಆದರೆ ನನ್ನ ಆಪ್ತರು ಭಯಪಡಿಸುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.