ಹಾಸನ: ನಮ್ಮ ನಾಯಕರು ಈ ಬಾರಿಯ ಚುನಾವಣೆಯಲ್ಲಿ (Election) ಒಂದು ಲಕ್ಷ ಮತ ಪಡೆದು ಗೆಲ್ಲಬೇಕು ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಗುರಿ ನಿಶ್ಚಯವಾಗಿದೆ. ದಾರಿ ಸೊಗಸಾಗಿದೆ. ಆ ನಿಟ್ಟಿನಲ್ಲಿ ಸಾಗುವೆ ಎಂದು ಶಾಸಕ ಪ್ರೀತಂ ಗೌಡ (Preetham Gowda) ಹೇಳಿದ್ದಾರೆ.
ಹಾಸನದಲ್ಲಿ (Hassan) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸಬೇಕೆಂಬುದು ಜನರ ಹಾಗೂ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಕಾರ್ಯಕರ್ತ ನಾನೇ ಮತದಾರ ಎಂದು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಏನಾದರೂ ಆಕ್ಷೇಪ ಇದ್ದರೆ ಈಗಲೇ ಇವಿಎಂ (EVM) ಚೆಕ್ ಮಾಡಿಕೊಳ್ಳಲಿ. ಅಲ್ಲದೇ ಕೋವಿಡ್ ಸಂದರ್ಭ ಸೇರಿದಂತೆ ಎಲ್ಲಾ ಹಂತದಲ್ಲೂ ನಮ್ಮ ಶಾಸಕರು ಎಂಬ ಭಾವನೆಯಿಂದ ಎಲ್ಲರೂ ಸೇರಿ ಕೆಲಸ ಮಾಡಿ ಅಭಿವೃದ್ಧಿ ಮಾಡಿದ್ದಾರೆ. ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ
Advertisement
Advertisement
ಜೆಡಿಎಸ್ (JDS) ಅಭ್ಯರ್ಥಿ ಕಿತ್ತಾಟ ನಿಮಗೆ ಪ್ಲಸ್ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೇ ಅಭ್ಯರ್ಥಿಯಾದರೂ ಪ್ರೀತಂ ಗೌಡ ಒಂದು ಲಕ್ಷ ಮತ ಪಡೆಯಬೇಕು ಎಂದು ಜನತೆ ಸಂಕಲ್ಪ ಮಾಡಿದ್ದಾರೆ. ನನಗೆ ನನ್ನದೇ ಆದ ಬಳಗವಿದೆ. ವೋಟು ಹಾಕಿಸುವ ಶಕ್ತಿ ಇದೆ. ನಾನು ವಿಪಕ್ಷಗಳ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಐವತ್ತು ಸಾವಿರ ಲೀಡ್‌ನಿಂದ ಗೆಲ್ಲುವೆ ಎಂದು ಹದಿನೆಂಟು ತಿಂಗಳ ಹಿಂದೆ ಹೇಳಿದ್ದೆ. ಆಗಲೇ ಉತ್ತರ ಕೊಟ್ಟಿದ್ದರೆ ಅಸ್ತಿತ್ವ ಇರುತ್ತಿತ್ತು. ಈಗ ಸಮಯ ಮೀರಿದೆ. ಆದರೆ ನನ್ನ ಹೇಳಿಕೆಗೆ ಈಗಲೂ, ಮುಂದೆಯೂ ಬದ್ಧವಾಗಿರುತ್ತೇನೆ ಎಂದು ಹೇಳಿದರು.
Advertisement
ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಹಿರಿಯರು. ಅವರಿಗೆ ಶಕ್ತಿ ಇಲ್ಲ ಎನ್ನುವುದಿಲ್ಲ. ಇಡೀ ರಾಜ್ಯದಲ್ಲಿ ಜೆಡಿಎಸ್ ಎಂಪಿ (MP) ಚುನಾವಣೆಯಲ್ಲಿ ಸೋತಾಗ ಹಾಸನದಲ್ಲಿ ಗೆಲ್ಲಿಸಿದರು. ಅವರು ಜಿಲ್ಲೆಯ ಜೆಡಿಎಸ್ ಶಕ್ತಿ. ಆ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಹಾಸನ ಕ್ಷೇತ್ರದಲ್ಲಿ ನನ್ನ ಶಕ್ತಿ ಇದೆ. ಆದರೆ ರೇವಣ್ಣನವರ ಆಶೀರ್ವಾದ ಇಲ್ಲದೆ ಹಾಸನ ಅಭ್ಯರ್ಥಿ ಡೆಪಾಸಿಟ್ ಪಡೆಯಲು ಸಾಧ್ಯವಿಲ್ಲ. ರೇವಣ್ಣ ಒಂದು ಶಕ್ತಿ. ಅವರ ಮುಖ ನೋಡಿಯೇ ಜನ ವೋಟ್ ಹಾಕೋದು. ಅವರ ಧೋರಣೆ ಒಪ್ಪದಿರಬಹುದು ಆದರೆ ಅವರಲ್ಲಿ ಶಕ್ತಿ ಇದೆ ಎಂದು ರೇವಣ್ಣ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ: ಡಿಕೆಶಿ ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ – ಅಶ್ವಥ್ ನಾರಾಯಣ್
Advertisement
ಹೊಳೆನರಸೀಪುರದಲ್ಲಿ ದೇವೇಗೌಡರ (H.D.Deve Gowda) ಕುಟುಂಬ ಹಾಗೂ ಹಾಸನದಲ್ಲಿ ಹೆಚ್.ಎಸ್.ಪ್ರಕಾಶ್ (H.S.Prakash) ಅವರ ಕುಟುಂಬದ ಹಿಡಿತದಲ್ಲೇ ಎಲ್ಲವೂ ನಡೆಯುತ್ತಿತ್ತು. ಈಗ ಜನ ಸಾಮಾನ್ಯ ಕುಟುಂಬದ ಪ್ರೀತಂ ಅವರನ್ನು ಬೆಂಬಲಿಸಿ ಬದಲಾವಣೆ ತರಬೇಕು ಎಂದು ಜನ ಬಯಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳ ಟಿಕೆಟ್ ನೀಡುವಾಗ ವರಿಷ್ಠರು ನನ್ನ ಫೀಡ್‌ಬ್ಯಾಕ್ (Feedback) ಕೇಳಿದ್ದರು. ಈಗ ಹೋರಾಟ ಮಾಡುತ್ತೇವೆ. ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆದ್ದು ನಾನೇ ಮೊದಲಾಗುತ್ತೇನೆ. ಎರಡನೇ ಸ್ಥಾನಕ್ಕೆ ಜೆಡಿಎಸ್-ಕಾಂಗ್ರೆಸ್ (Congress) ಪೈಪೋಟಿ ನಡೆಸಬೇಕು ಎಂದರು.
ನಾನು ಐದು ದಿನ ರಾಜ್ಯದ ವಿವಿಧೆಡೆ ಪ್ರವಾಸ ಮಾಡಿ ಮೂರು ದಿನ ಜಿಲ್ಲೆಯಲ್ಲಿ ಸುತ್ತಾಡುತ್ತೇನೆ. ಉಳಿದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿಯವರು (Narendra Modi) ಹಾಸನಕ್ಕೆ ಬರುವ ವಿಶ್ವಾಸವಿದೆ. ಪ್ರೀತಂ ಸಚಿವರಾಗಬೇಕು, ಅವರಿಗೆ ಮತ ಹಾಕುತ್ತೇವೆ ಎಂದು ಜನರು ಹೇಳುವುದಕ್ಕೆ ನನ್ನ ಸಹಮತವಿದೆ. ನಾನೇನು ಸನ್ಯಾಸಿಯಲ್ಲ. ಕಾರ್ಯಕರ್ತರ ಬಯಕೆ ತಪ್ಪಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಡೂರು ಕ್ಷೇತ್ರದಿಂದ ವೈಎಸ್‌ವಿ ದತ್ತ ಸ್ಪರ್ಧೆ: ರೇವಣ್ಣ ಘೋಷಣೆ
ಶುಕ್ರವಾರ ಹಾಸನದಲ್ಲಿ ನಾಮಪತ್ರ (Nomination Papers) ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ರ‍್ಯಾಲಿ (Rally) ಹೊರಡಲಿದ್ದು, ಸಾಲಗಾಮೆ ರಸ್ತೆ, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ, ಎನ್‌ಆರ್ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ. ಪಕ್ಷ ಎರಡನೇ ಬಾರಿಗೆ ಶಾಸಕರಾಗಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾವೆಲ್ಲರೂ ಬೃಹತ್ ರ‍್ಯಾಲಿ ಮೂಲಕ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ. ರ‍್ಯಾಲಿಯ ಮತ್ತೊಂದು ವಿಶೇಷವೆಂದರೆ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ, ರಂಜಾನ್ ಹಾಗೂ ಲಕ್ಷ್ಮಿವಾರ. ಸರ್ವಧರ್ಮ ಸಮನ್ವಯ ಹಾಗೂ ಎಲ್ಲರಿಗೂ ಒಳಿತಾಗಲಿ ಎಂದು ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಸುವುದಿಲ್ಲ. ನಾಮಪತ್ರ ಸಲ್ಲಿಕೆ ದಿನಾಂಕ ನಂತರ ತಿಳಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್ ಸಿಗ್ಲಿಲ್ಲ ಅಂತಾ ಬೆಂಬಲಿಗರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್ ವಂಚಿತೆ ನಾಗಶ್ರೀ