– ಏಪ್ರಿಲ್ 7ರಂದು ಮೋದಿ ಮೈಸೂರಿಗೆ
ಬೆಂಗಳೂರು: ಚುನಾವಣೆ ನೀತಿ ಸಂಹಿತೆ (Code of Conduct) ಜಾರಿಯಾಗುತ್ತಿದೆ. ಹೀಗಾಗಿ ನಾನು ನನ್ನ ಎಲ್ಲಾ ಪ್ರವಾಸಗಳನ್ನು ರದ್ದು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾಗ್ತಿದೆ, ನನ್ನೆಲ್ಲ ಪ್ರವಾಸ ರದ್ದು ಮಾಡಿದ್ದೇನೆ. ಇನ್ನು ಏನಿದ್ರೂ ನಾನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ಪಕ್ಷದ ಚಟುವಟಿಕೆಯಿಂದ ನಡೆಸುವ ರ್ಯಾಲಿಗಳಲ್ಲಿ, ಪ್ರಚಾರಗಳಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು. ಇದೆಲ್ಲವೂ ನಿರೀಕ್ಷಿತ ಇವೆ. ಕಳೆದ ಸಲ 27 ರಂದು ದಿನಾಂಕ ಘೋಷಣೆ ಆಗಿತ್ತು. ನೀತಿ ಸಂಹಿತೆ ಜಾರಿಯಾಗಲಿದೆ. ಎಲ್ಲ ಪಕ್ಷಗಳಿಗೂ ನೀತಿ ಸಂಹಿತೆ ಅನ್ವಯವಾಗಲಿದೆ ಎಂದು ಹೇಳಿದರು.
Advertisement
Advertisement
ಮೋದಿ (narendra Modi) ಯವರು ಏಪ್ರಿಲ್ 9 ರಂದು ಮೈಸೂರಿಗೆ ಬರುತ್ತಾರೆ. ಹುಲಿಗಳ ಸಂರಕ್ಷಣಾ ದಿನಾಚರಣೆಗೆ ಬರುತ್ತಾರೆ. ಅದು ಮೊದಲೇ ನಿಗಿದಿ ಆಗಿದ್ದ ಕಾರ್ಯಕ್ರಮವಾಗಿದೆ. ನನಗೆ ಈ ಬಾರಿ ನಮಗೆ ಬಹುಮತ ಬರುವ ವಿಶ್ವಾಸ ಇದೆ. ಇನ್ಮುಂದೆ ನನ್ನ ಪ್ರವಾಸಗಳನ್ನು ಪಕ್ಷ ನಿಗದಿ ಮಾಡುತ್ತೆ ಎಂದರು.
Advertisement
ಡಿಕೆಶಿ ಅವರು ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ನಮ್ಮ ಎಲ್ಲಾ ಶಾಸಕರಿಗೆ ಕರೆ ಮಾಡುತ್ತಿದ್ದಾರೆ. ಆದರೆ ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ. ಇದು ಅವರ ಪರಿಸ್ಥಿತಿ ಏನು ಅಂತ ತೋರಿಸುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ – ಜಿಲ್ಲಾ ಪ್ರವಾಸ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್
Advertisement
ಒಳಮೀಸಲಾತಿ ಹಂಚಿಕೆ ನ್ಯಾಯ ಸಮ್ಮತವಾಗಿದೆ. ಯಾರಿಗೂ ಅನ್ಯಾಯ ಆಗಿಲ್ಲ. ನಡೆಯುತ್ತಿರುವ ಪ್ರತಿಭಟನೆಗಳು ಕಾಂಗ್ರೆಸ್ ಪ್ರೇರಿತವಾಗಿದೆ. ಒಳ ಮೀಸಲಾತಿ ಜಾರಿಯಾಗುತ್ತೆ, ಅದೆಲ್ಲ ಆಗುವಂತಹ ಪ್ರಕ್ರಿಯೆಗಳು. ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದೆ ಎಂದು ಹೇಳಿದರು.