ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಗೃಹ ಸಚಿವ ಅಮಿತ್ ಶಾ (Amit Shah) ಬಿಗ್ ಶಾಕ್ ನೀಡಿದ್ದಾರೆ. ಬಳ್ಳಾರಿಯ ಸಂಡೂರಿನ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ (Bengaluru) ಬಂದಿಳಿದ ಅಮಿತ್ ಶಾ ಸರಣಿ ಸಭೆ ನಡೆಸಲು ಮುಂದಾಗಿದ್ದರು. ಆದರೆ ಅಮಿತ್ ಶಾ ಮಾತ್ರ ಸಭೆಯಿಂದ ದೂರ ಉಳಿದು ಶಾಸಕರು ಹಾಗೂ ಸಂಸದರಿಗೆ ಅಚ್ಚರಿ ಮೂಡಿಸಿದರು.
ಗುರುವಾರ ಬೆಂಗಳೂರು ಶಾಸಕರು, ಸಂಸದರು, ಪರಿಷತ್ ಸದಸ್ಯರೊಂದಿಗೆ ಬೆಂಗಳೂರು ಕೇಂದ್ರಿತ ಮಹತ್ವದ ಸಭೆ ಆಯೋಜಿಸಲಾಗಿತ್ತು. ಬೆಂಗಳೂರು ಟಾಸ್ಕ್ (Bengaluru Task) ಬಗ್ಗೆ ಅಮಿತ್ ಶಾ ಕ್ಲಾಸ್‍ಗೆ ನಾಯಕರು ಕುತೂಹಲ ಇಟ್ಟುಕೊಂಡಿದ್ದರು. ಆದರೆ ಎಲ್ಲವೂ ಉಲ್ಟಾ ಆಗಿತ್ತು. ಸಭೆಯಿಂದ ಅಮಿತ್ ಶಾ ದೂರ ಉಳಿದಿದ್ದರು. ಇದು ಶಾಸಕರು, ಸಂಸದರಿಗೆ ಅಚ್ಚರಿ ಜೊತೆಗೆ ಗೊಂದಲವೂ ಉಂಟಾಯಿತು.
Advertisement
Advertisement
ಅಮಿತ್ ಶಾ ಗೈರಿನ ನಡುವೆ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ, ಮನ್‍ಸುಖ್ ಮಾಂಡವೀಯ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಬೆಂಗಳೂರು ನಗರದ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಪಕ್ಷದ ಜಿಲ್ಲಾ ಉಸ್ತುವಾರಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: Allah ಮೋದಿಯನ್ನು ನಮಗೆ ಕೊಡು, ಅವರೇ ನಮ್ಮ ದೇಶ ಆಳಲಿ: ದೇವರ ಮೊರೆಹೋದ ಪಾಕ್ ಪ್ರಜೆ
Advertisement
ಈ ವೇಳೆ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್, ಅಣ್ಣಾಮಲೈ ಸೇರಿದಂತೆ ಹಲವರು ಉಪಸ್ಥಿತಿರಿದ್ದರು. ಸಭೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಸೀಟ್ ಗೆಲ್ಲುವ ನಿಟ್ಟಿನಲ್ಲಿ ಸಭೆಯಲ್ಲಿ ರಣತಂತ್ರ ರೂಪಿಸಲಾಯಿತು. ಪಕ್ಷ ಸಂಘಟನೆ, ಕ್ಷೇತ್ರವಾರು ತಂತ್ರಗಾರಿಕೆ ಬಗ್ಗೆ ಧರ್ಮೇಂದ್ರ ಪ್ರಧಾನ್ ಖಡಕ್ ಸೂಚನೆ ನೀಡಿದರು. ಸಭೆಯಲ್ಲಿ ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಬಿಗ್ ಟಾಸ್ಕ್ ಸಹ ನೀಡಲಾಗಿದೆ.
Advertisement
ನಾಯಕರಿಗೆ ಟಾಸ್ಕ್:
ಬೆಂಗಳೂರಿನಲ್ಲಿ ಈ ಬಾರಿ 20+ ಕ್ಷೇತ್ರಗಳನ್ನು ಗೆಲ್ಲಲೇಬೇಕು. ಗುಜರಾತ್ ಚುನಾವಣೆಯಲ್ಲಿ ಸ್ಥಳೀಯ ಮಟ್ಟದ ಚುನಾವಣಾ ತಂತ್ರಗಾರಿಕೆ ಭಾರೀ ಯಶಸ್ಸು ತಂದುಕೊಟ್ಟಿದ್ದು ಅದನ್ನು ಅಳವಡಿಸಿಕೊಳ್ಳಬೇಕು. ಪ್ರತಿ ವಾರ್ಡ್‍ನಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಬೇಕು. 1+1 ಕ್ಷೇತ್ರದ ಜವಾಬ್ದಾರಿಯನ್ನು ಹೊತ್ತುಕೊಂಡು ಪಕ್ಷವನ್ನು ಗೆಲ್ಲಿಸಬೇಕು. ಬೂತ್‍ಗಳಿಗೆ ಸಚಿವರು, ಶಾಸಕರು ಭೇಟಿ ನೀಡಬೇಕು. ವಾರಕ್ಕೊಮ್ಮೆ ಸಮಾಲೋಚನೆ ಸಭೆ ನಡೆಸಬೇಕು ಎಂದು ಟಾಸ್ಕ್ ನೀಡಲಾಗಿದೆ.
ಬೆಂಗಳೂರಿನಲ್ಲಿ ನಮಗೆ ಅತೀ ಹೆಚ್ಚು ಸ್ಥಾನ ಗೆಲ್ಲುವ ಎಲ್ಲಾ ಅವಕಾಶಗಳಿವೆ. ಹಿಂದೆ ನಾವು 18 ಸೀಟು ಗೆದ್ದಿದ್ದೇವೆ. ಈ ಬಾರಿ ಪ್ರಯತ್ನ ಹಾಕಿದರೆ ಆ ದಾಖಲೆ ಮುರಿಯುವ ಅವಕಾಶವಿದೆ. ಬೆಂಗಳೂರಿನಲ್ಲಿ ಫೋಕಸ್ ಮಾಡಿ ಕೆಲಸ ಮಾಡಿದರೆ ಹೆಚ್ಚು ಸ್ಥಾನವನ್ನು ನಾವು ಗೆಲ್ಲಬಹುದು. ಬೆಂಗಳೂರಿನ ಸುತ್ತಮುತ್ತಲಿನ ಕ್ಷೇತ್ರಗಳತ್ತಲೂ ಗಮನ ಇರಲಿ ಎಂದು ಧಮೇಂದ್ರ ಪ್ರಧಾನ್ ಸಭೆಯಲ್ಲಿ ಹೇಳಿದ್ದಾರೆ.
ಮನೆಯನ್ನು ಒಂದು ಬಾರಿ ಮಾತ್ರ ನಾವು ಗುಡಿಸುವುದಿಲ್ಲ. ಪ್ರತೀ ದಿನ ಮನೆ ಗುಡಿಸುವಂತೆ ಪ್ರತೀ ದಿನವೂ ನಾವು ಕೆಲಸ ಮಾಡಬೇಕು. ಆಗ ಮಾತ್ರ ನಿರೀಕ್ಷಿತ ಫಲಿತಾಂಶ ಸಿಗಲಿದೆ ಎಂದು ಮನ್‍ಸುಖ್ ಮಾಂಡವೀಯ ಕಿವಿಮಾತು ಹೇಳಿದ್ದಾರೆ. ಸಭೆಯಲ್ಲಿ ಮುಸ್ಲಿಮರ ವಿರುದ್ಧವೂ ವಾಗ್ದಾಳಿ ಮಾಡದಂತೆ ಸೂಚನೆ ನೀಡಲಾಗಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k