ಕೋಲಾರ: ಅದು ರಾಜಕೀಯ ನಾಯಕರ ಅಚ್ಚುಮೆಚ್ಚಿನ ಶಕ್ತಿಕೇಂದ್ರ. ಚುನಾವಣೆ ಬಂದರೆ ಆತನಿಗೆ ಎಲ್ಲಿಲ್ಲದ ಬೇಡಿಕೆ. ಹಾಗಾಗಿ ರಾಜಕಾರಣಿಗಳಿಗೆ ಅದೃಷ್ಟ ತಂದು ಕೊಡುವ ದೈವ ಹಾಗಾಗಿ ನಾಯಕರ ದಂಡೇ ಹರಿದುಬರುತ್ತದೆ. ಶತಾಯ ಗತಾಯ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಮೂರು ಪಕ್ಷಗಳ ಮುಖಂಡರು ಇಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ (Election Campaign) ಕಾರ್ಯ ಆರಂಭ ಮಾಡುತ್ತಾರೆ.
Advertisement
ರಾಜ್ಯದ ಮೂಡಣಬಾಗಿಲು ಎಂದು ಕರೆಯಲಾಗುವ ಕೋಲಾರ ಜಿಲ್ಲೆ ಮುಳಬಾಗಿಲು ಕುರುಡುಮಲೆ ವಿನಾಯಕ (Mulabagilu Kurudumale Ganesha Temple) ರಾಜಕಾರಣಿಗಳ ಅದೃಷ್ಟ ದೇವರು ಎಂದು ಪ್ರಸಿದ್ದಿ. ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಇಲ್ಲಿಂದ ಯಾವುದೇ ಕೆಲಸ ಆರಂಭ ಮಾಡಿದರೂ ಸಕ್ಸಸ್ ಆಗುತ್ತೇವೆ ಎನ್ನುವುದು ನಂಬಿಕೆ. ಈ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿ ಏನೇ ಕೆಲಸ ಆರಂಭಿಸಿದರೂ ಗೆಲುವು ಖಚಿತ ಎನ್ನುವ ಮಾತಿದೆ. ಈ ಕಾರಣಕ್ಕೆ ಬಹುತೇಕ ರಾಜಕಾರಣಿಗಳು ಇಲ್ಲಿಗೆ ಬರುತ್ತಾರೆ.
Advertisement
Advertisement
ಮೂರು ಯುಗಗಳಿಂದ ಪೂಜಿಸಲ್ಪಡುತ್ತಿರುವ ಕುರುಡುಮಲೆ ಗಣಪತಿಯು ಕಲಿಯುಗದಲ್ಲೂ ತನ್ನ ಚಮತ್ಕಾರವನ್ನು ತೋರಿಸುತ್ತಿದ್ದಾನೆ. ಭಕ್ತಿಯಿಂದ ಬೇಡಿದ ಭಕ್ತರಿಗೆ ಕೇಳಿದ್ದನ್ನು ನೀಡಿದ್ದಾನೆ. ಅದಕ್ಕಾಗಿ ಇಂದಿಗೂ ರಾಜಕೀಯ ನಾಯಕರ ದಂಡೇ ಈ ಗಣೇಶನಿಗೆ ಪರ್ಮನೆಂಟ್ ಭಕ್ತರು. ಎಸ್.ಎಂ ಕೃಷ್ಣ (S M Krishna), ದೇವೇಗೌಡ (HD Devegowda), ಯಡಿಯೂರಪ್ಪ (B.S Yediyurappa), ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕೂಡಾ ಈ ಗಣೇಶನಿಗೆ ಪೂಜೆ ಸಲ್ಲಿಸಿಯೇ ತಮ್ಮ ಪ್ರಚಾರ ಕಾರ್ಯಾರಂಭ ಮಾಡಿದ್ದಾರೆ. ಜೊತೆಗೆ ಸಾವಿರಾರು ಜನರು ತಮ್ಮ ಇಷ್ಟಾರ್ಥಗಳ ಈಡೇರಿಸುವಂತೆ ಗಣೇಶನ ಬಳಿ ಬಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಯಶಸ್ವಿಯಾಗಿದ್ದಾರೆ.
Advertisement
ದೇವೇಗೌಡರು 1996 ರಲ್ಲಿ ಸಿಎಂ ಆಗಿ ಪ್ರಧಾನಿಯೂ ಆಗಿದ್ದರೆ, ಪಾಂಚಜನ್ಯ ಕಹಳೆಯನ್ನು ಊದಿದ ಎಸ್.ಎಂ.ಕೃಷ್ಣ 2004 ರಲ್ಲಿ ಮತ್ತು ಮೊನ್ನೆಯಷ್ಟೆ ಸಿದ್ರಾಮಯ್ಯ ಅವರು ಸಿಎಂ ಆಗಿದ್ದಾರೆ. ಇವರೆಲ್ಲರೂ ತಮ್ಮ ಪಾರ್ಟಿಯ ಎಲೆಕ್ಷನ್ ಪ್ರಚಾರವನ್ನು ಕುರುಡುಮಲೆಯ ಗಣೇಶನಿಗೆ ಮೊದಲ ಪೂಜೆ ಸಲ್ಲಿಸಿದ ನಂತರವೇ ಮಾಡಿದ್ದು ಎನ್ನುವುದು ಇಲ್ಲಿ ಮುಖ್ಯವಾದ ಸಂಗತಿ. ಇದನ್ನೂ ಓದಿ: ಕರ್ನಾಟಕ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ- 2018ರ ಚುನಾವಣೆಯಲ್ಲಿ ಗೆದ್ದ ಮಹಿಳೆಯರು ಯಾರು?, ಸೋತವರೆಷ್ಟು?
ಇಂದಿಗೂ ಕೂಡಾ ಚುನಾವಣೆಗಳು ಬಂದರೆ ರಾಜಕೀಯ ನಾಯಕರುಗಳು ಇಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿ ಒಂದೆಜ್ಜೆ ಮುಂದಿಡುತ್ತಾರೆ. ಮೊದಲಿಗೆ ವಿನಾಯಕನಿಗೆ ಪೂಜೆ ಮಾಡಿಯೇ ನಂತರ ಚುನಾವಣೆ ಕೇಂದ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಾರೆ. 2023 ರಲ್ಲಿ ಮತ್ತೆ ಕಾಂಗ್ರೆಸ್ (Congress) ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಡಿಕೆಶಿ ತಮ್ಮ ಪಾದಯಾತ್ರೆ ಪರ್ವ ಆರಂಭಿಸಿದರು. ಜೆಡಿಎಸ್ (JDS) ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅದೇ ದಾರಿ ಹಿಡಿದು ಕುರುಡುಮಲೆಯಿಂದ ಪಂಚಯಾತ್ರೆ ಆರಂಭಿಸಿದ್ದರು.