ಮೈಸೂರು: ನಾನು ಎರಡು ಕಡೆ ನಿಲ್ಲುತ್ತೇನೆ ಎಂಬ ಪ್ರಶ್ನೆ ಇಲ್ಲ. ಚನ್ನಪಟ್ಟಣ (Channapatna) ಬಿಟ್ಟು ಬೇರೆ ಕಡೆ ಸ್ಪರ್ಧಿಸಲ್ಲ. ನಾನು ಮಂಡ್ಯಗೆ (Mandya) ನಾಮಪತ್ರ ಸಲ್ಲಿಸುತ್ತೇನೆ ಎನ್ನುವುದಲ್ಲ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಚನ್ನಪಟ್ಟಣದಲ್ಲಿ ಈಗಾಗಲೇ ಚುನಾವಣೆ ಮುಗಿಸಿದ್ದೇನೆ. ನನಗೆ ಚನ್ನಪಟ್ಟಣ ಟಫ್ ಅನ್ನೋದು ಸುಳ್ಳು. ಕನಕಪುರದಲ್ಲಿ (Kanakapura) ಈ ಬಾರಿ ಸಾಮಾನ್ಯ ಕಾರ್ಯಕರ್ತನನ್ನೆ ಕಣಕ್ಕೆ ಇಳಿಸುತ್ತೇವೆ. ಆದರೆ ಗೆದ್ದೆ ಗೆಲ್ಲುತ್ತೇವೆ ಎಂದು ಸ್ಪಷ್ಟವಾಗಿ ಹೇಳದಿದ್ದರೂ, ಈ ಬಾರಿಯ ಪೈಪೋಟಿಯ ಬೆಳೆ 2028ಕ್ಕೆ ಬರಲಿದೆ. ಕನಕಪುರದಲ್ಲಿ 2028ಕ್ಕೆ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಮಾರ್ಚ್ 26 ರಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ರೋಡ್ ಶೋ ಇಲ್ಲ. ಬೆಂಗಳೂರಿನಿಂದ ಮೈಸೂರಿನವರೆಗೆ ರೋಡ್ ಶೋ ಪ್ಲ್ಯಾನ್ ಮಾಡಲಾಗಿತ್ತು. ವೈದ್ಯರ ಸಲಹೆ ಹಿನ್ನೆಲೆಯಲ್ಲಿ ರೋಡ್ ಶೋ ರದ್ದು ಮಾಡಲಾಗಿದೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಮಿನಿ ರೋಡ್ ಶೋ ಮಾಡುತ್ತೇವೆ ಎಂದರು.
Advertisement
ರಾಜ್ಯದಲ್ಲಿ ಪಾರದರ್ಶಕ ಚುನಾವಣೆ ಅನುಮಾನ. ಕೇವಲ ಕೆಲವು ಪಕ್ಷಕ್ಕೆ ಮಾತ್ರ ಪಾರದರ್ಶಕತೆ ಮಾಡುತ್ತಾರೆ. ಒಂದೇ ಹಂತದಲ್ಲಿ ಚುನಾವಣೆ ನಡೆಸಲು ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.
Advertisement
ಉರಿಗೌಡ ನಂಜೇಗೌಡ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹುಡುಗಾಟಿಕೆ ಆಡುತ್ತಿದ್ದವರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬುದ್ಧಿ ಹೇಳಿದ್ದಾರೆ. ಇದಕ್ಕಾಗಿ ನಾನು ಶ್ರೀಗಳನ್ನು ಅಭಿನಂದಿಸುತ್ತೇನೆ. ಈ ಬಗ್ಗೆ ನಾನು ಸಹಾ ಏನು ಮಾತನಾಡುವುದಿಲ್ಲ ಎಂದರು. ಇದನ್ನೂ ಓದಿ: ಡಿನೋಟಿಫಿಕೇಶನ್ ಕೇಸ್ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್ ವಿಚಾರಣೆಗೆ ಎಚ್‌ಡಿಕೆ ಗೈರು
ಸಿದ್ದರಾಮಯ್ಯರಂತಹ ಮಹಾನ್ ನಾಯಕ ಒಂದು ಕ್ಷೇತ್ರ ಹುಡುಕುತ್ತಿರುವುದು ನೋಡಿದರೆ ನನಗೆ ಅನುಕಂಪ ಬರುತ್ತದೆ. ಒಂದು ವರ್ಷದಿಂದ ಸಿದ್ದರಾಮಯ್ಯಗೆ ಒಂದು ಕ್ಷೇತ್ರ ಹುಡುಕಿಕೊಳ್ಳಲು ಆಗಿಲ್ಲ. ಸಿದ್ದರಾಮಯ್ಯಗೆ ತಾವು ಎಲ್ಲಿ ಗೆಲ್ಲಿನಿ ಅಂತಾ ಗುರುಸಿಕೊಳ್ಳೋದು ಕಷ್ಟವಾಗಿರುವುದು ವಿಪರ್ಯಾಸ. ಕಾಂಗ್ರೆಸ್‍ನಲ್ಲಿ ಮೇಟಿಯೆ ಆತಂಕದಲ್ಲಿ ಇದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಯುಗಾದಿ ಹಬ್ಬಕ್ಕೆ ಹರಿದ ಸೀರೆ ಹಂಚಿದ್ರಾ ಕಾಂಗ್ರೆಸ್ ಶಾಸಕ?