ಹಾಸನ: ಜೆಡಿಎಸ್‌ನಲ್ಲಿ(JDS) ಹಾಸನ ಕ್ಷೇತ್ರಕ್ಕಾಗಿ (Hassana Assembly Constituency) ಸ್ವರೂಪ್ ಮತ್ತು ಭವಾನಿ ರೇವಣ್ಣ (Bhavani Revanna) ಮಧ್ಯೆ ಈಗಾಗಲೇ ಫೈಟ್ ಆರಂಭವಾಗಿದ್ದು ಇಬ್ಬರೂ ತಮಗೆ ಟಿಕೆಟ್ ಹಂಚಿಕೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಹಳೇ ಮೈಸೂರು ಭಾಗದ ಹಾಸನ ಜೆಡಿಎಸ್ ಭದ್ರಕೋಟೆ. ಈ ಭದ್ರಕೋಟೆಯಲ್ಲಿ ಕಳೆದ ಚುನಾವಣೆಯಲ್ಲಿ ಪ್ರೀತಂ ಗೌಡ (Preetham J Gowda) ಕಮಲ ಅರಳಿಸಿದ್ದರು. ಕಮಲ ಅರಳಿದ್ದೇ ತಡ ಪ್ರೀತಂ ಗೌಡರನ್ನು ಈ ಬಾರಿ ಸೋಲಿಸಲು ಜೆಡಿಎಸ್ ಪಣ ತೊಟ್ಟಿದೆ. ಆದರೆ ಚುನಾವಣೆಯ ಯುದ್ಧಕ್ಕೆ ಧುಮುಕುವ ಮೊದಲು ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಗ್ಗಂಟು ಮುಂದುವರಿದಿದೆ.
Advertisement
Advertisement
ಭವಾನಿ, ಸ್ವರೂಪ್ (Swaroop Gowda) ಪೈಕಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಬಂಡಾಯ ಏಳುವುದು ಫಿಕ್ಸ್. ಈ ಇಬ್ಬರು ವರಿಷ್ಠರ ಮುಂದೆ ತಮಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇಬ್ಬರ ಪೈಕಿ ಅಂತಿಮವಾಗಿ ಟಿಕೆಟ್ ಯಾರಿಗೆ ಸಿಗಲಿದೆ ಎನುವುದೇ ಸದ್ಯದ ಕುತೂಹಲ. ಇದನ್ನೂ ಓದಿ: ನನ್ನ ಜೀವನದ 3ನೇ ಪ್ರಭಾವಶಾಲಿ ವ್ಯಕ್ತಿ ರಾಹುಲ್ ಗಾಂಧಿ – ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಮಾತು
Advertisement
ಸ್ವರೂಪ್ ಬೇಡಿಕೆ ಏನು?
ಹಾಸನದ ಟಿಕೆಟ್ ನನಗೆ ಎಂದು ಮೊದಲೇ ಮಾತು ಕೊಟ್ಟಿದ್ದೀರಿ ಅದರಂತೆ ಟಿಕೆಟ್ ನನಗೆ ಕೊಡಬೇಕು. ಈಗಾಗಲೇ ಈ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿ ಸಂಘಟನೆ ಮಾಡಿದ್ದೇನೆ. ಭವಾನಿ ಗೊಂದಲ ನಿವಾರಿಸಿ ಪಕ್ಷದ ಪರ ಕೆಲಸ ಮಾಡುವಂತೆ ಮನವೊಲಿಸಬೇಕು. ಟಿಕೆಟ್ ಕೊಡದಿದ್ದರೆ ನನ್ನ ರಾಜಕೀಯ ಜೀವನಕ್ಕಾಗಿ ಕಾಂಗ್ರೆಸ್ ಪಕ್ಷ ಸೇರುವುದು ಅನಿವಾರ್ಯ. ಆದಷ್ಟು ಬೇಗ ಟಿಕೆಟ್ ಗೊಂದಲ ನಿವಾರಣೆ ಮಾಡಿ ಟಿಕೆಟ್ ಘೋಷಣೆ ಮಾಡಬೇಕು.
Advertisement
ಭವಾನಿ ರೇವಣ್ಣ ಬೇಡಿಕೆ ಏನು?
ಕಳೆದ ಬಾರಿ ನಿಮ್ಮ ಮಾತಿಗೆ ಗೌರವ ನೀಡಿ ಹಿಂದೆ ಸರಿದಿದ್ದೆ. ಆದರೆ ಈ ಬಾರಿ ನನಗೆ ಟಿಕೆಟ್ ಕೊಡಲೇಬೇಕು. ಇದು ನನ್ನ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ಜನ ನಂಬಿದ್ದಾರೆ. ಈಗ ಟಿಕೆಟ್ ತಪ್ಪಿದರೆ ಕ್ಷೇತ್ರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಆತ ಗೆಲ್ಲಲು ಸಾಧ್ಯವಿಲ್ಲ. ನಾನು ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದು, ಪ್ರೀತಂಗೌಡ ವಿರುದ್ಧ ನಾನೇ ಸರಿಯಾದ ಅಭ್ಯರ್ಥಿ. ಸ್ವರೂಪ್‍ಗೆ ಪರ್ಯಾಯ ವ್ಯವಸ್ಥೆ ಮಾಡಿ ಮಾಡಿ ನನಗೆ ಬೆಂಬಲ ಕೊಡುವಂತೆ ಮನವೊಲಿಸಬೇಕು.