ಚಿಕ್ಕಮಗಳೂರು: ಗೋಪಿಕೃಷ್ಣಗೆ (Gopikrishna) ತರೀಕೆರೆಯ (Tarikere) ಕಾಂಗ್ರೆಸ್ (Congress) ಟಿಕೆಟ್ ತಪ್ಪಿದ್ದು, ಮನನೊಂದ ದಂಪತಿ ನೂರಾರು ಅಭಿಮಾನಿಗಳ ಮಧ್ಯೆಯೇ ಕಣ್ಣೀರಿಟ್ಟಿದ್ದಾರೆ.
ತರೀಕೆರೆಯಲ್ಲಿ ಆರಂಭದಿಂದಲೂ ಕಾಂಗ್ರೆಸ್ ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಟಿಕೆಟ್‍ಗಾಗಿ 14 ಜನ ಹೋರಾಡುತ್ತಿದ್ದರು. ಅಂತಿಮವಾಗಿ ಗೋಪಿಕೃಷ್ಣ ಹಾಗೂ ಮಾಜಿ ಶಾಸಕ ಜಿ.ಎಚ್ ಶ್ರೀನಿವಾಸ್ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಇದನ್ನೂ ಓದಿ: ಜಗದೀಶ್ ಶೆಟ್ಟರ್‌ಗೆ ಬಿಜೆಪಿ ನೀಡಿತ್ತು 2 ಬಿಗ್ ಆಫರ್
Advertisement
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಗೋಪಿಕೃಷ್ಣಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು. ರಾಜ್ಯದಲ್ಲಿ ಮಡಿವಾಳದ ಸಮುದಾಯದವರಿಗೆ ಎಲ್ಲೂ ಟಿಕೆಟ್ ನೀಡಿಲ್ಲ. ಅವರಿಗೆ ಟಿಕೆಟ್ ಕೊಟ್ಟೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಅವರಿಗೆ ಕೈ ಟಿಕೆಟ್ ತಪ್ಪಿದ್ದು, ದಂಪತಿ ನೂರಾರು ಅಭಿಮಾನಿಗಳ ಮಧ್ಯೆ ಕಣ್ಣೀರಿಟ್ಟಿದ್ದಾರೆ.
Advertisement
Advertisement
ಗೋಪಿಕೃಷ್ಣಗೆ ಟಿಕೆಟ್ ಮಿಸ್ ಆಗುತ್ತಿದ್ದಂತೆ ಅಭಿಮಾನಿಗಳು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಸಿಟ್ಟಿಗೆದ್ದ ಅಭಿಮಾನಿಗಳು ಆಟೋಗೆ ಬೆಂಕಿ ಹಚ್ಚಿದ್ದಾರೆ. ಸಿದ್ದರಾಮಯ್ಯನವರ (Siddaramaiah) ಅಹಿಂದ (Ahinda) ಹೆಸರಿಗೆ ಮಾತ್ರ. ಅವರಿಗೆ ಅಹಿಂದ ಪದದ ಅರ್ಥವೇ ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
ಸದ್ಯ ಟಿಕೆಟ್ ಸಿಕ್ಕಿರುವ ಮಾಜಿ ಶಾಸಕ ಶ್ರೀನಿವಾಸ್ ಗೆಲುವಿನ ಹಾದಿಯೂ ಸುಲಭವಾಗಿಲ್ಲ. ತರೀಕೆರೆಯಲ್ಲಿ ನಿರ್ಣಾಯಕ ಪಾತ್ರವಿರುವ ಕುರುಬ ಸಮುದಾಯ ಶ್ರೀನಿವಾಸ್‍ಗೆ ವಿರೋಧವಿದೆ. ಶ್ರೀನಿವಾಸ್ ಕುರುಬ ಸಂಘದ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೇ ಕಾರಣದಿಂದ ಕುರುಬ (Kuruba) ಸಮುದಾಯ ಅವರ ವಿರುದ್ಧ ತಿರುಗಿದೆ. ಅವರಿಗೆ ಟಿಕೆಟ್ ಕೈತಪ್ಪಿಸಬೇಕೆಂದು ಕುರುಬ ಸಮುದಾಯದ ಪ್ರಮುಖ ನಾಯಕರು ಸಹ ಹೋರಾಡಿದ್ದರು. ಶ್ರೀನಿವಾಸ್‍ಗೆ ಟಿಕೆಟ್ ನೀಡಿದರೆ ಕುರುಬ ಸಮುದಾಯದಿಂದ ಏಳೆಂಟು ಅಭ್ಯರ್ಥಿಗಳು ಚುನಾವಣೆಗೆ ನಿಲ್ಲುತ್ತೇವೆಂದು ಎಚ್ಚರಿಕೆ ಕೂಡ ನೀಡಿದ್ದರು. ಆದರೂ ಟಿಕೆಟ್ ಅವರಿಗೆ ಸಿಕ್ಕಿರುವುದು ಸಮುದಾಯದವನ್ನ ಸಿಟ್ಟಾಗಿಸಿದೆ.
ಶ್ರೀನಿವಾಸ್ ವಿರುದ್ಧ ಇರುವ ಕುರುಬ ಸಮುದಾಯದ ನಾಯಕರು ಗೋಪಿಕೃಷ್ಣ ಜೊತೆಗೆ ನಿಂತಿದ್ದಾರೆ. ಗೋಪಿಕೃಷ್ಣ, ಅಭಿಮಾನಿಗಳು ಹಾಗೂ ಎಲ್ಲಾ ಸಮುದಾಯದ ಮುಖಂಡರ ಜೊತೆ ಸಭೆ ಬಳಿಕ ಮುಂದಿನ ರಾಜಕೀಯದ ನಡೆ ನಿರ್ಧರಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಅವರು ಪಕ್ಷೇತರವಾಗಿ ನಿಲ್ಲುವ ಸೂಚನೆ ನೀಡಿದ್ದಾರೆ. ಗೋಪಿಕೃಷ್ಣ ಸ್ವಂತಂತ್ರವಾಗಿ ಸ್ಪರ್ಧಿಸಿದರೆ ಶ್ರೀನಿವಾಸ್ ಗೆಲುವಿಗೆ ಕಷ್ಟವಾಗುವ ಸೂಚನೆ ಕೂಡ ಇದೆ. ಈ ಇಬ್ಬರ ನಡುವಿನ ತಿಕ್ಕಾಟ ಮೂರನೇಯವನಿಗೆ ಲಾಭ ಎಂಬಂತೆ ನಮಗೆ ಲಾಭವಾಗಬಹುದು ಎಂದು ಬಿಜೆಪಿಗರು ಅಂದಾಜಿಸಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಕಡಿಮೆ ಮಾಡಿದ್ರೆ ಇಂದಿರಾ ಕ್ಯಾಂಟೀನ್ ಉಳಿಯುತ್ತಿತ್ತು – ಸಿದ್ದರಾಮಯ್ಯ ಟಾಂಗ್