ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ರಾಜಕಾರಣರ ಆರಂಭದ ದಿನಗಳ ಹೇಗಿದ್ವು ಅನ್ನೋದರ ಒಂದು ಸ್ಯಾಂಪಲ್ ಸ್ಟೋರಿ ಇದು. ಸಿದ್ದರಾಮಯ್ಯ ಅವರು ಮೈಸೂರು (Mysuru) ತಾಲೂಕು ಅಭಿವೃದ್ಧಿ ಮಂಡಳಿಯಿಂದ ನೇರವಾಗಿ ಸಂಸತ್‌ಗೆ ಹೋಗಲು ಯತ್ನಿಸಿದ್ದರು. ನಂತರ ಕೊಪ್ಪಳದಿಂದಲೂ ಎರಡನೇ ಪ್ರಯತ್ನ ನಡೆಸಿದ್ದರು. ಈ ಎರಡೂ ಪ್ರಯತ್ನ ವಿಫಲವಾಗಿತ್ತು.
1978 ರಲ್ಲಿ ಸಿದ್ದರಾಮಯ್ಯ ಅವರು ಮೈಸೂರು ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದರು. 1980 ರಲ್ಲಿ ಲೋಕಸಭಾ ಚುನಾವಣೆ ಎದುರಾದಾಗ ಜನತಾಪಕ್ಷ (ಎಸ್) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 1,95,724 ಮತಗಳನ್ನು ಪಡೆದ ಕಾಂಗ್ರೆಸ್-ಐನ ಎಂ. ರಾಜಶೇಖರಮೂರ್ತಿ ಅಯ್ಕೆಯಾದರು. ಕಾಂಗ್ರೆಸ್ ನ ಎಚ್.ಡಿ. ತುಳಸೀದಾಸಪ್ಪ ಅವರಿಗೆ 1,12,688 ಮತಗಳು ಬಿದ್ದರೆ ಜನತಾ ಪಕ್ಷದ ಎಂ.ಎಸ್. ಗುರುಪಾದಸ್ವಾಮಿ ಅವರಿಗೆ 71,491 ಮತಗಳು ದೊರೆತರೆ ಸಿದ್ದರಾಮಯ್ಯ ಅವರಿಗೆ ಸಿಕ್ಕಿದ್ದು ಕೇವಲ 8,327 ಮತಗಳು ಮಾತ್ರ.
Advertisement
Advertisement
Advertisement
ಇದಾದ ನಂತರ ಸಿದ್ದರಾಮಯ್ಯ ಅವರು 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ (Chamundeshwari Constituency) ಪಕ್ಷೇತರ ಅಭ್ಯರ್ಥಿಯಾಗಿ ‘ತಕ್ಕಡಿ’ ಗುರುತಿನಲ್ಲಿ ಸ್ಪರ್ಧಿಸಿ, ಪ್ರಥಮ ಬಾರಿಗೆ ಚುನಾಯಿತರಾದರು. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರಾದರು, ನಂತರ ಹೆಗಡೆ ಅವರು ಸಂಪುಟಕ್ಕೆ ತೆಗೆದುಕೊಂಡು ರೇಷ್ಮೆ ಖಾತೆ ನೀಡಿದರು.
Advertisement
1985 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಸಿದ್ದರಾಮಯ್ಯ ಅವರು ಹೆಗಡೆ ಹಾಗೂ ಎಸ್.ಆರ್. ಬೊಮ್ಮಾಯಿ ಸಂಪುಟದಲ್ಲಿ ಕ್ರಮವಾಗಿ ಪಶುಸಂಗೋಪನೆ, ಸಾರಿಗೆ ಸಚಿವರಾಗಿದ್ದರು. 1989ರ ವಿಧಾನಸಭಾ ಚುನಾವಣೆ ವೇಳೆಗೆ ಜನತಾಪಕ್ಷ ಇಬ್ಬಾಗವಾಗಿತ್ತು. ಸಿದ್ದರಾಮಯ್ಯ ಜನತಾದಳದ ಕಡೆ ಗುರುತಿಸಿಕೊಂಡು, ಅದೇ ಪಕ್ಷದ ಅಭ್ಯರ್ಥಿಯಾಗಿದ್ದರು. ಇದನ್ನೂ ಓದಿ: ಜಿದ್ದಾಜಿದ್ದಿ ಹೋರಾಟ, ರಕ್ತಸಿಕ್ತ ರಾಜಕಾರಣಕ್ಕೆ ಫೇಮಸ್ ಶ್ರೀನಿವಾಸಪುರ
ಎಚ್.ಡಿ. ದೇವೇಗೌಡರ (HD Devegowda) ನೇತೃತ್ವದ ಸಮಾಜವಾದಿ ಜನತಾಪಕ್ಷದಿಂದ ಜಿಪಂ ಮಾಜಿ ಸದಸ್ಯ ಮಾವಿನಹಳ್ಳಿ ಸಿದ್ದೇಗೌಡ ಅಭ್ಯರ್ಥಿಯಾಗಿದ್ದರು. ಗೆದ್ದಿದ್ದು ಕಾಂಗ್ರೆಸ್‌ನ ಎಂ. ರಾಜಶೇಖರಮೂರ್ತಿ, 1991ರ ವೇಳೆಗೆ ಜನತಾದಳ ಮತ್ತೆ ಒಂದಾಗಿತ್ತು. ಲೋಕಸಭಾ ಚುನಾವಣಾ ಎದುರಾದಾಗ ಸಿದ್ದರಾಮಯ್ಯ ಅವರು ಕೊಪ್ಪಳದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್ಸಿನ ಬಸವರಾಜ ಪಾಟೀಲ್ ಅನ್ವರಿ 2,41,176 ಮತಗಳನ್ನು ಪಡೆದು ಚುನಾಯಿತರಾದರು. ಸಿದ್ದರಾಮಯ್ಯ 2.29,979 ಮತಗಳನ್ನು ಪಡೆದು 11,197 ಮತಗಳ ಅಂತರದಿಂದ ಸೋತರು. ಇದಾದ ನಂತರ ಅವರು ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಪ್ರಯತ್ನ ಮಾಡಲಿಲ್ಲ.
1994ರ ಚುನಾವಣೆ ವೇಳೆಗೆ ಜನತಾದಳ ಮತ್ತೆ ಒಗ್ಗೂಡಿತ್ತು. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಮೂರನೇ ಬಾರಿಗೆ ಗೆದ್ದು, ಎಚ್.ಡಿ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾದರು. 1996 ರಲ್ಲಿ ದೇವೇಗೌಡರು ಅನಿರೀಕ್ಷಿತವಾಗಿ ಪ್ರಧಾನಿ ಹುದ್ದೆ ಅಲಂಕರಿಸಿದಾಗ ಜೆ.ಎಚ್. ಪಟೇಲರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾದರು. 1999ರ ವೇಳೆಗೆ ಜನತಾದಳ ಇಬ್ಬಾಗವಾಗಿತ್ತು. ಸಿದ್ದರಾಮಯ್ಯ ಅವರು ದೇವೇಗೌಡರೊಂದಿಗೆ ಉಳಿದು ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಎ.ಎಸ್. ಗುರುಸ್ವಾಮಿ ಅವರ ಎದುರು ಸೋತರು. 2004 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಲ್ಕನೆ ಬಾರಿಗೆ ಗೆದ್ದು, ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾದರು.
ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ನಡೆಸುವ ಸಂಬಂಧ ದೇವೇಗೌಡರೊಂದಿಗೆ ಮನಸ್ತಾಪ ಉಂಟಾಗಿ, ಸಂಪುಟದಿಂದ ವಜಾ ಆದರು. ನಂತರ ಕಾಂಗ್ರೆಸ್ ಸೇರಿ ಚಾಮುಂಡೇಶ್ವರಿಯಿಂದ ಉಪ ಚುನಾವಣೆಯಲ್ಲಿ 257 ಮತಗಳ ಅಂತರದಿಂದ ಪ್ರಯಾಸದ ಗೆಲವು ದಾಖಲಿಸಿದರು. 2008ರ ಚುನಾವಣೆ ವೇಳೆಗೆ ಚಾಮುಂಡೇಶ್ವರಿ ವಿಭಜನೆಯಾಗಿ ವರುಣಾ ಕ್ಷೇತ್ರ ರಚನೆಯಾಗಿದ್ದರಿಂದ ಅಲ್ಲಿಂದ ಗೆದ್ದು ಆರಂಭದಲ್ಲಿ ಸಾರ್ವಜನಿಕರ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರು. ನಂತರ ಪ್ರತಿಪಕ್ಷ ನಾಯಕರಾದರು. 2013 ರಲ್ಲಿ ವರುಣದಿಂದ ಪುನಾರಾಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು.