ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಹಿನ್ನೆಲೆ ಮೈಸೂರಿನ (Mysuru) ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ (Pramoda Devi Wadiyar) ಮತದಾನ ಮಾಡಲೆಂದು ಮತಗಟ್ಟೆಗೆ ಬಂದಿದ್ದರೂ ವಾಪಸ್ ತೆರಳಿರುವ ಪ್ರಸಂಗ ನಡೆದಿದೆ.
Advertisement
ಮತದಾನ ಮಾಡಲೆಂದು ರಾಜವಂಶಸ್ಥೆ ಮತಗಟ್ಟೆಗೆ ಬಂದಿದ್ದರು. ಆದರೆ ಅವರು ಒರಿಜಿನಲ್ ದಾಖಲೆಗಳನ್ನು ಮರೆತು ಬಂದಿದ್ದರು. ಬಳಿಕ ಅವರು ಚುನಾವಣಾ ಸಿಬ್ಬಂದಿಗೆ ತಮ್ಮ ಮೊಬೈಲಿನಲ್ಲಿ ಸಾಫ್ಟ್ ಕಾಪಿ ತೋರಿಸಿದ್ದಾರೆ. ಆದರೆ ಒರಿಜಿನಲ್ ದಾಖಲಾತಿ ತರುವಂತೆ ಚುನಾವಣಾ ಸಿಬ್ಬಂದಿ ಪ್ರಮೋದಾ ದೇವಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸುಧಾಮೂರ್ತಿ ದಂಪತಿ
Advertisement
Advertisement
ಪ್ರಮೋದಾ ದೇವಿ ದಾಖಲೆಗಳನ್ನು ತಂದು ಬಳಿಕ ವೋಟ್ ಮಾಡುವುದಾಗಿ ತಿಳಿಸಿ ಅರಮನೆಗೆ ಹಿಂತಿರುಗಿದ್ದಾರೆ. ಬಳಿಕ ದಾಖಲೆ ಸಮೇತ ಮತಗಟ್ಟೆಗೆ ಬಂದ ಅವರು ಕೆಆರ್ ಕ್ಷೇತ್ರದ ಬೂತ್ ಸಂಖ್ಯೆ 179ರಲ್ಲಿ ಮತದಾನ ಮಾಡಿದರು. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates