ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ- 2023ಕ್ಕೆ ಮೇ 10 ರಂದು ಮತದಾನ ಶಾಂತಿಯುತವಾಗಿ ನಡೆಯಿತು. ಈ ಬಾರಿಯ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ದಾಖಲೆ ಸೃಷ್ಟಿಗೆ ಕಾರಣೀಕರ್ತರಾಗಿದ್ದಾರೆ. ಮತದಾನ ಪ್ರಮಾಣ ಸಂಬಂಧ ಅಧಿಕೃತ ಮಾಹಿತಿ ಹೊರಬಿದ್ದಿದೆ. ರಾಜ್ಯಾದ್ಯಂತ ಎಷ್ಟು ಪ್ರಮಾಣದಲ್ಲಿ ಮತದಾನವಾಗಿದೆ ಎಂಬ ಮಾಹಿತಿ ಇಲ್ಲಿದೆ.
Advertisement
2018 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು ಶೇ. 72.36 ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಶೇ. 73.19 ರಷ್ಟು ಮತ ಚಲಾವಣೆಯಾಗಿದೆ. ಇದರಲ್ಲಿ ಪುರುಷರು ಚಲಾಯಿಸಿದ ಮತ ಪ್ರಮಾಣ ಶೇ. 73.68 ರಷ್ಟಿದೆ. ಅಂತೆಯೇ ಮಹಿಳೆಯರು ಶೇ. 72.70 ರಷ್ಟು ಮತ ಚಲಾಯಿಸಿದ್ದಾರೆ. ಇತರರಿಂದ ಶೇ. 21.05 ರಷ್ಟು ಮತದಾನವಾಗಿದೆ. (ಇದರಲ್ಲಿ ಮನೆಯಿಂದಲೇ ಮತದಾನ ಮಾಡಿದ್ದು ಹಾಗೂ ಪೋಸ್ಟಲ್ ವೋಟ್ ಸಂಖ್ಯೆ ಸೇರಿಲ್ಲ.)
Advertisement
Advertisement
ನಗರ ಪ್ರದೇಶಗಳಿಗೆ ಹೋಲಿಸಿದರೆ ಈ ಬಾರಿಯೂ ಗ್ರಾಮೀಣ ಭಾಗಗಳಲ್ಲೇ ಹೆಚ್ಚು ಮತದಾನವಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ನಗರ ಭಾಗಗಳಲ್ಲಿ ಮತದಾನ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಜನರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾವಾರು ಮತ ಪ್ರಮಾಣ ಎಷ್ಟಾಗಿದೆ ಎಂಬ ವಿವರ ಹೀಗಿದೆ.
Advertisement
ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ?
ಬಿಬಿಎಂಪಿ ಕೇಂದ್ರ – 55.50%
ಬಿಬಿಎಂಪಿ ಉತ್ತರ – 52.59%
ಬಿಬಿಎಂಪಿ ದಕ್ಷಿಣ – 52.33%
ಬಾಗಲಕೋಟೆ – 75.92%
ಬೆಂಗಳೂರು ಗ್ರಾಮೀಣ – 85.08%
ಬೆಂಗಳೂರು ನಗರ – 57.71%
ಬೆಳಗಾವಿ – 76.95%
ಬಳ್ಳಾರಿ – 76.24%
ಬೀದರ್ – 71.59%
ವಿಜಯಪುರ – 71.34%
ಚಾಮರಾಜನಗರ – 81.48%
ಚಿಕ್ಕಬಳ್ಳಾಪುರ – 85.56%
ಚಿಕ್ಕಮಗಳೂರು – 78.30%
ಚಿತ್ರದುರ್ಗ – 81.18%
ದಕ್ಷಿಣ ಕನ್ನಡ – 76.25%
ದಾವಣಗೆರೆ – 78.12%
ಧಾರವಾಡ – 73.45%
ಗದಗ – 75.61%
ಕಲಬುರಗಿ – 66.43%
ಹಾಸನ – 81.73%
ಹಾವೇರಿ – 81.50%
ಕೊಡಗು – 74.73%
ಕೋಲಾರ – 81.75%
ಕೊಪ್ಪಳ – 77.81%
ಮಂಡ್ಯ – 84.45%
ಮೈಸೂರು – 75.12%
ರಾಯಚೂರು – 70.03%
ರಾಮನಗರ – 85.04%
ಶಿವಮೊಗ್ಗ – 79.15%
ತುಮಕೂರು – 83.58%
ಉಡುಪಿ – 78.57%
ಉತ್ತರ ಕನ್ನಡ – 77.92%
ವಿಜಯನಗರ – 78.07%
ಯಾದಗಿರಿ – 68.77%