ಶಿವಮೊಗ್ಗ ನಗರ ಬಿಜೆಪಿ ಟಿಕೆಟ್‍ಗೆ ಫೈಟ್- ಈಶ್ವರಪ್ಪ V/S ಆಯನೂರು ಮಧ್ಯೆ ಜಟಾಪಟಿ

Public TV
2 Min Read
AYANUR MANJUNATH KS ESHWARAPPA

– ನನಗೆ ಟಿಕೆಟ್ ಬೇಕೇ ಬೇಕೆಂದು ಈಶ್ವರಪ್ಪ ಪಟ್ಟು

ಶಿವಮೊಗ್ಗ: ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ (Vidhanasabha Election) ಎದುರಾಗುತ್ತಿರುವ ಸಮಯದಲ್ಲಿ ಟಿಕೆಟ್‍ ಗಾಗಿ ನಾಯಕರ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ (BJP) ಪಕ್ಷದಿಂದ ಕಳೆದ 30-35 ವರ್ಷದಿಂದ ಸ್ಪರ್ಧೆ ಮಾಡುತ್ತಿರುವ ಕೆ.ಎಸ್.ಈಶ್ವರಪ್ಪ (KS Eshwarappa) ಅವರಿಗೆ ಈ ಬಾರಿ ಪೈಪೋಟಿ ಎದುರಾಗಿದೆ. ಅದರಲ್ಲೂ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಈಶ್ವರಪ್ಪ ಅವರಿಗೆ ಟಕ್ಕರ್ ಕೊಡಲು ನಿರ್ಧರಿಸುವಂತಿದೆ.

BJP FLAG

ರಾಜ್ಯ ವಿಧಾನಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನಲ್ಲಿ ಟಿಕೆಟ್‍ಗಾಗಿ ಭರ್ಜರಿ ಪೈಪೋಟಿ ನಡೀತಿದೆ. ಈ ಮಧ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್‍ಗಾಗಿ ಭಾರೀ ಫೈಟ್ ನಡೆದಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಆಕಾಂಕ್ಷಿಗಳ ದಂಡೇ ಇದೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗೋದು ಪಕ್ಕಾ : ತೇಜಸ್ವಿ ಸೂರ್ಯ

chamarajanagara KS Eshwarappa

ಶಿವಮೊಗ್ಗ ಜಿಲ್ಲೆ ಬಿಜೆಪಿ ಭದ್ರಕೋಟೆ. ಕಳೆದ ಬಾರಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ಪೈಕಿ 6 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಕೂಡ ಶತಾಯಗತಾಯ 7ಕ್ಕೆ 7 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂಬ ಟಾರ್ಗೆಟ್‍ನ್ನು ಕೇಸರಿ ಪಡೆ ಹೊಂದಿದ್ದು, ಟಿಕೆಟ್‍ಗಾಗಿ ಭರ್ಜರಿ ಲಾಭಿ ನಡೆಯುತ್ತಿದೆ. ಶಿವಮೊಗ್ಗ ನಗರ ಕ್ಷೇತ್ರದಿಂದ ತನಗೇ ಟಿಕೆಟ್ ಬೇಕು ಅಂತ ಈಶ್ವರಪ್ಪ ಪಟ್ಟು ಹಿಡಿದಿದ್ದಾರೆ.. ಒಂದು ವೇಳೆ ವಯಸ್ಸಿನ ಕಾರಣ ನೀಡಿ ಟಿಕೆಟ್ ಕೈತಪ್ಪಿದರೆ, ತಮ್ಮ ಮಗನಿಗೆ ಟಿಕೆಟ್ ಕೊಡಿ ಎಂಬ ಬೇಡಿಕೆಯನ್ನು ವರಿಷ್ಠರ ಮುಂದಿಟ್ಟಿದ್ದಾರೆ. ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ (Ayanur Manjunath) ಸಹ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

Ayanuru Manjunath 4

ಆಯನೂರು ಮಂಜುನಾಥ್ ಈಗಾಗಲೇ ಶಿವಮೊಗ್ಗ ನಗರದ ಹಲವು ಕಡೆಗಳಲ್ಲಿ ಈ ಬಾರಿ ಆಯನೂರು ಮಂಜುನಾಥ್ ಎಂದು ಫ್ಲೆಕ್ಸ್ ಹಾಕಿಸಿದ್ದಾರೆ. ಅಲ್ಲದೇ ಯುಗಾದಿ ಹಾಗೂ ರಂಜಾನ್ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಟಾಂಗ್ ಕೊಡುವ ಪ್ರಯತ್ನ ಮಾಡಿದ್ದಾರೆ. ಹರುಕು ಬಾಯಿಗಳಿಗೆ ಬೀಗ ಬೀಳಲಿ, ಮುರಿದ ಮನಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂಬುದಾಗಿ ಫ್ಲೆಕ್ಸ್ ನಲ್ಲಿ ಉಲ್ಲೇಖಿಸಿದ್ದಾರೆ.

ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, ಹೈಕಮಾಂಡ್ ನಾಯಕರ ತೀರ್ಮಾನಕ್ಕೆ ಬದ್ಧ. ಸ್ಪರ್ಧೆ ಮಾಡು ಅಂದ್ರೆ ಮಾಡ್ತೀನಿ. ಇಲ್ಲ ಅಂದ್ರೆ ಇಲ್ಲ. ಆಯನೂರು ಮಂಜುನಾಥ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ. ಒಟ್ಟಾರೆ ಚುನಾವಣೆ ಹತ್ತಿರವಾಗ್ತಿದ್ದಂತೆಯೇ ಇಬ್ಬರು ನಾಯಕರ ಟಿಕೆಟ್ ಪೈಪೋಟಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಗೊಂದಲ ಉಂಟುಮಾಡಿದೆ. ಈ ಬೆಳವಣಿಗೆ ಮತ್ತಷ್ಟು ತಾರಕಕ್ಕೇರುವ ಮೊದಲು ವರಿಷ್ಠರು ಈ ಬಗ್ಗೆ ಗಮನಹರಿಸಿ ಸಮಸ್ಯೆ ತಿಳಿಗೊಳಿಸಬೇಕಿದೆ ಎಂಬುದು ಕಾರ್ಯಕರ್ತರ ಆಗ್ರಹವಾಗಿದೆ

Share This Article
Leave a Comment

Leave a Reply

Your email address will not be published. Required fields are marked *