ಬೆಂಗಳೂರು: ಸೀತೆ ಯಾರು, ಶೂರ್ಪನಖಿ ಯಾರು ಅಂತಾ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ಗೆ (Congress) ಇಷ್ಟೇ ಗೊತ್ತಿರೋದು. ಇದೇ ಅವರ ಸಂಸ್ಕೃತಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡರು ತನಗೆ ಶೂರ್ಪನಖಿ ಎಂದು ಹೇಳಿರುವ ವಿಚಾರವಾಗಿ ಬಿಜೆಪಿ (BJP) ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದಕ್ಕೆ ಜನ ಉತ್ತರ ಕೊಡುತ್ತಾರೆ. ಕಾಂಗ್ರೆಸ್ ಯಾವಾಗಲೂ ಇದೇ ರೀತಿಯ ಕೀಳು ಮತ್ತು ಕೆಳ ಮಟ್ಟದ ಸಂಸ್ಕೃತಿಯನ್ನು ಪ್ರಯೋಗಿಸುತ್ತದೆ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಸದನದಲ್ಲಿ ಇಂದಿರಾ ಗಾಂಧಿಯವರಿಗೆ ದುರ್ಗೆ ಎಂದು ಕರೆದಿದ್ದರು. ಇದು ನಮ್ಮ ಸಂಸ್ಕೃತಿ. ಆದರೆ ಕಾಂಗ್ರೆಸ್ ಸಂಸ್ಕೃತಿ ಯಾವಾಗಲೂ ಕೆಳಮಟ್ಟದಲ್ಲಿ ಮಾತನಾಡೋದೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ನಾಟಕದ ಅಭಿವೃದ್ಧಿ ಮಾಡಿ ನಿಮ್ಮ ಪ್ರೀತಿನಾ ಬಡ್ಡಿ ಸಮೇತ ತೀರಿಸುತ್ತೇನೆ: ಮೋದಿ
Advertisement
Advertisement
ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಕೊಟ್ಟಿದೆ. ಜಾಹಿರಾತಿನ ಮೂಲಕ ಕಾಂಗ್ರೆಸ್ ಸುಳ್ಳು ಆರೋಪ ಮಾಡಿದೆ. ಇದರ ಬಗ್ಗೆ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಆಯೋಗ ಕೇಳಿದೆ. ಕಾಂಗ್ರೆಸ್ ಯಾವ ಮುಖ ಇಟ್ಟುಕೊಂಡು ಭ್ರಷ್ಟಾಚಾರದ (Corruption) ಬಗ್ಗೆ ಮಾತನಾಡುತ್ತಿದೆ? ಅವರ ಸರ್ಕಾರ ಬಂದಾಗ ಎಷ್ಟು ರೇಟ್ ಇತ್ತು ಅದರ ಆಧಾರದಲ್ಲಿ ನಮ್ಮ ಮೇಲೆ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ನ ಆರೋಪಗಳು ಸುಳ್ಳು ಮತ್ತು ನಿರಾಧಾರ. ಪಕ್ಷದ ಹಲವು ನಾಯಕರಿಗೆ ಕುಟುಂಬ ಹಿನ್ನೆಲೆ ಇಲ್ಲ. ಪಕ್ಷ, ದೇಶ ಎಂದು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಚಿಕೆ ಇಲ್ಲದೆ ನಮ್ಮ ಮೇಲೆ ಆರೋಪ ಮಾಡಿದೆ. ಕೂಡಲೇ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಜೊತೆ ರಾಹುಲ್ ಗಾಂಧಿ ಬೈಕ್ ರೈಡ್
Advertisement
2013ರಿಂದ 2018ರ ಅವಧಿಯಲ್ಲಿ 35 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಜಮೀನು ಹಗರಣ ಸೇರಿದಂತೆ ಹಲವು ಅಕ್ರಮಗಳನ್ನು ಮಾಡಲಾಗಿದೆ. ಸಿದ್ದರಾಮಯ್ಯ (Siddaramaiah) ಕಾಲದಲ್ಲಿ ರೀಡೂ ಅಕ್ರಮ ಆಗಿದೆ ಎಂದು ಕೆಂಪಣ್ಣ ಆಯೋಗ ಹೇಳಿದೆ. ಈ ವರದಿ ಹೊರಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ತಡೆದರು. 40% ಆರೋಪ ವಿಚಾರ ಇಟ್ಟುಕೊಂಡು ಪ್ರಧಾನಿಗೆ ಪತ್ರ ಬರೆಸಿದರು. ಪ್ರಧಾನಿ ಕಚೇರಿ ಸೂಕ್ತ ದಾಖಲೆ ಕೊಡಿ ಎಂದು ಕೇಳಿದರೆ ಇನ್ನೂ ದಾಖಲೆ ಕೊಟ್ಟಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಮನ ನಾಡಿನಲ್ಲಿ ಚುನಾವಣಾ ಯುದ್ಧ – ಒಕ್ಕಲಿಗರ ಭದ್ರಕೋಟೆಯಲ್ಲಿ ನಿಖಿಲ್ V/S ಇಕ್ಬಾಲ್
Advertisement
ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಅನ್ನಭಾಗ್ಯ ಅಕ್ಕಿಯಲ್ಲೂ ಭ್ರಷ್ಟಾಚಾರ ಮಾಡಿದರು. ಅನ್ನಭಾಗ್ಯ ಅಕ್ಕಿ ಕಳ್ಳತನ ಮಾಡಿದರು. ಇದರ ಬಗ್ಗೆ ಸಿದ್ದರಾಮಯ್ಯ ತನಿಖೆ ಮಾಡಿಸಲೇ ಇಲ್ಲ. ಇದರ ಜಾಡು ಹಿಡಿದು ರಾಜ್ಯದ ಅಧಿಕಾರಿ ಅನುರಾಗ್ ತಿವಾರಿ ಯುಪಿಗೆ ಹೋಗುತ್ತಾರೆ. ಆದರೆ ಅವರನ್ನು ಸದ್ದಿಲ್ಲದೆ, ಯಾರಿಗೂ ಗೊತ್ತಾಗದ ಹಾಗೆ ಅಲ್ಲಿಯೇ ಕೊಲೆ ಮಾಡಲಾಯಿತು. ಅನುರಾಗ್ ತಿವಾರಿಯವರನ್ನು ಕೊಲೆ ಮಾಡಿದ್ದು ಯಾರು? ಯಾಕೆ? ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಕಾಂಗ್ರೆಸ್ ಕಾರಣ. ಅಲ್ಲದೇ ಡಿಕೆ ರವಿ ಹಾಗೂ ಗಣಪತಿ ಸಾವಿನ ಪ್ರಕರಣವನ್ನು ಸಿದ್ದರಾಮಯ್ಯ ಸರ್ಕಾರ ಮುಚ್ಚಿ ಹಾಕಿತು ಎಂದು ಆರೋಪ ಹೊರಿಸಿದರು. ಇದನ್ನೂ ಓದಿ: ನಾಳೆ SSLC ಫಲಿತಾಂಶ ಪ್ರಕಟ
ಸಿದ್ದರಾಮಯ್ಯ ಕಾಲದಲ್ಲಿ 35 ಸಾವಿರ ಕೋಟಿ ರೂ. ಅಕ್ರಮ ಆಗಿದೆ. ಇದರಲ್ಲಿ ಯಾರಿಗೆ ಎಷ್ಟು ಪಾಲು ಸಿಕ್ಕಿದೆ? ಸೋನಿಯಾ ಗಾಂಧಿಯವರಿಗೆ ಎಷ್ಟು ಸಿಕ್ಕಿದೆ? ಮಗನ ವೈದ್ಯಕೀಯ ಅಕ್ರಮ ಪ್ರಕರಣವನ್ನು ಸಿದ್ದರಾಮಯ್ಯನವರು ಮುಚ್ಚಿ ಹಾಕಿದರು. ಇಂತಹ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ನಮ್ಮ ಪ್ರಧಾನಿ ಆಗಲಿ ಅಥವಾ ಯಾವುದೇ ಸಚಿವರ ಮೇಲಾಗಲಿ ಭ್ರಷ್ಟಾಚಾರದ ಆರೋಪ ಇಲ್ಲ. ಕಾಂಗ್ರೆಸ್ ಎಂದರೆ ಕಿಕ್‌ಬ್ಯಾಕ್. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎಂದು ಕಿಡಿಕಾರಿದರು. ಇದನ್ನೂ ಓದಿ: ರೇಟ್ ಕಾರ್ಡ್ ಕೊಟ್ಟಿದ್ದು ಬಿಜೆಪಿಯವರು, ನಾವು ಪ್ರಿಂಟ್ ಮಾಡಿದ್ದೇವೆ: ಡಿಕೆಶಿ