ಧಾರವಾಡ: ಹಿಂದೆ ಚುನಾವಣೆಯಲ್ಲಿ (Election) ಮುತ್ತೈದೆಯರು ಬೆಳಿಗ್ಗೆ ಬಂದು ಮೊದಲು ಮತ ಹಾಕುತ್ತಿದ್ದರು. ಆದರೀಗ ಆ ಸಂಸ್ಕೃತಿಯನ್ನು ಕಳೆದುಕೊಂಡಿದ್ದೇವೆ. 5 ಸಾವಿರ ಕೊಟ್ಟರೆ ಮತ (Vote) ಹಾಕ್ತೇವೆ ಅನ್ನುವಂತ ಕೆಟ್ಟ ಸ್ಥಿತಿ ಸೃಷ್ಟಿಸಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಧಾರವಾಡದ (Dharwad) ಬೇಂದ್ರೆ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅವನು ಯಾವನೋ 6 ಸಾವಿರ ಕೊಟ್ಟು ಮತ ಹಾಕಿಸಿಕೊಳ್ತೇವೆ ಅಂದಿದ್ದಾನೆ. ಇನ್ನೊಬ್ಬ ಟಿಕೆಟ್‌ಗೆ (Election Ticket) 20 ಕೋಟಿ ಕೊಡ್ತೀನಿ ಅಂತಾನೆ. ನಾವೇ ಜನರನ್ನ ಭ್ರಷ್ಟರನ್ನಾಗಿ ಮಾಡ್ತಿದ್ದೇವೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ನಿಧನ – ಮೋದಿ ಸಂತಾಪ
Advertisement
Advertisement
ಚುನಾವಣೆಗೆ (Election) ಬೆಲೆ ಇಲ್ಲದಂತಾಗಿದೆ. ಈಗ ರಾಜಕೀಯಕ್ಕೆ (Politics) ರಿಯಲ್ ಎಸ್ಟೇಟ್‌ನವರೂ ಬಂದಿದ್ದಾರೆ. ಇವತ್ತಿನ ವ್ಯವಸ್ಥೆ ನೋಡಿದ್ರೆ ಎಲ್ಲಿ ನಿಂತಿದ್ದೇವೆ ಅಂತಾ ಭಯ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: PublicTV Explainer: ಕ್ಷಣ ಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾ ಭೂಮಿ? – ಭೂಗರ್ಭದ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು
Advertisement
ದಿ. ಡಿ.ಕೆ ನಾಯ್ಕರ್ ನಮ್ಮನ್ನು ಬಹಳ ಪ್ರೀತಿಯಿಂದ ಬೆಳಸಿದವರು. ಆಗ ಜಾತಿ, ದುಡ್ಡು ಏನೂ ಗೊತ್ತಿರಲಿಲ್ಲ. ಈಗ ನಾವು ಯಾರ ಹತ್ತಿರ ಹೇಳಿಕೊಳ್ಳೋಣ? ರಾಜಕಾರಣಿ ಹಾಗೂ ಮತದಾರ ಇಬ್ಬರೂ ಭ್ರಷ್ಟರಾಗಿದ್ದಾರೆ. ನಾನು ಈ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲಲ್ಲ ಎಂದು ಭಾವುಕರಾದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k