ಗದಗ: ಕಾಂಗ್ರೆಸ್ (Congress) 55 ವರ್ಷ ಆಡಳಿತ ಮಾಡಿದ್ರೂ ಗದಗ (Gadag) ಜನರ ನೀರಿನ ದಾಹ ತೀರಿಸಲಾಗಲಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಗದಗದಲ್ಲಿ ನೀರಿಗಾಗಿ ಪರದಾಡುತ್ತಿದ್ದೇವೆ. ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳು ಮರಿಚೀಕೆಯಾಗಿವೆ ಎಂದು ಗದಗ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಅನಿಲ್ ಮೆಣಸಿನಕಾಯಿ (Anil Menasinakai) ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಅಧಿಕಾರಕ್ಕೆ ಬರುವ ಯಾವುದೇ ನೈತಿಕತೆಯಿಲ್ಲ. ವಂಶ ಪಾರಂಪರಿಕ ಕುಟುಂಬ ರಾಜಕಾರಣಕ್ಕೆ (Politics) ಜನ ಬೇಸತ್ತಿದ್ದಾರೆ. ಶಾಸಕ ಹೆಚ್.ಕೆ ಪಾಟೀಲ್ (H.K.Patil) ಕೇವಲ ಹುಲಕೋಟಿಗೆ (Hulakoti) ಮಾತ್ರ ಸೀಮಿತವಾಗಿದ್ದಾರೆ. ಮೂಲಭೂತ ಸೌಲಭ್ಯಗಳು ಕೇವಲ ಹುಲಕೋಟಿಗೆ ಮಾತ್ರ ಸೀಮಿತವಾಗಿವೆ. ಗದಗ ಮತಕ್ಷೇತ್ರ ಮರೆತ ನಾಯಕರಿಗೆ ಈ ಬಾರಿ ಜನ ಪಾಠ ಕಲಿಸುತ್ತಾರೆ. ರಿಪಬ್ಲಿಕ್ ಆಫ್ ಹುಲಕೋಟಿ ಈ ಬಾರಿ ಬಂದ್ ಮಾಡುತ್ತೇವೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬಂಡಾಯದ ಸಿಡಿಲು – ಕೈ ಕಟ್ಟಾಳು ಕಾಗೋಡು ಪುತ್ರಿ ಬಿಜೆಪಿಗೆ ಸೇರ್ಪಡೆ
ಬಿಜೆಪಿ ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರ ಆಶಿರ್ವಾದದಿಂದ ಟಿಕೆಟ್ ದೊರೆತಿದೆ. ಮತ್ತೊಮ್ಮೆ ಸ್ಪರ್ಧೆ ಮಾಡಲು ಪಕ್ಷ ನನಗೆ ಅವಕಾಶ ಕಲ್ಪಿಸಿದೆ. ಬಿಜೆಪಿ ಅಲೆ ಗದಗ ಮತಕ್ಷೇತ್ರದಲ್ಲಿದೆ. ಗೆಲುವಿನ ವಾತಾರವರಣವಿದೆ. ಅಲ್ಲದೇ ಇದು ಸಂಭ್ರಮದ ಆಚರಣೆಯಾಗಿ ಪರಿವರ್ತನೆ ಆಗಿದೆ. 2018ರಲ್ಲಿ ಕೇವಲ 1,800 ಮತಗಳಿಂದ ಪರಾಭವಗೊಂಡಿದ್ದೆ. ಈ ಬಾರಿ 30 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಾತಾವರಣವಿದೆ. ಗದಗ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳಲ್ಲಿ ಭಿನ್ನಮತವಿಲ್ಲ. 4 ಜನ ಆಕಾಂಕ್ಷಿಗಳಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಒಟ್ಟಾಗಿ ಕಾಂಗ್ರೆಸ್ ಹತ್ತಿಕ್ಕುವ ಉದ್ದೇಶ ನಮ್ಮದಾಗಿದೆ. ಆಕಾಂಕ್ಷಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಎಲ್ಲರೂ ಅಭ್ಯರ್ಥಿಗಳಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಬಂಡಾಯ..!
ಟಿಕೆಟ್ ಸಿಗದೇ ಇದ್ದವರಿಗೆ ಎಲ್ಲೋ ಒಂದು ಕಡೆ ನೋವಾಗುತ್ತದೆ. ಹೈಕಮಾಂಡ್ (High Command) ತೀರ್ಮಾನಕ್ಕೆ ಬದ್ಧ ಎಂದು ಪಕ್ಷದ ಕಚೇರಿಯಲ್ಲಿ ತೀರ್ಮಾನ ಮಾಡಿದ್ದೆವೆ. ನಮ್ಮಲ್ಲಿ ಅಸಮಾಧಾನ ಇಲ್ಲ, ನಾಳೆಯಿಂದ ಎಲ್ಲರೂ ಒಟ್ಟಾಗಿ ಪ್ರಚಾರ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್. ಶಂಕರ್