ರಾಯಚೂರು: ಮುಸ್ಲಿಂ ಅಲ್ಪಸಂಖ್ಯಾತರ ಪ್ರಾಬಲ್ಯ ಹೊಂದಿರುವ, ಇದುವರೆಗೂ 7 ಬಾರಿ ಮುಸ್ಲಿಂ ಅಭ್ಯರ್ಥಿಯನ್ನೇ ಶಾಸಕರಾಗಿ ಆಯ್ಕೆ ಮಾಡಿ ವಿಧಾನಸೌಧ (Vidhanasoudha) ಕ್ಕೆ ಕಳುಹಿಸಿರುವ ರಾಯಚೂರು ನಗರ ಕ್ಷೇತ್ರ (Raichur City Constituency) ದಲ್ಲಿ ಹೃದಯರೋಗ ತಜ್ಞ ಡಾ.ಶಿವರಾಜ್ ಪಾಟೀಲ್ (Dr. Shivaraj Patil) ಸತತ ಎರಡು ಬಾರಿ ಶಾಸಕರಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.
ಯಾವುದೇ ರಾಜಕೀಯ ಅನುಭವವಿಲ್ಲದೆ ಮೊದಲ ಬಾರಿಗೆ ಜೆಡಿಎಸ್ ನಿಂದ ಚುನಾವಣೆ ಎದುರಿಸಿದ್ದ ಡಾ.ಶಿವರಾಜ್ ಪಾಟೀಲ್ 2013 ರಲ್ಲಿ ಮೊದಲ ಯತ್ನದಲ್ಲೇ ಗೆದ್ದಿದ್ದರು. ಬಳಿಕ 2018 ರಲ್ಲಿ ಜೆಡಿಎಸ್ (JDS) ತೊರೆದು ಬಿಜೆಪಿ (BJP) ಯಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದರು. ಬಿಜೆಪಿ ತುಂಬಾ ವೀಕ್ ಅನ್ನೋ ಕ್ಷೇತ್ರದಲ್ಲೇ ಭರ್ಜರಿ ವಿಜಯ ಸಾಧಿಸಿದ್ದರು.
Advertisement
Advertisement
ವೈದ್ಯ ವೃತ್ತಿಯಲ್ಲಿದ್ದ ಡಾ.ಶಿವರಾಜ್ ಪಾಟೀಲ್ ಒಂದೇ ಅವಧಿಗೆ ಮಾಗಿದ ಚುನಾವಣಾ ರಾಜಕಾರಣಿಯಾಗಿ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಗೆಲ್ಲುವ ಮೂಲಕ ಮುಸ್ಲಿಂಯೇತರ ಅಭ್ಯರ್ಥಿ ಸತತ ಎರಡು ಬಾರಿ ಎರಡು ಬೇರೆ ಬೇರೆ ಪಕ್ಷದಿಂದ ಗೆದ್ದ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಪ್ರತಿ ಬಾರಿಯೂ ಗೆದ್ದವರನ್ನು ಸೋಲಿಸುವ ಸಿಂಧನೂರು ಮತದಾರ
Advertisement
2013 ರಲ್ಲಿ ಕಾಂಗ್ರೆಸ್‍ನ ಪ್ರಬಲ ಎದುರಾಳಿ ಸೈಯದ್ ಯಾಸಿನ್ (Syed Yasin) 37392 ಮತ ಪಡೆದರೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಡಾ.ಶಿವರಾಜ್ ಪಾಟೀಲ್ 45,263 ಮತ ಪಡೆದು 7871 ಮತಗಳ ಅಂತರದಲ್ಲಿ ಗೆದ್ದಿದ್ದರು. 2018 ರಲ್ಲಿ ಸೈಯದ್ ಯಾಸಿನ್ 45,520 ಮತ ಪಡೆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಶಿವರಾಜ್ ಪಾಟೀಲ್ 56511 ಮತ ಪಡೆದು 10,991 ಮತಗಳಿಂದ ಎರಡನೇ ಬಾರಿಗೆ ಜಯಭೇರಿ ಬಾರಿಸಿದರು.
Advertisement
2023ರ ಚುನಾವಣೆಗೆ ರಾಯಚೂರು ನಗರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,21,093 ಇದ್ದು, ಇದರಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು, ಲಿಂಗಾಯತರು, ಪರಿಶಿಷ್ಟ ಜಾತಿ ಮತದಾರರು ನಿರ್ಣಾಯಕರಾಗಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ಗೆ ಸರಣಿ ಆಘಾತ – ಐವರು ನಾಯಕರು ಗುಡ್‌ಬೈ
ಕ್ಷೇತ್ರದಲ್ಲಿನ ಜಾತಿವಾರು ಅಂದಾಜು ಲೆಕ್ಕಾಚಾರ ಈ ರೀತಿಯಿದೆ:
* ಮುಸ್ಲಿಂ – 60,000
* ಪರಿಶಿಷ್ಟ ಜಾತಿ- 34,000
* ಲಿಂಗಾಯತ- 35,000
* ಪರಿಶಿಷ್ಟ ಪಂಗಡ- 24,000
* ಬಲಿಜ (ಮುನ್ನೂರುಕಾಪು)- 19,000
* ಬ್ರಾಹ್ಮಣರು- 10,000
* ಆರ್ಯವೈಶ್ಯ- 9,000 ಹಾಗೂ ಉಳಿದ ಇತರೆ ಸಮುದಾಯದ ಮತದಾರು ಇದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಲಿಂಗಾಯತ ಮತದಾರರು ಹೆಚ್ಚು ನಿರ್ಣಾಯಕರಾಗಿದ್ದಾರೆ. ಬಿಜೆಪಿ ಹಾಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಮೇಲೆ ಲಿಂಗಾಯತರ ಒಲವು ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಸತತ ಎರಡು ಬಾರಿ ಒಮ್ಮೆ ಜೆಡಿಎಸ್, ಇನ್ನೊಮ್ಮೆ ಬಿಜೆಪಿಯಿಂದ ಗೆದ್ದಿರುವ ಶಿವರಾಜ್ ಪಾಟೀಲ್‍ಗೆ ಮೂರನೇ ಚುನಾವಣೆ ಟಫ್ ಆಗಿದೆ. ಕಾಂಗ್ರೆಸ್ ನಿಂದ ಮಾಜಿ ಶಾಸಕ ಎನ್.ಎಸ್ . ಬೋಸರಾಜು ಹಾಗೂ ಮಾಜಿ ಶಾಸಕ ಸೈಯದ್ ಯಾಸಿನ್ ಟಿಕೆಟ್ ಸ್ಪರ್ಧೆಯಲ್ಲಿದ್ದಾರೆ. ಸತತ ಸೋಲು ಹಾಗೂ ಆರೋಗ್ಯ ಸಮಸ್ಯೆ ಕಾರಣಕ್ಕೆ ಸೈಯದ್ ಯಾಸಿನ್ ಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ. ಎನ್ ಎಸ್ ಬೋಸರಾಜು ಸ್ಪರ್ಧಿಸಿದರೆ ತುರಿಸಿನ ಸ್ಪರ್ಧೆ ಏರ್ಪಡಲಿದೆ, ಲಿಂಗಾಯತ, ಮುಸ್ಲಿಂ ಮತಗಳನ್ನು ಹೆಚ್ಚು ಸೆಳೆಯಲಿದ್ದಾರೆ. ಈ ಕ್ಷೇತ್ರದಲ್ಲಿ ಪಕ್ಷದ ಜೊತೆ ಅಭ್ಯರ್ಥಿಗಳೇ ಮುಖ್ಯವಾಗುತ್ತಾರೆ.
2023 ರ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಕನಸು ಕಾಣುತ್ತಿರುವ ಶಿವರಾಜ್ ಪಾಟೀಲ್‍ಗೆ ಈ ಚುನಾವಣೆ ಅಷ್ಟು ಸುಲಭವಾಗಿಲ್ಲ. ರಾಯಚೂರನ್ನ ತೆಲಂಗಾಣಕ್ಕೆ ಸೇರಿಸಿಬಿಡಿ ಅನ್ನೋ ಹೇಳಿಕೆಯಿಂದ ಸಾಕಷ್ಟು ವಿವಾದ ಸೃಷ್ಟಿಸಿದ್ದ ಶಿವರಾಜ್ ಪಾಟೀಲ್, ಸಣ್ಣಪುಟ್ಟ ವಿವಾದಗಳನ್ನ ಮೈಮೇಲೆ ಆಗಾಗ ಎಳೆದುಕೊಂಡಿದ್ದಾರೆ. ಏಮ್ಸ್ ಹೋರಾಟದ ಬಿಸಿ ಸಹ ಡಾ.ಶಿವರಾಜ್ ಪಾಟೀಲ್‍ಗೆ ತಟ್ಟುವ ಸಾಧ್ಯತೆಯಿದೆ.