ಚಿಕ್ಕಬಳ್ಳಾಪುರ: ಸತತ 60 ವರ್ಷಗಳ ಕಾಲ ಪರಿಶಿಷ್ಟರ ಮತಗಳನ್ನು ಪಡೆದ ಕಾಂಗ್ರೆಸ್ (Congress) ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಿದ ಕೊಡುಗೆ ಕೇವಲ ಶೂನ್ಯ ಎಂದು ಸಚಿವ ಡಾ.ಕೆ.ಸುಧಾಕರ್ (Dr. K. Sudhakar) ಕಿಡಿಕಾರಿದ್ದಾರೆ.
ತಾಲೂಕಿನ ಅವುಲಗುರ್ಕಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿ (BJP) ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಿದೆ. ಈ ಭಾಗದ ರೈತರು ಹೂ ಬೆಳೆಯಲು ನೀರಿನ ಸಮಸ್ಯೆ ಹಿಂದೆ ಎಷ್ಟಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಬಿಜೆಪಿ ನೀಡಿದ ಭರವಸೆಯಂತೆ ಎರಡು ವರ್ಷದಲ್ಲಿ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಲಾಗಿದೆ. ಇದರಿಂದಾಗಿ ರೈತರು ಸಮೃದ್ಧಿಯಾಗಿ ಬೆಳೆಗಳನ್ನು ಬೆಳೆಯಲು ಅನುಕೂಲವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿದ್ದಾಗ ಕಾಫಿನಾಡಿಗರು ನನ್ನ ಅಜ್ಜಿ ಕೈ ಹಿಡಿದಿದ್ದರು, ಈಗ ಕಷ್ಟದಲ್ಲಿದ್ದೇವೆ ನಮ್ಮ ಕೈ ಹಿಡಿಯಿರಿ : ಪ್ರಿಯಾಂಕ ಗಾಂಧಿ ಮನವಿ
Advertisement
Advertisement
ಚಿಕ್ಕಬಳ್ಳಾಪುರದಿಂದ (Chikkaballapur) ಕೇತೇನಹಳ್ಳಿವರೆಗೂ ಹೋಗಲು ಈ ಹಿಂದೆ ಸಾಹಸ ಪಡಬೇಕಿತ್ತು. ಈ ಅಲ್ಪ ದೂರವನ್ನು ಕ್ರಮಿಸಲು ಸುಮಾರು ಒಂದು ಗಂಟೆ ಸಮಯ ಬೇಕಿತ್ತು. ಅಂತಹ ಕೆಟ್ಟ ರಸ್ತೆಯನ್ನು ಈಗ ದುರಸ್ತಿ ಮಾಡಲಾಗಿದೆ. ಇದೇ ದೂರವನ್ನು ಈಗ ಕೇವಲ 15 ನಿಮಿಷದಲ್ಲಿ ಸೇರಬಹುದಾಗಿದೆ. ಅಲ್ಲದೆ ಈ ಪ್ರದೇಶದ ರೈತರು ಕೃಷಿಯನ್ನು ಬಿಡುವ ಸ್ಥಿತಿಗೆ ತಲುಪಿದ್ದರು. ಆದರೆ ಈಗ ಗತ ವೈಭವಕ್ಕೆ ಮರಳುವ ಕಾಲ ಇಲ್ಲಿನ ರೈತರಿಗೆ ಬಂದಿದೆ ಎಂದಿದ್ದಾರೆ.
Advertisement
Advertisement
ಜಗ್ಗಿ ವಾಸುದೇವ್ ಗುರೂಜಿ ಅವರಿಗೆ ನಾನು ಮನವಿ ಮಾಡಿದಂತೆ ಇಲ್ಲಿ ಇಶಾ ಸಂಸ್ಥೆ (Isha Foundation) ಹುಟ್ಟುಹಾಕಿದ್ದಾರೆ. ಆವುಲಗುರ್ಕಿ ಗ್ರಾಮ ಪಂಚಾಯಿತಿ ಈಗ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ರಾಜ್ಯದ 50 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿ ವಾರ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮ ಅಬಿವೃದ್ಧಿಯಾಗುತ್ತಿದೆ. ರೈತರ ಭೂಮಿಗೆ, ಬೆಳೆಗೆ ಈಗ ಬೆಲೆ ಬಂದಿದೆ. ಯುವಕರಿಗೆ ಉದ್ಯೋಗ ಸೃಷ್ಟಿಯಾಗಿದೆ. 800 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮತ್ತು 1,400 ಕೋಟಿ ರೂ. ವೆಚ್ಚದಲ್ಲಿ ಹೆಚ್‍ಎನ್ ಕಾಲುವೆ ಯೋಜನೆ ಅನುಷ್ಠಾನದ ಮೂಲಕ ಜಿಲ್ಲೆಯ ರೈತರಿಗೆ ಅನುಕೂಲ ಮಾಡಲಾಗಿದೆ ಎಂದಿದ್ದಾರೆ.
ಮಹಿಳೆಯರು ಹಾಗೂ ಯುವಕರಿಗಾಗಿ ಕೈಗಾರಿಕೆಗಳನ್ನು ತಂದು ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಕೆಲಸವನ್ನು ಮುಂದಿನ ಅವಧಿಯಲ್ಲಿ ಮಾಡಲಾಗುತ್ತದೆ. ಈ ಬಾರಿ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ