ರಾಮನಗರ: ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (D.K.Shivakumar) ಪತ್ನಿ ಉಷಾ ಶಿವಕುಮಾರ್ (Usha Shivakumar) ತನ್ನ ಪತಿಯ ಪರವಾಗಿ ಮಂಗಳವಾರ ಕನಕಪುರದ (Kanakapura) ವಿವಿಧ ವಾರ್ಡ್ಗಳಲ್ಲಿ ಪ್ರಚಾರ ನಡೆಸಿದರು.
Advertisement
ಈ ಬಾರಿ ಡಿಕೆಶಿ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ನಿಮ್ಮ ಕ್ಷೇತ್ರದ ಮಗ ಸಿಎಂ ಆಗಲು ನೀವು ಶಕ್ತಿ ತುಂಬಬೇಕು ಎಂದು ಮನೆಮನೆಗೆ ತಿರುಗಿ ಪತಿ ಡಿ.ಕೆ.ಶಿವಕುಮಾರ್ಗೆ ಮತ ನೀಡುವಂತೆ ಉಷಾ ಶಿವಕುಮಾರ್ ಮನವಿ ಮಾಡಿದರು. ಈ ವೇಳೆ ಕನಕಪುರದ ಜನತೆ ಉಷಾ ಅವರನ್ನು ಕಂಡು ಮಾತನಾಡಿಸಿ ಶುಭ ಹಾರೈಸಿದರು. ಇದನ್ನೂ ಓದಿ: ಹೊಳಲ್ಕೆರೆ ಅಖಾಡ ಹೇಗಿದೆ? ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ
Advertisement
Advertisement
ಈ ವೇಳೆ ಮಾತನಾಡಿದ ಉಷಾ, ನಾನು ವೋಟಿಂಗ್ (Voting) ಮುಗಿಯುವವರೆಗೂ ಕ್ಯಾಂಪೇನ್ ಮಾಡುತ್ತೇನೆ. ನಾನು ವೋಟ್ ಕೇಳುವುದೇ ಬೇಕಿಲ್ಲ. ಜನರೇ ಮತ ಕೊಡುತ್ತಾರೆ. ನಾನು ಪ್ರತೀ ಚುನಾವಣೆಯಲ್ಲೂ (Election) ನನ್ನ ಪತಿಯ ಪರ ಪ್ರಚಾರ ಮಾಡುತ್ತೇನೆ. ಈ ಬಾರಿಯೂ ಜನ ನಮ್ಮನ್ನು ಆಶೀರ್ವದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಲಿ ಸಚಿವರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಪೈಪೋಟಿ