ರಾಮನಗರ: ರಾಜ್ಯಾದ್ಯಂತ ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಸ್ವಗ್ರಾಮದಲ್ಲಿ ಮತದಾನ ಮಾಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಟೋ ಚಲಾಯಿಸಿ ಖುಷಿಪಟ್ಟಿದ್ದಾರೆ.
ಚುನಾವಣೆ ಹಿನ್ನೆಲೆ ಡಿಕೆಶಿ ಮತದಾನ ಮಾಡಲು ಸ್ವಗ್ರಾಮವಾದ ದೊಡ್ಡಾಲನಹಳ್ಳಿಗೆ ಬಂದಿದ್ದರು. ಮತದಾನ ಮಾಡಿದ ಬಳಿಕ ಅವರು ಆಟೋ ಹತ್ತಿ ತಾವೇ ಕೆಲ ದೂರದ ವರೆಗೆ ಆಟೋವನ್ನು ಓಡಿಸಿದ್ದಾರೆ. ಇದನ್ನೂ ಓದಿ: ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ವಿಜಯಪುರ ಗ್ರಾಮಸ್ಥರು
ಸ್ವಗ್ರಾಮದಲ್ಲಿ ಆಟೋ ಓಡಿಸಿ ಡಿಕೆಶಿ ಖುಷಿ ಪಟ್ಟರೆ, ಇದೇ ವೇಳೆ ಗ್ರಾಮಸ್ಥರು ಶಿವಕುಮಾರ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಇದನ್ನೂ ಓದಿ: Karnataka Election 2023 Live – ಹೆಲಿಕಾಪ್ಟರ್‌ನಲ್ಲಿ ಬಂದು ವೋಟ್ ಹಾಕಿದ ಹೆಚ್‌ಡಿಡಿ