ಬೆಳಗಾವಿ: ಕಿತ್ತೂರು ಕ್ಷೇತ್ರ (Kittur Constituency) ದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೆ ಅಸಮಾಧಾನ ಭುಗಿಲೆದಿದ್ದು, ಕಿತ್ತೂರು ಕ್ಷೇತ್ರಕ್ಕೆ ಬಾಬಾಸಾಹೇಬ್ ಪಾಟೀಲ್‍ಗೆ ಟಿಕೆಟ್ ಹಂಚಿಕೆಗೆ ಕ್ಷೇತ್ರದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಲಾಬಿಗೆ ಮಣಿದು ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ (Congress Ticket) ಹಂಚಿಕೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಟಿಕೆಟ್ ಹಂಚಿಕೆ ಬೆನ್ನಲ್ಲೆ ಕಾಂಗ್ರೆಸ್ ಮುಖಂಡ, ಸತೀಶ್ ಜಾರಕಿಹೊಳಿ ಆಪ್ತ ಹಬೀಬ್ ಶಿಲೇದಾರ್ ಅಸಮಾಧಾನ ಹೊರಹಾಕಿದ್ದು, ಹೈಕಮಾಂಡ್ ಮಾಡಿದ ಎಡುವಟ್ಟು ಕ್ಷೇತ್ರದಲ್ಲಿ ಸೋಲು ಅನುಭವಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಾಖಲೆ ಇಲ್ಲದ ಹಣವನ್ನು ಸೊಂಟಕ್ಕೆ ಕಟ್ಟಿಕೊಂಡು ಬಂದ ಖತರ್ನಾಕ್ ವ್ಯಕ್ತಿಗಳು!
ಕಿತ್ತೂರು ಕ್ಷೇತ್ರದಲ್ಲಿ ಬಂಡಾಯದ ಮುನ್ಸೂಚನೆಯನ್ನ ನೀಡಿರುವ ಮುಖಂಡ ಶಿಲೇದಾರ, ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್, ವಿನಯ ಕುಲಕರ್ಣಿ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡ ಬಾಬಾಸಾಹೇಬ್ ಪಾಟೀಲ್‍ಗೆ ಬಂಡಾಯದ ಭೀತಿ ಎದುರಾಗಿದ್ದು ಕಿತ್ತೂರಲ್ಲಿ ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮಿ ಇನಾಮದಾರ್, ಹಬೀಬ್ ಶಿಲೇದಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು.ಟಿಕೆಟ್ ಕೈ ತಪ್ಪಿದಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಕಣಕ್ಕಿಳಿಯಲು ಲಕ್ಷ್ಮಿ, ಹಬೀಬ್ ನಿರ್ಧಾರ ಮಾಡಿದ್ದಾರೆ.