ದಾವಣಗೆರೆ: ಬಿಜೆಪಿ (BJP) ಮಾಜಿ ಸಚಿವ 77 ವರ್ಷದ ಹಿರಿಯ ನಾಯಕ ಎಸ್.ಎ ರವೀಂದ್ರನಾಥ್ (S.A Ravindranath) ಅನಾರೋಗ್ಯದ ಕಾರಣ ನೀಡಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಬಿ.ಎಸ್ ಯಡಿಯೂರಪ್ಪ (B.S Yediyurappa) ಬಳಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ದಾವಣಗೆರೆಯ (Davanagere) ಶಿರಮಗೊಂಡನಹಳ್ಳಿಯ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾರೋಗ್ಯ ಹಾಗೂ ವಯಸ್ಸಾದ ಕಾರಣ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ನನಗೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವರಿಷ್ಠರ ಗಮನಕ್ಕೆ ತಂದಿದ್ದೇನೆ. ಅದರಲ್ಲೂ ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲೂ ಟಿಕೆಟ್ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಹೆಸರಲ್ಲಿ ಸುಳ್ಳು ಪೋಸ್ಟ್- ಮೂವರ ವಿರುದ್ಧ ಎಫ್‍ಐಆರ್
Advertisement
ಹೊಸಬರಿಗೆ ಅವಕಾಶ ಕೊಡಿ, ಅವರನ್ನು ಗೆಲ್ಲಿಸುವ ಪ್ರಯತ್ನ ನಾವು ಮಾಡುತ್ತೆವೆ. ಈಗಾಗಲೇ ಯಡಿಯೂರಪ್ಪ ನವರು ಸ್ವಯಂ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಅವರಾದ ನಂತರ ಪಕ್ಷದಲ್ಲಿ ಇರುವುದು ಹಿರಿಯ ಅಂದರೆ ನಾನೇ. ಅದ್ದರಿಂದ ನಾನು ಕೂಡ ನಿವೃತ್ತಿ ಘೋಷಣೆ ಮಾಡಿದ್ದೇನೆ ಎಂದಿದ್ದಾರೆ.
Advertisement
Advertisement
ಕಾಂಗ್ರೆಸ್‍ನ (Congress) 92 ವರ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarapp) ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಅವರಿಗೆ ದೇವರು ಆರೋಗ್ಯ ಚನ್ನಾಗಿ ಕೊಟ್ಟಿದ್ದಾರೆ. ಬಿಪಿ ಶುಗರ್ ಇಲ್ಲದೆ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ಆದರೆ ನನ್ನ ವಿಚಾರದಲ್ಲಿ ಆ ರೀತಿ ಇಲ್ಲ. ಆರೋಗ್ಯ ಸರಿ ಇಲ್ಲದ ಕಾರಣ ನಾನೇ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದೇನೆ. ನನ್ನ ಬಳಿ ಬೆಂಬಲಿಗರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಅವರಿಗೂ ಮನವರಿಕೆ ಮಾಡಿದ್ದೇನೆ. ಅಭಿಮಾನಿಗಳು ಒತ್ತಾಯ ಮಾಡಿದರೆ ನಾನು ಚೆನ್ನಾಗಿರಬಾರದು ಅಂದುಕೊಂಡಿದ್ದಾರೆ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಅವರ ಹುಟ್ಟು ಹಬ್ಬಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ದಾವಣಗೆರೆ ಉತ್ತರಕ್ಕೆ ಎಸ್.ಎ ರವೀಂದ್ರನಾಥ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆದರೆ ಅನಾರೋಗ್ಯ ಹಾಗೂ ವಯಸ್ಸಾದ ಕಾರಣ ಬಿಜೆಪಿಯ ಹಿರಿಯ ಮುಖಂಡ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.
ಶಾಸಕರ ನಿವಾಸದ ಮುಂದೆ ಅವರ ಬೆಂಬಲಿಗರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದು ನೀವು ಕೇವಲ ನಾಮಪತ್ರ ಸಲ್ಲಿಕೆ ಮಾಡಿದರೆ ಸಾಕು. 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಎನ್ನುವ ಬಂಡೆಗೆ ಬಂಡೆಯೇ ಡಿಕ್ಕಿ ಹೊಡೆಯಬೇಕು. ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್ ಮಲ್ಲಿಕಾರ್ಜುನ ಅವರಿಗೆ ಸರಿಯಾದ ಪ್ರತಿಸ್ಪರ್ಧಿ ಎಂದರೆ ನೀವು ಎಂದು ಒತ್ತಾಯಿಸಿದ್ದಾರೆ.
ಶಾಸಕರು, ರೈತ ಹೋರಾಟಗಾರರಾಗಿ, ಸಂಘ ಪರಿವಾರದ ಕಾರ್ಯಕರ್ತರಾಗಿ, ಗ್ರಾಮ ಪಂಚಾಯತಿ ಚುನಾವಣೆ ಮಟ್ಟದಲ್ಲಿ 90ರ ದಶಕದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಇದುವರೆಗೂ 5 ಬಾರಿ ಶಾಸಕರಾಗಿದ್ದು, 1994, 1999, 2004ರಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಹಿನ್ನೆಲೆ ದಾವಣಗೆರೆ ಉತ್ತರದಲ್ಲಿ ಎಸ್.ಎ ರವೀಂದ್ರನಾಥ್ 2008 ಮತ್ತು 2018 ರಲ್ಲಿ ಗೆಲವು ಸಾಧಿಸಿ 5 ಬಾರಿ ಶಕ್ತಿಸೌಧಕ್ಕೆ ಪ್ರವೇಶ ಮಾಡಿದ್ದಾರೆ. 2008 ರಲ್ಲಿ ಕೃಷಿ ಸಚಿವರಾಗಿ, 2010ರಲ್ಲಿ ತೋಟಗಾರಿಕಾ ಸಚಿವರಾಗಿ ಕೆಲಸ ಮಾಡಿದ್ದರು. ಇದನ್ನೂ ಓದಿ: ಕೋಲಾರ ಕೈ ನಾಯಕ ಶೇಷಾಪುರ ಗೋಪಾಲ್ ಜೆಡಿಎಸ್ ಖಾಸಗಿ ಸಭೆಯಲ್ಲಿ ಭಾಗಿ: ಪಕ್ಷಾಂತರ ಗೊಂದಲಕ್ಕೆ ಸ್ಪಷ್ಟನೆ