ಮಂಡ್ಯ: ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯ ರೀತಿ ಈ ಬಾರಿಯೂ ಜೆಡಿಎಸ್ (JDS) ವಿರುದ್ಧ ಕುತಂತ್ರದ ರಾಜಕೀಯಕ್ಕೆ ಕಾಂಗ್ರೆಸ್ (Congress), ಬಿಜೆಪಿ (BJP) ಹಾಗೂ ರೈತ ಸಂಘ ಒಟ್ಟಾಗಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಆರೋಪಿಸಿದ್ದಾರೆ.
ಕೆ.ಆರ್.ಪೇಟೆಯಲ್ಲಿ (K.R.Pete) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮಣಿಸಲು ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಕುತಂತ್ರದ ರಾಜಕೀಯ ಶುರುವಾಗಿದೆ. ಜಿಲ್ಲೆಯ ಜನರಿಗೆ ಕಾಂಗ್ರೆಸ್, ಬಿಜೆಪಿ ಹಾಗೂ ರೈತ ಸಂಘ ಮೋಸ ಮಾಡಲು ಮುಂದಾಗಿವೆ. ಇಂತಹ ಕುತಂತ್ರಗಳ ವಿರುದ್ಧ ಮತದಾರರೇ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕೆಲಸಕ್ಕೆ ಗುಡ್ ಬೈ ರಾಜಕೀಯಕ್ಕೆ ಜೈ ಎಂದ ಸರ್ಕಾರಿ ಅಧಿಕಾರಿ
Advertisement
Advertisement
ಕುತಂತ್ರದ ರಾಜಕೀಯಕ್ಕೆ ಮೇಲುಕೋಟೆ (Melukote) ಕ್ಷೇತ್ರ ಹೆಸರಿಗೆ ಅಷ್ಟೇ ಒಂದು ಉದಾಹರಣೆ. ಜೆಡಿಎಸ್ ಬಗ್ಗೆ ಎಲ್ಲಾ ಕಡೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಆಂತರಿಕ ಒಳ ಒಪ್ಪಂದಗಳು ಬಹಳ ವರ್ಷದಿಂದ ಇದೆ. ಆಪರೇಶನ್ ಕಮಲದಿಂದಲೂ ಇದು ನಡೆಯುತ್ತಿದೆ. ಈ ಸೇಡನ್ನೂ ಜೆಡಿಎಸ್ ಹಾಗೂ ಮತದಾರರು ತೀರಿಸಿಕೊಳ್ಳುತ್ತಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕುತಂತ್ರದ ಫಲಿತಾಂಶ ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನ ಆ ಸೇಡನ್ನು ತೀರಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು: ಎಚ್‌ಡಿಡಿ ಬಗ್ಗೆ ಎಚ್‌ಡಿಕೆ ಭಾವುಕ