ಜೆಡಿಎಸ್ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ : ಸಿ.ಟಿ. ರವಿ

Public TV
1 Min Read
CT Ravi 1

ಚಿಕ್ಕಮಗಳೂರು: ನಮ್ಮ ಮೊದಲ ರಾಜಕೀಯ ವಿರೋಧಿ ಜೆಡಿಎಸ್ (JDS) ಎಂದು ಅಮಿತ್ ಶಾ (Amit Shah) ಹೇಳಿದ್ದಾರೆ. ಹೀಗಿರುವಾಗ ಹೊಂದಾಣಿಕೆ ಎಲ್ಲಿಂದ? ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಕೂಡ ನಾವು ಯಾವುದೇ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಹೊಂದಾಣಿಕೆಯಾಗಿದ್ರೆ, ಹೆಚ್‍ಡಿಕೆ ವಿರುದ್ಧ ಯೋಗೀಶ್ವರ್ ಸ್ಪರ್ಧೆ ಮಾಡುತ್ತಿರಲಿಲ್ಲ. ನನ್ನ ವಿರುದ್ಧ ಜೆಡಿಎಸ್ ಅಭ್ಯರ್ಥಿ 32 ಸಾವಿರ ಮತ ತೆಗೆದುಕೊಂಡರು. ಹೊಂದಾಣಿಕೆ ಮಾಡಿದ್ರೆ ಅಷ್ಟು ಮತಗಳ ತೆಗೆದುಕೊಳ್ತಿದ್ರಾ? ನಮಗೆ ಹೊಂದಾಣಿಕೆ ಅಗತ್ಯವಿಲ್ಲ, ಬಿಜೆಪಿ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.

JDS FLAG 1

ವರುಣಾದಲ್ಲಿ ಸಿದ್ದು ವಿರುದ್ಧ ಬಿಜೆಪಿಯಿಂದ ಯಾರು ಸ್ಪರ್ಧಿ ಎನ್ನುವುದನ್ನು ಪಾರ್ಲಿಮೆಂಟರಿ ಬೋರ್ಡ್ ಸಿದ್ಧ ಮಾಡುತ್ತದೆ. ನಾವು ಯಾರ ವಿರುದ್ಧ ಅಂತಿಲ್ಲ, ನಾವು ಬಿಜೆಪಿ ಪರ ಅಷ್ಟೆ. ನಮ್ಮದು ವೈಚಾರಿಕ ರಾಜಕೀಯ ಪಕ್ಷವಾಗಿದ್ದು, ನಮ್ಮ ಪಕ್ಷದ ವಿಚಾರವನ್ನು ಬೆಳೆಸೋದಷ್ಟೆ ನಮ್ಮ ಗುರಿ. ನಮ್ಮದು ನಕಾರಾತ್ಮಕ ರಾಜಕೀಯ ಅಲ್ಲ, ಸಕಾರಾತ್ಮಕ ರಾಜಕೀಯ, ಪಕ್ಷ ಬೆಳೆಸುವುದು ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಗುರಿ ಮುಟ್ಟುವವರೆಗೂ ನಾನು ವಿರಮಿಸುವುದಿಲ್ಲ: ಹೆಚ್.ಡಿ ಕುಮಾರಸ್ವಾಮಿ

madal virupakshappa 1 1

ಮಾಡಾಳು ವಿರೂಪಾಕ್ಷಪ್ಪ ಬಂಧನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಎಲ್ಲರಿಗೂ ಒಂದೇ, ಕಾನೂನು ಅದರ ಕೆಲಸ ಮಾಡುತ್ತದೆ. ತನಿಖೆ ಹಂತದಲ್ಲಿ ನಾವು ಮಧ್ಯಪ್ರವೇಶ ಮಾಡುವ ಪ್ರಶ್ನೆಯೇ ಇಲ್ಲ. ನಾವು ಕಾನೂನಿಗಿಂತ ಮಿಗಿಲು ಅಂತ ಕಾಂಗ್ರೆಸ್ಸಿನ ಒಂದು ಕುಟುಂಬ ಭಾವಿಸುತ್ತದೆ. ಸಂವಿಧಾನ, ಕಾನೂನಿಗಿಂತ ಮಿಗಿಲು ಹಾಗೂ ಎತ್ತರದಲ್ಲಿ ಇರುವವರು ಭಾವಿಸುತ್ತದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಕಾನೂನು ಅದರ ಕೆಲಸ ಅದು ಮಾಡುತ್ತದೆ ಎಂದರು. ಇದನ್ನೂ ಓದಿ: ಅನಧಿಕೃತವಾಗಿ ಮಹಾರಾಷ್ಟ್ರ ಸರ್ಕಾರಿ ಬಸ್‍ನಲ್ಲಿ ಸಾಗಿಸ್ತಿದ್ದ 27.34 ಲಕ್ಷ ರೂ. ಜಪ್ತಿ

Share This Article