– ಘೋಷಣೆ ಮಾಡುವುದಲ್ಲ ಕೆಲಸ ಮಾಡಬೇಕು ಎಂದ ಸಚಿವ
– ಬುರುಡೇ ಬಿಡುವುದಲ್ಲ, ಮಲ್ಲೇಶ್ವರಂನಲ್ಲಿ ಅಭಿವೃದ್ಧಿ ಮಾಡಲಿ
ರಾಮನಗರ: ರೇಷ್ಮೆನಾಡು ರಾಮನಗರದಲ್ಲಿ (Ramanagara) ಬಿಜೆಪಿ, ಜೆಡಿಎಸ್ ನಡುವಿನ ಟಾಕ್ ಫೈಟ್ ಮುಂದುವರಿದಿದೆ. ಹಾರೋಹಳ್ಳಿ ನೂತನ ತಾಲೂಕು ಕೇಂದ್ರ ಉದ್ಘಾಟನಾ ಸಮಾರಂಭ ಮತ್ತೊಂದು ಮಾತಿನ ಜಟಾಪಟಿಗೆ ಸಾಕ್ಷಿಯಾಗಿದೆ. ಸಚಿವ ಅಶ್ವಥ್ ನಾರಾಯಣ್ (Ashwath Narayan) ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ನಡುವೆ ಅಭಿವೃದ್ಧಿ ವಿಚಾರದ ಬಗ್ಗೆ ಕ್ರೆಡಿಟ್ ವಾರ್ ನಡೆದಿದ್ದು ವೇದಿಕೆ ಮೇಲೆಯೇ ಇಬ್ಬರು ವಾಗ್ವಾದ ನಡೆಸಿದ್ದಾರೆ.
Advertisement
ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಬಿಟ್ಟು ಕಚೇರಿ ಉದ್ಘಾಟನೆ ನಡೆಸಿದ್ದ ಜೆಡಿಎಸ್ (JDS) ಕಾರ್ಯಕರ್ತರನ್ನ ಕೆರಳಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಕಿಡಿಕಾರಿದ್ದಾರೆ.
Advertisement
Advertisement
ನೂತನ ತಾಲೂಕು ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್, ನಮ್ಮ ಸರ್ಕಾರದಲ್ಲಿ ಈಗ ಎರಡು ತಾಲೂಕು ಕೇಂದ್ರ ಮಾಡಿದ್ದೇವೆ. ತಾಲೂಕು ಕೇಂದ್ರಕ್ಕೆ ಪೋಸ್ಟ್ ಸ್ಯಾಂಕ್ಷನ್ ಮಾಡಿದ್ದೇವೆ. ಇದು ಕೇವಲ ಒಂದು ದಿನದಲ್ಲಿ ಆಗುವ ಕೆಲಸ ಅಲ್ಲ. ಚುನಾವಣೆ ಸಮಯದಲ್ಲಿ ವೇಗವಾಗಿ ಕೆಲಸ ಮಾಡಿ ತಾಲೂಕು ರಚನೆ ಆಗಿದೆ. ರಾಮನಗರ ಜಿಲ್ಲೆಗೆ ಶೈಕ್ಷಣಿಕ ಯೋಜನೆ ನೀಡಲಾಗುತ್ತಿದೆ. ಹಿಂದೆ ಬೇಸಿಗೆ ಅರಂಭ ಆದರೆ ಜಿಲ್ಲೆಯಲ್ಲಿ ಕುಡಿಯಲು ನೀರು ಇರುತ್ತಿರಲಿಲ್ಲ. 450 ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ಮೂಲಕ ನೀರು ನೀಡಿದ್ದು ನಮ್ಮ ಸರ್ಕಾರ. 1800 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ತಂದಿದ್ದೇವೆ ಎಂದರು.
Advertisement
ಈ ಹೇಳಿಕೆ ಬರುತ್ತಿದ್ದಂತೆ ವೇದಿಕೆಯಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ಕಾಲದಲ್ಲೇ ಘೋಷಣೆ ಆಗಿತ್ತು ಎಂದು ಅನಿತಾ ಕುಮಾರಸ್ವಾಮಿ ಹೇಳಿದರು. ಮಾತು ಮುಂದುವರಿಸಿದ ಸಚಿವ ಅಶ್ವಥ್ ನಾರಾಯಣ್, ಆಗಲಿ ಮೇಡಂ ನಿಮ್ಮ ಸರದಿ ಬಂದಾಗ ಬಂದು ಹೇಳಿ. ಘೋಷಣೆ ಎಲ್ಲರೂ ಮಾಡುತ್ತಾರೆ. ಆದರೆ ಕೆಲಸ ಮಾಡಬೇಕು ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ- ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆ
ನಂತರ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಅಧ್ಯಕ್ಷತೆಗೆ ನನ್ನ ಹೆಸರು ಹಾಕಿ ನಾನು ಬರುವುದಕ್ಕೂ ಮುನ್ನವೇ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ. ಕಾಟಾಚಾರಕ್ಕೆ ನನ್ನನ್ನ ಕರೆದಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಈ ಹಾರೋಹಳ್ಳಿ ತಾಲೂಕು ರಚನೆಗೆ ನನ್ನ ಶ್ರಮ ಇದೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನೂತನ ತಾಲೂಕುಗೆ ಅನುಮೋದನೆ ಪಡೆದಿದ್ದೇನೆ. ಈಗ ಪೋಸ್ಟ್‌ಗಳ ಅನುಮೋದನೆ ಮಾಡುವ ಬಗ್ಗೆಯೂ ಸರ್ಕಾರಕ್ಕೆ ಪತ್ರ ಬರೆದು ಕೆಲಸ ಮಾಡಿಸಿದ್ದೇನೆ. ಉಸ್ತುವಾರಿ ಸಚಿವರು ಈಗ ಹೇಳಿದ ನೀರಾವರಿ ಯೋಜನೆ ಆಗಿದ್ದೂ ಕುಮಾರಸ್ವಾಮಿ ಕಾಲದಲ್ಲಿ. ಈ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಅವರನ್ನು ನಾನು ಕರೆದಿದ್ದೆ. ಆದರೆ ಅವರು ಪಂಚರತ್ನ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ ಎಂದರು.
ಕುಮಾರಸ್ವಾಮಿ ಬಂದಿದ್ದರೆ ಬೇರೆ ಯಾರೂ ಮಾತನಾಡ್ತಿರಲಿಲ್ಲ ಎಂದು ಉಸ್ತುವಾರಿ ಸಚಿವರಿಗೆ ಅನಿತಾ ಕುಮಾರಸ್ವಾಮಿ ಟಾಂಗ್ ನೀಡಿದ್ರು. ಅಲ್ಲದೇ ಉಸ್ತವಾರಿ ಸಚಿವರಿಗೆ ಬರೀ ಬುರುಡೆ ಬಿಡೋದಷ್ಟೇ ಮಾತ್ರ ಇವರಿಗೆ ಗೊತ್ತು. ಸಚಿವರು ಮೊದಲು ಮಲ್ಲೇಶ್ವರಂಗೆ ಹೋಗಿ ಅಭಿವೃದ್ಧಿ ಮಾಡಲಿ. ನಾನು ಶಿವನ ಭಕ್ತೆ, ಮಲ್ಲೇಶ್ವರಂನ ಕಾಡುಮಲ್ಲೇಶ್ಚರ ದೇವಸ್ಥಾನಕ್ಕೆ ಹೋಗುತ್ತಿರುತ್ತೇನೆ. ಅಲ್ಲಿಯ ಅಭಿವೃದ್ಧಿಯನ್ನೂ ನೋಡಿದ್ದೇನೆ. ಕಾರ್ಯಕ್ರಮ ಮಗಿಯೋವರೆಗೂ ಸಚಿವರು ಇರಬೇಕಿತ್ತು. ಅವರ ಸಾಧನೆ ಬಗ್ಗೆ ಹೇಳುತ್ತಿದ್ದೆ ಎಂದು ಕಾರ್ಯಕ್ರಮದಿಂದ ಅರ್ಧಕ್ಕೆ ಹೋದ ಸಚಿವ ಅಶ್ವಥ್ ನಾರಾಯಣ್‌ಗೆ ತಿರುಗೇಟು ನೀಡಿದರು.
ತಾಲೂಕು ಕೇಂದ್ರದ ಶಿಲಾನ್ಯಾಸ ಫಲಕದಲ್ಲಿ ಕುಮಾರಸ್ವಾಮಿ ಹೆಸರನ್ನು ಸಣ್ಣದಾಗಿ ಹಾಕಿದ್ದಾರೆ. ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಗೌತಮ್ ಗೌಡ ಹೆಸರನ್ನು ದಪ್ಪಕ್ಷರಗಳಿಂದ ಹಾಕಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಬಳಿಕ ಕಾರ್ಯಕರ್ತರನ್ನ ಪೊಲೀಸರು ಸಮಾಧಾನ ಪಡಿಸಿದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k