– ದೆಹಲಿಯಲ್ಲಿ ಹೈಕಮಾಂಡ್ ಅಂತಿಮ ಮುದ್ರೆ
ಬೆಂಗಳೂರು: ಚುನಾವಣೆ (Karnataka Election 2023) ಸನಿಹದಲ್ಲಿ ಟಿಕೆಟ್ ಪಾಲಿಟಿಕ್ಸ್ ಜೋರಾಗಿದೆ. ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ( First List Of Candidates) ಇಂದು ಪ್ರಕಟಿಸುವ ಸಾಧ್ಯತೆಯಿದೆ.
Advertisement
ಕಳೆದ ವಾರ ಬೆಂಗಳೂರಿನ ಹೋಟೆಲ್‌ನಲ್ಲಿ ಸ್ಕ್ರೀನಿಂಗ್ ಕಮಿಟಿ ಸದಸ್ಯರು, ಸಿದ್ದರಾಮಯ್ಯ , ಡಿಕೆಶಿ ಜೊತೆಗೂಡಿ 170 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರು ಮಾಡಿ ದೆಹಲಿಗೆ ಕಳಿಸಿಕೊಟ್ಟಿದ್ದರು.
Advertisement
ಈ ಬಗ್ಗೆ ವಿದೇಶದಿಂದ ಮೊನ್ನೆ ಬಂದಿಳಿದ ರಾಹುಲ್ ಗಾಂಧಿ (Rahul Gandhi) ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸರಣಿ ಸಭೆ ನಡೆಸಿ ಮೊದಲ ಪಟ್ಟಿಯನ್ನು ಫೈನಲ್ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಿಂಗಲ್ ಹೆಸರು ಅಖೈರು ಮಾಡಲಾಗಿದೆ. ತೀವ್ರ ಸ್ಪರ್ಧೆ ಇರುವ ಕ್ಷೇತ್ರಗಳಿಗೆ ಎರಡೆರೆಡು ಹೆಸರನ್ನು ಶಾರ್ಟ್‍ಲಿಸ್ಟ್ ಮಾಡಲಾಗಿದೆ.
Advertisement
Advertisement
ಇಂದು ನಡೆಯಲಿರುವ ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮವಾಗಿ ಚರ್ಚಿಸಿ ಪಟ್ಟಿಯನ್ನು ರಿಲೀಸ್ ಮಾಡಲು ಹೈಕಮಾಂಡ್ ಮುಂದಾಗಿದೆ. ರಾಜ್ಯ ಉಸ್ತುವಾರಿ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೂಲಗಳ ಪ್ರಕಾರ ಮೂರ್ನಾಲ್ಕು ಶಾಸಕರಿಗೆ ಹೊರತುಪಡಿಸಿ ಉಳಿದಂತೆ ಬಹುತೇಕ ಶಾಸಕರಿಗೆ ಮತ್ತೆ ಟಿಕೆಟ್ ಸಿಗಲಿದೆ. ಮೊದಲ ಹಂತದಲ್ಲಿ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಹೀಗಾಗಿಯೇ ದೆಹಲಿ ಮಟ್ಟದಲ್ಲಿ ಟಿಕೆಟ್ ಆಕಾಂಕ್ಷಿಗಳ ಲಾಬಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್ ದರ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು – ಟಿಕೆಟ್ ಬುಕ್ ಮಾಡೋದು ಹೇಗೆ?
ಪ್ರಮುಖರಿಗೆ ಟಿಕೆಟ್ ಫಿಕ್ಸ್
* ಕೋಲಾರ – ಸಿದ್ದರಾಮಯ್ಯ
* ಕನಕಪುರ – ಡಿ.ಕೆ. ಶಿವಕುಮಾರ್
* ಕೊರಟಗೆರೆ – ಜಿ. ಪರಮೇಶ್ವರ್
* ನಾಗಮಂಗಲ – ಚಲುವರಾಯಸ್ವಾಮಿ
* ಸೊರಬ – ಮಧು ಬಂಗಾರಪ್ಪ
* ಹೊಸಕೋಟೆ – ಶರತ್ ಬಚ್ಚೇಗೌಡ
ಟಿಕೆಟ್‍ಗಾಗಿ ಎಲ್ಲೆಲ್ಲಿ ಫೈಟ್?
* ಪುಲಕೇಶಿನಗರ – ಅಖಂಡ ಶ್ರೀನಿವಾಸಮೂರ್ತಿ/ ಪ್ರಸನ್ನಕುಮಾರ್
* ರಾಜಾಜಿನಗರ – ಪುಟ್ಟಣ್ಣ/ಪುಟ್ಟರಾಜು/ಪದ್ಮಾವತಿ
* ಮದ್ದೂರು – ಗುರುಚರಣ್/ಉದಯ್‍ಗೌಡ
* ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್/ಮಂಜುನಾಥ್‍ಗೌಡ
* ತುಮಕೂರು ನಗರ- ರಫೀಕ್ ಅಹ್ಮದ್/ಅಟ್ಟಿಕಾ ಬಾಬು
* ಚಿತ್ರದುರ್ಗ – ರಘು ಆಚಾರ್/ವೀರೇಂದ್ರ ಪಪ್ಪಿ
* ಮುಳಬಾಗಿಲು – ನಾರಾಯಣಸ್ವಾಮಿ/ಕೊತ್ತನೂರು ಮಂಜು
ಬೇರೆ ಪಕ್ಷದಲ್ಲಿದ್ದವರಿಗೆ ಟಿಕೆಟ್
* ಅರಸೀಕೆರೆ – ಶಿವಲಿಂಗೇಗೌಡ
* ಅರಕಲಗೂಡು – ಎ.ಟಿ.ರಾಮಸ್ವಾಮಿ/ಶ್ರೀಧರ್/ಕೃಷ್ಣೇಗೌಡ
* ಗುಬ್ಬಿ – ಶ್ರೀನಿವಾಸ್ ಗುಬ್ಬಿವಾಸು
ಯಾರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ?
* ಲಿಂಗಸೂರು – ಶಾಸಕ ಡಿಎಸ್ ಹುಲಗೇರಿ
* ಕುಂದಗೋಳ – ಶಾಸಕಿ ಕುಸುಮ ಶಿವಳ್ಳಿ
* ಪಾವಗಡ – ಶಾಸಕ ವೆಂಕಟರಮಣಪ್ಪ (ವಯಸ್ಸಿನ ಕಾರಣಕ್ಕೆ)
* ಅಫ್ಜಲಪುರ – ಶಾಸಕ ಎಂ.ವೈ ಪಾಟೀಲ್ (ವಯಸ್ಸಿನ ಕಾರಣಕ್ಕೆ)