ಬೆಂಗಳೂರು: ಬಿಜೆಪಿಯ ಸ್ಟಾರ್ ಪ್ರಚಾರಕ ಅಣ್ಣಾಮಲೈ (Annamalai) ವಿರುದ್ಧ ಕರ್ನಾಟಕ ಕಾಂಗ್ರೆಸ್ (Karnataka Congress) ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ.
ದೂರು ನೀಡಿದ ಬಳಿಕ ಮಾತನಾಡಿದ ಕೆಪಿಸಿಸಿ (KPCC) ವಕ್ತಾರ ನಟರಾಜ್ ಗೌಡ, ತಮ್ಮ ವರ್ಚಸ್ಸು ಬಳಸಿಕೊಂಡು ಹಣ ಸಾಗಾಣಿಕೆ ಮಾಡಬಹುದು ಚುನಾವಣಾ ಅಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ನಮ್ಮ ಕಾಂಗ್ರೆಸ್ ನಾಯಕರು ನಮಗೆ ದೂರು ನೀಡಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ನಾವು ದೂರು ನೀಡಿದ್ದೇವೆ ಎಂದು ತಿಳಿಸಿದರು.
Advertisement
Advertisement
ದೂರಿನಲ್ಲಿ ಏನಿದೆ?
ಮಾಜಿ ಐಪಿಎಸ್ ಆಗಿರುವ ಅಣ್ಣಾಮಲೈ ಈ ಹಿಂದೆ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಹಲವು ಪೊಲೀಸರ ಪರಿಚಯವಿದೆ. ಚುನಾವಣೆ ಸಮಯದಲ್ಲಿ ಬಹಳ ಮುಖ್ಯವಾದ ಹುದ್ದೆಯಲ್ಲಿ ಅಣ್ಣಾಮಲೈ ಅವರ ಪರಿಚಯಸ್ಥ ಬ್ಯಾಚ್‌ಮೇಟ್‌ಗಳು ಕರ್ತವ್ಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಾಲಕಿಯ ಪಲ್ಲವಗಳ ಪಲ್ಲವಿಯಲ್ಲಿ ಹಾಡನ್ನು ಕೊಂಡಾಡಿದ ಮೋದಿ
Advertisement
Advertisement
ಐಪಿಎಸ್ ಅಧಿಕಾರಿಗಳು, ಪೊಲೀಸರ ಪರಿಚಯ ಇರುವ ಕಾರಣ ಅಧಿಕಾರ ದುರ್ಬಳಕೆಯಾಗುವ ಸಾಧ್ಯತೆಯಿದೆ. ಅಣ್ಣಾಮಲೈ ಅವರು ರಾಜ್ಯವಾಪಿ ಓಡಾಟ ನಡೆಸುವುದರಿಂದ ಅವರ ವಾಹನದಲ್ಲಿ ಹಣ ಸಾಗಾಟ ಮಾಡುವ ಸಾಧ್ಯತೆಯಿದೆ. ಇಲ್ಲಿಯವರೆಗೆ ಅವರ ವಾಹನವನ್ನು ಪರಿಶೀಲಿಸಿಲ್ಲ. ಈ ಕಾರಣಕ್ಕೆ ಚುನಾವಣೆ ಮುಗಿಯವವರೆಗೂ ಅವರ ಕರ್ನಾಟಕ ಪ್ರವಾಸಕ್ಕೆ ಅನುಮತಿ ನೀಡಿದ್ದನ್ನು ರದ್ದು ಪಡಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.