ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election 2023) ಅಖಾಡ ದಿನದಿಂದ ದಿನಕ್ಕೆ ಗರಿಗೆದರುತ್ತಿದ್ದು, ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಮೂರು ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳ ಗೆಲುವಿಗೆ ಸರ್ಕಸ್ ನಡೆಸುತ್ತಿವೆ. ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಮೀಸಲು ಕ್ಷೇತ್ರವಾಗಿರುವ ಮಳವಳ್ಳಿ (Malavalli) ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಳವಳ್ಳಿ ಕ್ಷೇತ್ರದ ಸದ್ಯದ ಚಿತ್ರಣ ಹೇಗಿದೆ ಎಂಬುದರ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.
ಒಕ್ಕಲಿಗ ಮತಗಳದ್ದೇ ಪ್ರಾಬಲ್ಯ
ಮಳವಳ್ಳಿ ಕ್ಷೇತ್ರದಲ್ಲಿ 1,19,718 ಪುರುಷ ಮತದಾರರು ಇದ್ದು, 1,18,653 ಮಹಿಳಾ ಮತದಾರರು ಇದ್ದಾರೆ. ಈ ಕ್ಷೇತ್ರ ಒಟ್ಟು 2,38,687 ಮತದಾರರನ್ನು ಹೊಂದಿದೆ. ಇನ್ನೂ ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ಒಕ್ಕಲಿಗರು 70,000, ಲಿಂಗಾಯತರು 29,000, ಕುರುಬರು 19,000, ವಿಶ್ವಕರ್ಮ 4,000, ಪರಿಶಿಷ್ಟ ಪಂಗಡ 6,000, ಮುಸ್ಲಿಂ 12,000, ಪರಿಶಿಷ್ಟ ಜಾತಿ 62,000, ಬೆಸ್ತರು 10,000 ಹಾಗೂ ಇತರ ಸಮುದಾಯದ ಮತಗಳು 21,500 ಇವೆ. ಇದನ್ನೂ ಓದಿ: ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆದ್ರೂ ಖಾಲಿ ಸ್ಥಾನ ತುಂಬಲು ಪ್ರಯತ್ನಿಸುತ್ತೇವೆ: ಬೊಮ್ಮಾಯಿ
Advertisement
Advertisement
ತ್ರಿಕೋನ ಫೈಟ್
ಪ್ರತಿ ಚುನಾವಣೆಯಲ್ಲಿ ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ನಡುವೆ ನೇರ ಹಣಾಹಣಿ ನಡೆಯುತ್ತಾ ಇತ್ತು. ಆದರೆ ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆ ಬಿಜೆಪಿಯೂ ಸಹ ಪ್ರಬಲ ಪೈಪೋಟಿ ನಡೆಸುವ ಮೂಲಕ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಈ ಮೂಲಕ ಇಷ್ಟು ವರ್ಷಗಳ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದ್ದ ಸಾಂಪ್ರದಾಯಿಕ ಚುನಾವಣಾ ಹೋರಾಟದ ನಡುವೆ ಬಿಜೆಪಿ (BJP) ಸೇರಿಕೊಂಡಿದೆ.
Advertisement
ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು?
ಸದ್ಯ ಮಳವಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ನ ಅನ್ನದಾನಿ ಹಾಲಿ ಶಾಸಕರು ಇದ್ದಾರೆ. 2018ರ ಚುನಾವಣೆಯಲ್ಲಿ ಅನ್ನದಾನಿ 1,03,038 ಮತಗಳನ್ನು ಪಡೆದು ಅಭೂತಪೂರ್ವ ಗೆಲುವು ಸಾಧಿಸಿದರು. ಈ ಗೆಲುವಿನ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂಬ ಮಾತು ಪ್ರಬಲವಾಗಿ ಇತ್ತು. ಈ ಬಾರಿಯ ಚುನಾವಣೆಯಲ್ಲಿ ಅನ್ನದಾನಿ ಮಾಡಿಕೊಂಡಿರುವ ಯಡವಟ್ಟುಗಳು ಒಂದಷ್ಟು ಹಿನ್ನಡೆಗೆ ಕಾರಣವಾಗಬಹುದು. ಸ್ಥಳೀಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಅನ್ನದಾನಿ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಕೇಳಿ ಬರ್ತಾ ಇವೆ. ಅಲ್ಲದೇ ಈ ಬಾರಿಯ ಅವಧಿಯಲ್ಲಿ ಕ್ಷೇತ್ರದ ಜನರು ಬಯಸಿದ ರೀತಿ ಕೆಲಸಗಳು ನಡೆದಿಲ್ಲ ಎಂಬ ಮಾತುಗಳು ಇವೆ. ಹೀಗಾಗಿ ಇವುಗಳು ಮಳವಳ್ಳಿಯಲ್ಲಿ ಜೆಡಿಎಸ್‌ಗೆ ಹಿನ್ನಡೆ ಆಗಬಹುದು. ಇವುಗಳನ್ನು ಹೊರತುಪಡಿಸಿ ಅನ್ನದಾನಿಗೆ ಶಕ್ತಿ ಅಂದ್ರೆ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳು. ಅಲ್ಲದೇ ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಸಂಬಂಧ ಅನ್ನದಾನಿಗೆ ಇರುವುದು ದೊಡ್ಡ ಪ್ಲಸ್ ಆಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರ ಜನರ ಹಣ ಕದ್ದಿದೆ: ರಾಗಾ ಆರೋಪ
Advertisement
2018ರಲ್ಲಿ 76,278 ಮತಗಳನ್ನು ತೆಗೆದುಕೊಂಡು ಸೋಲಿನ ಮುಖಭಂಗ ಎದುರಿಸಿದ್ದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯಡ ನರೇಂದ್ರಸ್ವಾಮಿ ಈ ಬಾರಿ ಗೆದ್ದೆ ಗೆಲ್ಲಬೇಕೆಂದು ಟೊಂಕಕಟ್ಟಿ ನಿಂತಿದ್ದಾರೆ. ನರೇಂದ್ರಸ್ವಾಮಿ ಅವರ ವೈಖರಿಯ ಬಗ್ಗೆ ಸ್ವಪಕ್ಷೀಯರಲ್ಲಿ ಅಸಮಾಧಾನ ಇರುವುದು ದೊಡ್ಡ ಡ್ಯಾಮೇಜ್. ಜೊತೆಗೆ ನರೇಂದ್ರಸ್ವಾಮಿ ಕಳೆದ ಚುನಾವಣೆಯಲ್ಲಿ ಸೋತಾಗಿನಿಂದ ಕ್ಷೇತ್ರದಲ್ಲಿ ಹೆಚ್ಚು ಆಕ್ಟೀವ್ ಆಗದೇ ಇರುವುದು ಒಂದಷ್ಟು ಹೊಡೆತ ಬೀಳಬಹುದು. ಇನ್ನೂ ಇವರ ಪ್ಲಸ್ ಪಾಯಿಂಟ್, ಸದ್ಯ ಹಾಲಿ ಇರುವ ಜೆಡಿಎಸ್ ಶಾಸಕ ಹೆಚ್ಚಿನ ಕೆಲಸ ಮಾಡದೇ ಇರುವುದು. ಸಿದ್ದರಾಮಯ್ಯ ಮೇಲೆ ಪ್ರೀತಿ ಇರುವ ಮತದಾರರು ಹೆಚ್ಚಿರುವುದು. ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯಕ್ಕಿಂತ ಹೆಚ್ಚಿರುವ ಇತರೆ ಸಮುದಾಯದ ಮತಗಳು ಇವರಿಗೆ ವರದಾನ ಆಗಬಹುದು.
ಬಿಜೆಪಿ ತನ್ನ ಪಕ್ಷದ ಅಭ್ಯರ್ಥಿ ಎಂದು ಮುನಿರಾಜು ಅವರನ್ನು ಘೋಷಣೆ ಮಾಡಿದೆ. ಮುನಿರಾಜು ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯನಾಗಿದ್ದು, 2013ರ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ 26,397 ಮತಗಳನ್ನು ಪಡೆದಿದ್ದರು. ಮಳವಳ್ಳಿಯಲ್ಲಿ ಬಿಜೆಪಿಗೆ ಮೈನಸ್ ಅಂದ್ರೆ ಇಲ್ಲಿ ತಳಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಸ್ಟ್ರಾಂಗ್ ಇರದೇ ಇರುವುದು. ಆದ್ರೆ ಇದೀಗ ದಿನ ಕಳೆದ ಹಾಗೆ ಪಕ್ಷವು ಸಹ ಇಲ್ಲಿ ಗಟ್ಟಿಯಾಗುತ್ತಿದೆ. ಮುನಿರಾಜು ಅವರ ಫೇಸ್‌ವ್ಯಾಲ್ಯೂ ಇಲ್ಲಿ ಚೆನ್ನಾಗಿ ಇದೆ. ಲಿಂಗಾಯತ ಮತಗಳು ಮಂಡ್ಯ ಜಿಲ್ಲೆಯ ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಚೆನ್ನಾಗಿ ಇವೆ. ಇಬ್ಬರು ನಾಯಕರನ್ನು ನೋಡಿರುವ ಮತದಾರರು ಹೊಸ ಮುಖಬೇಕು ಅಂತಾ ಸಹ ಬಯಸುತ್ತಿರುವುದು ಬಿಜೆಪಿಗೆ ವರದಾನವಾಗಲಿದೆ. ಇದನ್ನೂ ಓದಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ
ಮತದಾರ ಪ್ರಭುವಿನ ಚಿತ್ತ ಯಾರತ್ತ?
ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ನೋಡುವುದಾದರೆ ಈ ಬಾರಿ ಮಳವಳ್ಳಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಮತದಾರರ ಪ್ರಭು ನಮಗೆ ಹಳೆಯ ಶಾಸಕ ಜೆಡಿಎಸ್ ಅಭ್ಯರ್ಥಿ ಅನ್ನದಾನಿ ಬೇಕು ಎನ್ನುತ್ತಾನಾ ಅಥವಾ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರಸ್ವಾಮಿ ಸೂಕ್ತ ಎನ್ನುತ್ತಾನಾ. ಇಬ್ಬರು ಬೇಡಾ ಈ ಬಾರಿ ಬಿಜೆಪಿ ಅಭ್ಯರ್ಥಿ ಮುನಿರಾಜುಗೆ ಅವಕಾಶ ನೀಡೋಣಾ ಎನ್ನುತ್ತಾನಾ ಕಾದುನೋಡಬೇಕಿದೆ.