ಶಿವಮೊಗ್ಗ: ಕಾಂಗ್ರೆಸ್ (Congress) ಮುಳುಗುತ್ತಿರುವ ಹಡಗು. ಅವರೊಂದಿಗೆ ಯಾರೂ ಹೋಗುವುದಿಲ್ಲ ಎನ್ನುವುದು ಅವರಿಗೂ ಗೊತ್ತಿದೆ. ಹೀಗಾಗಿ ಈ ಬಾರಿ ಅವರಿಗೆ ಸೋಲು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (B.S.Yediyurappa) ಕಾಂಗ್ರೆಸ್ ವಿರುದ್ಧ ಗುಡುಗಿದರು.
ಲಿಂಗಾಯತ ಸಿಎಂ ಭ್ರಷ್ಟ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಅನ್ನೋದನ್ನ ಮರೆತು ಈ ರೀತಿ ಮಾತನಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಅವರು ಬಹಳ ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ತಕ್ಕ ಉತ್ತರವನ್ನು ಈ ಸಮಾಜದವರು ಕೊಡುತ್ತಾರೆ ಎಂದರು. ಇದನ್ನೂ ಓದಿ: ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಅಮೆರಿಕಾ, ರಷ್ಯಾ ಪ್ರೆಸಿಡೆಂಟ್‍ನ್ನು ಕರ್ಕೊಂಡು ಬರಲಿ: ಹೆಚ್‍ಡಿ ರೇವಣ್ಣ ಟಾಂಗ್
Advertisement
Advertisement
ಬಿಎಲ್ ಸಂತೋಷ್ (B.L.Santhosh) ನಮ್ಮ ಪಕ್ಷದ ಹಿರಿಯ ಮುಖಂಡರು. ಪಕ್ಷದ ಸಂಘಟನೆಗಾಗಿ ಹಗಲು ರಾತ್ರಿ ದುಡುಯುತ್ತಿದ್ದಾರೆ. ಅವರ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡಿದರೆ ನಾವ್ಯಾರೂ ಸಹಿಸುವುದಿಲ್ಲ. ಅವರೊಬ್ಬ ಹಿರಿಯ ರಾಜಕೀಯ ಮುತ್ಸದ್ದಿ. ಅವರ ಬಗ್ಗೆ ಟೀಕೆ ಮಾಡಲು ಯಾರಿಗೂ ಯೋಗ್ಯತೆಯಿಲ್ಲ ಹಾಗೂ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಏ.26 ಕ್ಕೆ ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಂಟ್ರಿ
Advertisement
ವೀರಶೈವರ ಬಗ್ಗೆ ರಾಹುಲ್ ಗಾಂಧಿ (Rahul Gandhi) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಅವರಿಗೆ ವೀರಶೈವರ ಬಗ್ಗೆ ಏನು ಗೊತ್ತಿದೆ? ಬಸವೇಶ್ವರರ ತತ್ವ, ಸಿದ್ಧಾಂತ, ನೀತಿ ಬಗ್ಗೆ ಏನಾದರೂ ಗೊತ್ತಿದೆಯಾ? ಈಗ ಇಲ್ಲಿ ಬಂದು ಎಲ್ಲ ಗೊತ್ತಿರುವ ರೀತಿ ಹುಚ್ಚುಚ್ಚಾಗಿ ಮಾತನಾಡುತ್ತಾರೆ. ನಮ್ಮ ಪ್ರಧಾನಿ ಹಾಗೂ ಅಮಿತ್ ಶಾ ಅವರ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕ ಎಂದು ಟೀಕಿಸಿದರು. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
Advertisement
ಕಾಂಗ್ರೆಸ್‌ನವರು ಏನೋ ಹೇಳಿಕೆ ಕೊಡಬೇಕಲ್ಲ ಎಂದು ಏನೇನೋ ಹೇಳಿಕೆಗಳನ್ನು ಕೊಡುತ್ತಾರೆ. ಅದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಇನ್ನು ಮುಂದೆಯೂ ಕಲಿಸುತ್ತಾರೆ. ಸಿದ್ದರಾಮಯ್ಯನವರೇ ಗೆಲ್ಲೋದು ಕಷ್ಟವಾಗುತ್ತದೆ. ಆ ರೀತಿ ನಾವು ಚುನಾವಣೆಯಲ್ಲಿ ತಂತ್ರ ಮಾಡಿದ್ದೇವೆ. ನೀವು ಕಾದುನೋಡಿ ಎಂದರು. ಇದನ್ನೂ ಓದಿ: ಆಸ್ಪತ್ರೆಗೆ ತೆರಳಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಚುಂಚಶ್ರೀ
ರಾಜ್ಯದಲ್ಲಿ ವಾತಾವರಣ ಚೆನ್ನಾಗಿದೆ. ನಾವು ಬೇರೆ ಬೇರೆ ಸಮಾಜದ ಮುಖಂಡರ ಸಭೆ ಮಾಡುತ್ತಿದ್ದೇವೆ. ಹಿಂದುಳಿದ ವರ್ಗದ ಎಲ್ಲಾ ಸಮಾಜ ನಮಗೆ ಬೆಂಬಲ ಕೊಡುತ್ತಿವೆ. ಅಲ್ಲದೇ ನಮ್ಮ ಸಮಾಜ ಎಲ್ಲಾ ಕಡೆಗೂ ಬೆಂಬಲ ಕೊಡುತ್ತಿದೆ. ಅಮಿತ್ ಶಾ, ಮೋದಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ನಮಗೆ 125ರಿಂದ 130 ಸ್ಥಾನ ಖಂಡಿತವಾಗಿಯೂ ಬರುತ್ತದೆ. ಶಿವಮೊಗ್ಗ ನಮಗೆ ಪ್ರತಿಷ್ಠೆಯ ಕಣ. ಹೀಗಾಗಿ ಶಿವಮೊಗ್ಗದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಗುಡುಗಿದ್ರೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ – ಶ್ರೀನಿವಾಸ್ ಪ್ರಸಾದ್ ಲೇವಡಿ