ಬೀದರ್: ಕಾಂಗ್ರೆಸ್ (Congress) ಎಂದರೆ ಅದು ಮುಸ್ಲಿಂ ಪಾರ್ಟಿಯಾಗಿದ್ದು, ಕಾಂಗ್ರೆಸ್‌ನಲ್ಲಿ ಅರ್ಧಂಬರ್ಧ ಹಿಂದೂಗಳಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದ್ದಾರೆ.
ಬೀದರ್‌ನಲ್ಲಿ (Bidar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಬಗ್ಗೆ ಯಾವ ರೀತಿ ನಡೆದುಕೊಳ್ಳತ್ತಾರೆ ಎನ್ನುವುದಕ್ಕೆ ಬಜರಂಗದಳ ನಿಷೇಧ ಉದಾಹರಣೆಯಾಗಿದ್ದು, ಹಿಂದೂಗಳನ್ನು ಅಪಮಾನ ಮಾಡುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ. ಕಾಂಗ್ರೆಸ್ ಬರೀ ಮುಸ್ಲೀಮರ ಓಲೈಕೆ ಮಾಡುತ್ತದೆ. ಮುಸ್ಲೀಮರು ಹಿಂದೂಗಳಿಗೆ ವೋಟು ಹಾಕುವುದಿಲ್ಲ. ಹೀಗಾಗಿ ಹಿಂದೂಗಳು ಮುಸ್ಲೀಮರಿಗೆ ವೋಟು ಹಾಕಬಾರದು ಎಂದು ಕರೆ ನೀಡಿದರು. ಇದನ್ನೂ ಓದಿ: ಖರ್ಗೆ ಸಾಹೇಬ್ರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ?- ಪ್ರಿಯಾಂಕ್ ಖರ್ಗೆ ಕಿಡಿ
Advertisement
Advertisement
ಈಶ್ವರ್ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪನವರು ವೀರಶೈವ ಮಹಾ ಸಭಾವನ್ನು ಗುತ್ತಿಗೆ ಹಿಡಿದಿದ್ದಾರೆ. ಇವರು ಲಿಂಗಾಯತರಿಗಾಗಿ ಏನೂ ಮಾಡಿಲ್ಲ, ಉದ್ಧಾರವನ್ನೂ ಮಾಡಿಲ್ಲ. ಆದರೆ ಲಿಂಗಾಯತ ಕೋಟಾದಲ್ಲಿ ಲೀಡರ್ ಆಗಿದ್ದಾರೆ. ನಾವು ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಹೇಳಿ ಮಾಡುವುದಿಲ್ಲ. ಹೈಕಮಾಂಡ್ ಬಸವರಾಜ ಬೊಮ್ಮಾಯಿಯವರನ್ನು (Basavaraj Bommai) ಮಾಡಬಹುದು ಅಥವಾ ಬೇರೆಯವರನ್ನೂ ಮಾಡಬಹುದು ಎಂದರು. ಇದನ್ನೂ ಓದಿ: ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?
Advertisement