ಬೆಂಗಳೂರು: ಕಾಂಗ್ರೆಸ್‌ನ (Congress) ಗ್ಯಾರಂಟಿ ಯೋಜನೆ ಮನೆ ಮನೆಗೆ ತಲುಪುತ್ತಿದೆ. ಸಮೀಕ್ಷೆಗಳು ಕೂಡಾ ಕಾಂಗ್ರೆಸ್‌ನ ಪರವಾಗಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಹೆಬ್ಬಾಗಿಲು ತೆರೆಯುತ್ತದೆ. ಈ ಬಾರಿ ಕಾಂಗ್ರೆಸ್ ಬಹುಮತದಿಂದ ಸರ್ಕಾರ ರಚನೆ ಮಾಡಲಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (D.K.Shivakumar) ವಿಶ್ವಾಸ ವ್ಯಕ್ತಪಡಿಸಿದರು.
2018ರಿಂದ ಜೆಡಿಎಸ್‌ನಿಂದ (JDS) ಡಿಕೆಶಿ ವಿರುದ್ಧ ಸ್ಪರ್ಧಿಸಿದ್ದ ನಾರಾಯಣ ಗೌಡ (Narayan Gowda) ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ (D.K.Suresh) ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರು (Bengaluru) ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೊಸ ಬದಲಾವಣೆ ಆಗುತ್ತಿದೆ. 20-30 ವರ್ಷ ರಾಜಕೀಯ ಇತಿಹಾಸ ಪಿಜಿಆರ್ ಸಿಂಧ್ಯಾ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ನಾರಾಯಣ ಗೌಡ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಅಲ್ಲದೇ ಇವರು ರೈತ ಕುಟುಂಬದ ಪ್ರಮುಖ ನಾಯಕರಾಗಿದ್ದಾರೆ ಎಂದರು. ಇದನ್ನೂ ಓದಿ: ಮೋದಿ ವಿಷದ ಹಾವು ಇದ್ದಂತೆ: ಖರ್ಗೆ
ಡಿಕೆಶಿಗೆ ಒಳ್ಳೆಯದಾಗಬೇಕು ಎಂದು ತಾನು ತ್ಯಾಗ ಮಾಡಿದ್ದಾರೆ. ಜೊತೆಗೆ ಪ್ರಭಾಕರ್ ರೆಡ್ಡಿ ಕೂಡಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಇಲ್ಲಿ ಹೊಸಬರು ಹಳಬರು ಎಂಬ ಪ್ರಶ್ನೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. 78 ಲಕ್ಷ ಸದಸ್ಯರು ಕಾಂಗ್ರೆಸ್‌ನಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪೈಪೋಟಿ
ತುಮಕೂರಿನಲ್ಲಿ ತನಗೆ ಕಣ್ಣೀರು ಹಾಕಿಸಿದವರನ್ನು ಸೋಲಿಸಿ ಎಂಬ ದೇವೇಗೌಡರ (H.D.Deve Gowda) ಕರೆಗೆ ಪ್ರತಿಕ್ರಿಯಿಸಿದ ಅವರು, ಅವರ ಭಾವನೆ, ಹಿರಿತನ ಹಾಗೂ ಅನುಭವಕ್ಕೆ ನಾವು ಸ್ಪರ್ಧೆ ಮಾಡಲು ಆಗುತ್ತಾ? ನಮ್ಮ ಕೈಯಲ್ಲಿ ಸ್ಪರ್ಧೆ ಮಾಡಲು ಆಗುವುದಿಲ್ಲ. ಅವರಿಗೆ ಒಳ್ಳೆಯದಾಗಲಿ. ಇಷ್ಟು ವಯಸ್ಸಾದರೂ ಇಷ್ಟು ದೊಡ್ಡ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಅವರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ. ಅವರ ಛಲ, ಹೋರಾಟ ಹಾಗೂ ಅವರ ಆಯಸ್ಸು ಚನ್ನಾಗಿರಲಿ ಎಂದು ಹಾರೈಸಿದರು. ಇದನ್ನೂ ಓದಿ: ಕರ್ನಾಟಕ ಬಿಜೆಪಿ ಕಾರ್ಯಕರ್ತರಿಗೆ ಮೋದಿ ನೀಡಿದ ಸಂದೇಶ ಏನು?
ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಕೊಡುತ್ತೇವೆ ಎಂದು ನಾವು ಭರವಸೆ ಕೊಟ್ಟಿಲ್ಲ. ಬಿಜೆಪಿಯ (BJP) ಪ್ರಣಾಳಿಕೆ ನೋಡಿ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದಾರೆ. ಸರ್ಕಾರದ ಅಧಿಕೃತ ಜಾಹೀರಾತಿನಲ್ಲೂ ಮಹಿಳೆಯರಿಗೆ ಮೂರು ಸಾವಿರ ಕೊಡುವ ಭರವಸೆ ಕೊಟ್ಟಿದ್ದಾರೆ. 3 ರಿಂದ 10 ಗಂಟೆ ಉಚಿತ ವಿದ್ಯುತ್ ಕೊಡುವ ಭರವಸೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿ (Narendra Modi) ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡಿದ್ದು ಸಂತೋಷ ಎಂದರು. ಇದನ್ನೂ ಓದಿ: ರಾಮನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ: ನಿಖಿಲ್ ಕುಮಾರಸ್ವಾಮಿ
ಗ್ಯಾಸ್ ದರ ಹೆಚ್ಚಳ ಆಗಿದ್ದಾಗ ಸಿಲಿಂಡರ್‌ಗೆ ಕೈಮುಗಿದು ವೋಟ್ ಹಾಕಿ ಎಂದು ಮೋದಿ ಕರೆ ಕೊಟ್ಟಿದ್ದರು. ಈಗ ನಾನೂ ಕೂಡಾ ಭಾಯಿಯೋ ಔರ್ ಬೆಹನೋ ಗ್ಯಾಸ್ ದರ ಏರಿಕೆ ಆಗಿದೆ ಸಿಲಿಂಡರ್‌ಗೆ ಕೈ ಮುಗಿದು ಮತದಾನ ಮಾಡಿ ಎಂದು ಕರೆ ಕೊಡುತ್ತೇನೆ. ಗೃಹ ಜ್ಯೋತಿ 200 ಯೂನಿಟ್, ಉಚಿತ ವಿದ್ಯುತ್, 2000 ಪ್ರತಿ ತಿಂಗಳು ಖಚಿತ, ಅನ್ನ ಭಾಗ್ಯ ಹತ್ತು ಕೆಜಿ ಅಕ್ಕಿ ನಿಶ್ಚಿತ, ಯುವ ನಿಧಿ ಖಂಡಿತಾ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ – ಈ ಬಾರಿ ಯಾರ ಕೈ ಹಿಡಿಯಲಿದ್ದಾನೆ ಮತದಾರ?
ಇಲ್ಲಿಯವರೆಗೆ ನಾಲ್ಕು ಘೋಷಣೆ ಮಾಡಿದ್ದೇವೆ. ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಜಾರಿ ಮಾಡುತ್ತೇವೆ. ಮೇ 10ನೇ ತಾರೀಕು ರಾಜ್ಯದ ಭವಿಷ್ಯ ಬದಲಾವಣೆಯ ದಿನ. ಗ್ಯಾರಂಟಿ ಕಾರ್ಡ್‌ಗೆ (Guarantee Card) ಮುದ್ರೆ ಹಾಕುವ ದಿನ. ಅಧಿಕಾರಕ್ಕೆ ಬಂದ ಮೊದಲನೇ ಕ್ಯಾಬಿನೆಟ್‌ನಲ್ಲೇ ನಿರ್ಧಾರ ಮಾಡುತ್ತೇವೆ. ಕೊಟ್ಟಿರುವ ನಾಲ್ಕು ಗ್ಯಾರಂಟಿ ಜಾರಿಗೊಳಿಸುತ್ತೇವೆ. ಜೂನ್ ತಿಂಗಳಲ್ಲಿ ಗ್ಯಾರಂಟಿ ಘೋಷಣೆ ಜಾರಿಗೊಳಿಸುತ್ತೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲ. ಅದಕ್ಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಗ್ಯಾರಂಟಿ ಘೋಷಣೆ ಜಾರಿಗೆ ತಂದಿಲ್ಲ ಎಂದರೆ ಮುಂದೆ ನಾವು ಮತ ಕೇಳುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಏಯ್ ಇದು ಯಾವ ಪ್ರಾರ್ಥನೆ! – ತಮಿಳು ನಾಡಗೀತೆ ನಿಲ್ಲಿಸಿ ಕನ್ನಡದ ನಾಡಗೀತೆ ಹಾಕಿಸಿದ ಈಶ್ವರಪ್ಪ