ತುಮಕೂರು: ಚಿಕ್ಕನಾಯಕನಹಳ್ಳಿ (Chikkanayakanahalli) ಹಾಲಿ ಸಚಿವರೊಬ್ಬರು ಪ್ರತಿನಿಧಿಸುತ್ತಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಇಲ್ಲಿವರೆಗೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮಾತ್ರ ಫೈಟ್ ನಡೆಯುತ್ತಿತ್ತು. ಆದರೆ ಈ ಚುನಾವಣೆಯಲ್ಲಿ (2023ರ ವಿಧಾನಸಭಾ ಚುನಾವಣೆ) ಇದೇ ಮೊದಲ ಬಾರಿಗೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ.
ಬಿಜೆಪಿ ಸರ್ಕಾರದ ಕಾನೂನು ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ (J.C.Maduswamy) ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಇದನ್ನೂ ಓದಿ: ಕಾಂಗ್ರೆಸ್ 10 ಪರ್ಸೆಂಟ್ ಕೆಲಸ ಮಾಡಿದ್ರೆ ವೋಟ್ ಕೇಳೋ ಅವಶ್ಯತೆ ಇರ್ತಿರಲಿಲ್ಲ : ಶಾ ಗುಡುಗು
Advertisement
Advertisement
ಹೇಗಿದೆ ಚುನಾವಣಾ ರಾಜಕೀಯ ಲೆಕ್ಕಾಚಾರ?
ಜೆಡಿಎಸ್‌ನ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಕಿರಣ್ ಕುಮಾರ್ ಇಬ್ಬರಿಗೂ ಕ್ಷೇತ್ರದಲ್ಲಿ ಅನುಕಂಪದ ಅಲೆ ಇದೆ. ಅದೇ ರೀತಿ ಸಚಿವರಾಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸ ಮಾಡಿರುವುದರಿಂದ ಮಾಧುಸ್ವಾಮಿ ಅವರ ಮೇಲೂ ಜನರ ಒಲವಿದೆ. ಲಿಂಗಾಯತ ಸಮುದಾಯದ ಮತ ಸುಮಾರು 38 ಸಾವಿರ ಇದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಲಿಂಗಾಯತ ಸಮುದಾಯದವರಾಗಿರುವುದರಿಂದ ಇಬ್ಬರಿಗೂ ಮತ ಹಂಚಿಕೆ ಆಗಬಹುದು. ಈ ಮತ ವಿಭಜನೆ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬುಗೆ ಅನುಕೂಲ ಆಗಲಿದೆ ಎಂಬ ಲೆಕ್ಕಾಚಾರ ಇದೆ.
Advertisement
ಸುರೇಶ್ ಬಾಬು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಆ ಸಮುದಾಯದಿಂದಲೂ ಸುಮಾರು 35 ಸಾವಿರ ಮತಗಳಿವೆ. ಹಾಗಾಗಿ ಹೇಗೆ ಲೆಕ್ಕಾಚಾರ ಹಾಕಿದರೂ ಜೆಡಿಎಸ್‌ಗೆ ಲಾಭ ಆಗಬಹುದು ಎನ್ನಲಾಗಿದೆ. ಜೊತೆಗೆ ಸಚಿವ ಮಾಧುಸ್ವಾಮಿ ವಿರುದ್ಧ ತೊಡೆತಟ್ಟಿ ಬಿಜೆಪಿಯಿಂದ ಬಂಡಾಯ ಎದ್ದು ಕಾಂಗ್ರೆಸ್ ಸೇರಿದ ಕಿರಣ್ ಕುಮಾರ್ ತಮ್ಮ ಗೆಲುವಿಗಿಂತ ಮಾಧುಸ್ವಾಮಿ ಸೋಲನ್ನು ಹೆಚ್ಚು ಬಯಸಿದ್ದಾರೆ. ಹಾಗಾಗಿ ಈ ಇಬ್ಬರ ನಡುವಿನ ಜಗಳ ಮಾಧುಸ್ವಾಮಿಗೆ ಮುಳುವಾಗಿ ಮೂರನೇ ವ್ಯಕ್ತಿ ಜೆಡಿಎಸ್ ಸುರೇಶ್ ಬಾಬುಗೆ ವರವಾಗಬಹುದು ಎಂಬ ವಿಶ್ಲೇಷಣೆಯೂ ನಡೆದಿದೆ. ಇದನ್ನೂ ಓದಿ: 6 ದಿನ 20 ಹೆಚ್ಚು ಕಡೆ ಮೋದಿ ಪ್ರಚಾರ – ಯಾವ ದಿನ ಎಲ್ಲಿ ಸಮಾವೇಶ?
Advertisement
ಬಿಜೆಪಿ ಪ್ಲಸ್: ಸಚಿವ ಮಾಧುಸ್ವಾಮಿ ಉತ್ತಮ ಸಂಸದೀಯಪಟುವಾಗಿ ರಾಜ್ಯದ ಗಮನ ಸೆಳೆದಿರೋದು. ನೀರಾವರಿ, ರಸ್ತೆ, ಆಸ್ಪತ್ರೆ ಸೇರಿದಂತೆ ಅಭಿವೃದ್ಧಿ ಕೆಲಸದ ಮೂಲಕ ಗಮನ ಸೆಳೆದಿರೋದು. ತಮ್ಮ ಸುತ್ತಮುತ್ತ ಪಟಾಲಂಗಳ ತಂಡ ಸೃಷ್ಟಿಯಾಗಿ ಕೆಟ್ಟ ಹೆಸರು ಬರದಂತೆ ನೋಡಿಕೊಂಡಿದ್ದು. ಕ್ಷೇತ್ರದಲ್ಲೇ ಮನೆಯಿದ್ದು ಸುಲಭವಾಗಿ ಕೈಗೆ ಸಿಗುವ ವ್ಯಕ್ತಿಯಾಗಿರುವುದು ಬಿಜೆಪಿ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಬಿಜೆಪಿ ಮೈನಸ್: ಮಾಧುಸ್ವಾಮಿ ಪಕ್ಷದ ಬಾಂಡಿಂಗ್‌ನಲ್ಲಿ ಇಲ್ಲ. ಕಾರ್ಯಕರ್ತರು, ಮುಖಂಡರೊಂದಿಗೆ ಬಾಂಧವ್ಯ ಕೆಡಿಸಿಕೊಂಡಿದ್ದಾರೆ ಅನ್ನೋ ಆರೋಪ. ಕನಕ ವೃತ್ತ ಕುಂಟಿತವಾಗಿರೋದು. ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರೋದು. ನೇರ-ನಿಷ್ಠುರ ಮಾತುಗಳಿಂದ ಸ್ವಪಕ್ಷೀಯ ಸ್ಥಳೀಯ ಮುಖಂಡರ ಕೆಂಗಣ್ಣಿಗೆ ಗುರಿಯಾಗಿರೋದು ಬಿಜೆಪಿಗೆ ಮೈನಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ – ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
ಜೆಡಿಎಸ್ ಪ್ಲಸ್: ಸುರೇಶ್ ಬಾಬುಗೆ ಕಳೆದ ಬಾರಿ ಸೋತ ಅನುಕಂಪದ ಅಲೆ ಇದೆ. ಸರಳ ನಡೆಯಿಂದ ಕಾರ್ಯಕರ್ತರು ಹಾಗೂ ಮತದಾರರೊಂದಿಗೆ ಅವಿನಾಭಾವ ಸಂಬಂಧ. ಪ್ರಬಲ ಕುರುಬ ಸಮುದಾಯಕ್ಕೆ ಸೇರಿರೋದು. ಬಿಜೆಪಿ-ಕಾಂಗ್ರೆಸ್ ನಡುವಿನ ಕಿತ್ತಾಟ ಜೆಡಿಎಸ್‌ಗೆ ಲಾಭವಾಗುವ ಸಾಧ್ಯತೆ ಇದೆ.
ಜೆಡಿಎಸ್ ಮೈನಸ್: ಆರ್ಥಿಕವಾಗಿ ದುರ್ಬಲ ಆಗಿರೋದು. ಕ್ಷೇತ್ರದಲ್ಲಿ ವಾಸ್ತವ್ಯ ಇರದೇ ಬೆಂಗಳೂರಲ್ಲಿ ವಾಸ ಇರೋದು. ಜನರ ಕೈಗೆ ಸುಲಭವಾಗಿ ಸಿಗದೇ ಇರೋದು. ಎರಡು ಬಾರಿ ಶಾಸಕರಾಗಿದ್ದರೂ ಅಭಿವೃದ್ಧಿ ಕುಂಠಿತವಾಗಿರೋದು ಪಕ್ಷದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎನ್ನಲಾಗಿದೆ.
ಕಾಂಗ್ರೆಸ್ ಪ್ಲಸ್: ಕಿರಣ್ ಕುಮಾರ್‌ಗೆ ಅನುಕಂಪದ ಅಲೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಸೌಮ್ಯ ಸ್ವಭಾವ, ಉತ್ತಮ ಗುಣವುಳ್ಳ ವ್ಯಕ್ತಿಯಾಗಿರುವುದು ಪಕ್ಷಕ್ಕೆ ವರದಾನವಾಗಬಹುದು ಎಂಬ ಮಾತಿದೆ. ಇದನ್ನೂ ಓದಿ: ಸ್ವಾಭಿಮಾನಿಗಳು ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ: ಸುಮಲತಾ
ಕಾಂಗ್ರೆಸ್ ಮೈನಸ್: ಲಿಂಗಾಯತ ಮತ ವಿಭಜನೆ ಆಗುವ ಆತಂಕ. ಕಾಂಗ್ರೆಸ್ ಅಷ್ಟೊಂದು ಸಂಘಟನೆ ಆಗದೇ ಇರೋದು. ಮೂಲ ಕಾಂಗ್ರೆಸ್ಸಿಗರ ಬೆಂಬಲ ಸಂಪೂರ್ಣವಾಗಿ ಸಿಗೋದು ಕಷ್ಟ ಎನ್ನಲಾಗಿದೆ.
ಜಾತಿವಾರು ಲೆಕ್ಕಾಚಾರ
ಒಟ್ಟು ಮತದಾರರು – 2,16,874
ಒಕ್ಕಲಿಗರು – 40,000
ಲಿಂಗಾಯತರು – 55,000
ಕುರುಬರು – 35,000
ಎಸ್ಸಿ, ಎಸ್ಟಿ – 35,000
ಮುಸ್ಲಿಂ – 15,000
ಗೊಲ್ಲರು – 18,000
ಮಡಿವಾಳ – 5,000
ಬ್ರಾಹ್ಮಣ – 4,000