ಮತಗಟ್ಟೆಗೆ ನುಗ್ಗಿ ನಿವೃತ್ತ ಅಧಿಕಾರಿಯಿಂದ ಗಲಾಟೆ – ಯಾದಗಿರಿಯಲ್ಲಿ ನಿಷೇಧಾಜ್ಞೆ ಜಾರಿ

Public TV
1 Min Read
SP VEDHAMURTHY

ಯಾದಗಿರಿ: ಜಿಲ್ಲೆಯ ಕೆಂಬಾವಿ ಹಾಗೂ ಸುರಪುರ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ (Section 144) ಮಾಡಿ ಮಾಡಿ ಎಸ್ಪಿ ಡಾ.ಬಿ.ಸಿ ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.

ಮತದಾನದ (Vote) ವೇಳೆ ಮತಗಟ್ಟೆ ಒಳಗೆ ನಿವೃತ್ತ ಎಎಸ್‍ಐ ಮೇಘನಾಥ್ ನುಗ್ಗಿ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಈ ಆದೇಶ ಜಾರಿ ಮಾಡಲಾಗಿದೆ. ನಿವೃತ್ತ ಅಧಿಕಾರಿ ಚುನಾವಣಾ (Election) ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿದ್ದು, ತಳ್ಳಿ ಏಕವಚನದಲ್ಲೇ ರೇಗಿ ಹಲ್ಲೆಗೆ ಮುಂದಾಗಿದ್ದಾನೆ. ನನ್ನ ವಾಚ್‍ನಲ್ಲಿ ಇನ್ನೂ 6 ಗಂಟೆ ಆಗಿಲ್ಲ, ಗಂಟೆ ಆದಾಗ ಬರುತ್ತೇನೆ. ನಿನಗೆ ಮತದ ಬೆಲೆ ಗೊತ್ತಿಲ್ಲ ಎಂದು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾನೆ. ಕೊನೆಗೂ ಮತ ಹಾಕದೇ ತೆರಳಿದ್ದಾನೆ. ಇದನ್ನೂ ಓದಿ: ಎಕ್ಸಿಟ್ ಪೋಲ್‍ನಲ್ಲಿ ನಂಬಿಕೆ ಇಲ್ಲ, 141 ಸ್ಥಾನ ಗೆಲ್ತೀವಿ: ಡಿಕೆ ಶಿವಕುಮಾರ್

ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ನಗರದಲ್ಲಿ ಶುಕ್ರವಾರ ಬೆಳಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಜನರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಟುಡೇಸ್‌ ಚಾಣಕ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ

Share This Article