ಚಿತ್ರದುರ್ಗ: ರಾಜ್ಯದಲ್ಲಿ ಚುನಾವಣೆ (Election) ಸಮೀಪಿಸುತ್ತಿದ್ದಂತೆ ರಾಜಕೀಯ ತಿಕ್ಕಾಟ ಹೆಚ್ಚಾಗುತ್ತಿದ್ದು, ಎರಡು ಪಕ್ಷದ ಅಭ್ಯರ್ಥಿಗಳ ಬೆಂಬಲಿಗರ ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಹೊಸದುರ್ಗ (Hosadurga) ತಾಲೂಕಿನ ಯಾದಗಟ್ಟ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ (BJP) ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ (Gulihatty Shekhar) ಬೆಂಬಲಿಗರಾಗಿರುವ ಗಿರೀಶ್ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಲಿಂಗಮೂರ್ತಿಯ ಬೆಂಬಲಿಗರಾದ ಓಂಕಾರಪ್ಪ ಗುಂಪಿನ ನಡುವೆ ಗಲಾಟೆ ನಡೆದಿದೆ. ಇದನ್ನೂ ಓದಿ: ಅಬಕಾರಿ ಅಧಿಕಾರಿಗಳ ದಾಳಿ – ಜಮೀನಿನಲ್ಲಿ ಅಡಗಿಸಿಟ್ಟಿದ್ದ 70 ಲಕ್ಷ ಮೌಲ್ಯದ ಸಿಹೆಚ್ ಪೌಡರ್ ಜಪ್ತಿ
Advertisement
Advertisement
ಗೂಳಿಹಟ್ಟಿ ಶೇಖರ್ ನಾಮಪತ್ರ ಸಲ್ಲಿಕೆಯ ವೇಳೆ ರೋಡ್ ಶೋಗೆ ಯದಗಟ್ಟ ಗ್ರಾಮದ ಲಿಂಗಾಯತ (Lingayat) ಸಮುದಾಯದ ಯುವಕರನ್ನು ಕರೆತಂದಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಗ್ರಾಮದ ಮುಖಂಡ ಓಂಕಾರಪ್ಪನ ಗುಂಪು, ಗಿರೀಶ್ ಮನೆ ಬಳಿಗೆ ತೆರಳಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಕೆಲವರು ಮನೆಯ ಮೇಲ್ಛಾವಣೆ ಏರಿದ್ದರು. ಆದರೂ ಸಹ ಅವರನ್ನು ಬಿಡದೇ ಅಟ್ಟಾಡಿಸಿಕೊಂಡು ದೊಣ್ಣೆಯಲ್ಲಿ ಬಡಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಗುಂಪು ಘರ್ಷಣೆ ವೇಳೆ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಘಟನೆಯಲ್ಲಿ ಗ್ರಾಮದ ಕೆಲ ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗ್ರಾಮ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್