ಚಿತ್ರದುರ್ಗ: ಐತಿಹಾಸಿಕ ಹಿನ್ನೆಲೆಯ ಕೋಟೆನಾಡು ಚಿತ್ರದುರ್ಗ (Chitradurga) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ (BJP) ತಿಪ್ಪಾರೆಡ್ಡಿ ಸತತ ಐದು ಬಾರಿ ಶಾಸಕರಾಗಿದ್ದು ಒಂದು ಬಾರಿ ಪರಿಷತ್ ಸದಸ್ಯರಾಗಿದ್ದರು. ಈ ಬಾರಿ ಗೆದ್ದು ಡಬಲ್ ಹ್ಯಾಟ್ರಿಕ್ ಸಾಧಿಸುವ ತವಕದಲ್ಲಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ವಿರೇಂದ್ರ ಪಪ್ಪಿ ವಿರುದ್ಧ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.
ಈ ಬಾರಿ ವೀರೇಂದ್ರ ಪಪ್ಪಿ (Veerendra Pappi) ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, ತಿಪ್ಪಾರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.75 ವರ್ಷ ವಯಸ್ಸಾಗಿದ್ದರೂ ಗೆಲ್ಲುವ ಕುದುರೆಯೆಂಬ ಕಾರಣಕ್ಕೆ ಬಿಜೆಪಿ ತಿಪ್ಪಾರೆಡ್ಡಿಗೆ ಮಣೆಹಾಕಿದೆ. ಹೀಗಾಗಿ ಈ ಬಾರಿಯೂ ಅಭಿವೃದ್ಧಿ ಹಾಗೂ ಕೊನೆ ಚುನಾವಣೆ ಎಂಬ ವಿಚಾರ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರುವ ತಿಪ್ಪಾರೆಡ್ಡಿ ಗೆದ್ದು ಮುಂಬರುವ ಸರ್ಕಾರದಲ್ಲಿ ಸಚಿವರಾಗುವ ಕನಸು ಹೊತ್ತಿದ್ದಾರೆ.
Advertisement
Advertisement
ತಿಪ್ಪಾರೆಡ್ಡಿ
ಕಾಂಗ್ರೆಸ್ ಬಂಡಾಯದ ಲಾಭಗಳಿಸಲು ಬಿಜೆಪಿ ಹವಣಿಸುತ್ತಿದೆ.ಕಾಂಗ್ರೆಸ್ ಕೂಡ ತಿಪ್ಪಾರೆಡ್ಡಿಯ ಸುತ್ತಲು ಆರೋಪಗಳಹುತ್ತ ಕಟ್ಟಿ ಜನರ ಮನಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಹಾಗೆಯೇ ಜೆಡಿಎಸ್ ಅಭ್ಯರ್ಥಿ ಕೂಡ ವಿವಿಧ ರೂಪದಲ್ಲಿ ರೈತರು, ಕಾರ್ಮಿಕರ ಗಮನಸೆಳೆದು ಮತಬ್ಯಾಂಕ್ ಕಟ್ಟಲು ಮುಂದಾಗಿದೆ. ಆದರೆ ಅಂತಿಮವಾಗಿ ಕೋಟೆನಾಡಿನ ಮತದಾರ ಯಾರಿಗೆ ಮಣೆ ಹಾಕ್ತಾನೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
Advertisement
1994 ಹಾಗೂ 1999ರಲ್ಲಿ ಸತತ ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಜಿ.ಹೆಚ್ ತಿಪ್ಪಾರೆಡ್ಡಿ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. 2004 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ತಿಪ್ಪಾರೆಡ್ಡಿ ಹ್ಯಾಟ್ರಿಕ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 2008 ರಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಕೆ.ಬಸವರಾಜನ್ ತಿಪ್ಪಾರೆಡ್ಡಿ ವಿರುದ್ಧ ಗೆದ್ದು ಶಾಸಕರಾಗಿದ್ದರು
Advertisement
2013 ಹಾಗೂ 2018 ರಲ್ಲಿ ಸತತ ಎರಡು ಬಾರಿ ಬಿಜೆಪಿಯಿಂದ ಗೆದ್ದಿರುವ ತಿಪ್ಪಾರೆಡ್ಡಿ, ಅತಿ ಹಿರಿಯ ಶಾಸಕರೆಂಬ ಹಣೆಪಟ್ಟಿ ಹೊತ್ತಿದ್ದಾರೆ. 75 ವರ್ಷ ವಯಸ್ಸಾದರೂ ಗೆಲ್ಲುವ ಕುದುರೆ ಎಂಬ ಒಂದೇ ಕಾರಣಕ್ಕೆ ಬಿಜೆಪಿ ಟಿಕೆಟ್ ಪಡೆದು ಇದೀಗ ತಮ್ಮ ಕೊನೆಯ ಚುನಾವಣೆ ಎಂದೇ ಬಿಂಬಿಸಿಕೊಂಡು 2023ರ ಚುನಾವಣೆಯ ಅಖಾಡಕ್ಕೆ ಧುಮುಕಿದ್ದಾರೆ.
ಧನಾತ್ಮಕ ಅಂಶ:
ಸರ್ವಧರ್ಮ ಹಾಗೂ ವ್ಯಕ್ತಿಗತ ವೋಟ್ ಬ್ಯಾಂಕ್ ತಿಪ್ಪಾರೆಡ್ಡಿ ಪರ ಇದೆ. ತಿಪ್ಪಾರೆಡ್ಡಿ ಸ್ಥಳಿಯ ಅಭ್ಯರ್ಥಿಯಾಗಿದ್ದು ಗ್ರಾಮೀಣ ಪ್ರದೇಶದಲ್ಲಿನ ಅಭಿವೃದ್ಧಿ ಕೆಲಸ ನಡೆದಿದೆ. ಚಿತ್ರದುರ್ಗ ನಗರಸಭೆಯಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿಗೆ ಆಡಳಿತ ಸಿಕ್ಕಿದ್ದು ಅಸಂಘಟಿತ ಎಲ್ಲಾ ಸಮುದಾಯಗಳಿಗೆ ಸೂರು ಭಾಗ್ಯ ಸಿಕ್ಕಿದೆ. ಜನರೊಂದಿಗೆ ಸದಾ ಸಂಪರ್ಕದಲ್ಲಿದ್ದು ಸಣ್ಣಸಣ್ಣ ಸಮುದಾಯಗಳೇ ಇವರ ವೋಟು ಬ್ಯಾಂಕ್. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಮೀಸಲಿಟ್ಟಿದ್ದು ಬಿಜೆಪಿಗೆ ನೆರವಾಗಬಹುದು.
ಋಣಾತ್ಮಕ ಅಂಶಗಳು
ಗುತ್ತಿಗೆದಾರರದಿಂದ 40% ಕಮಿಷನ್ ಆಡಿಯೊ ಆರೋಪ. ಕಳಪೆ ಹಾಗೂ ಅವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಆಕ್ರೋಶ. ನೇರಮಾತು, ಸ್ವಪಕ್ಷದ ಮುಖಂಡರಿಂದ ಒಳಹೊಡೆತ ಸಿಗುವ ಸಾಧ್ಯತೆ. ಇದನ್ನೂ ಓದಿ: ಕಾಂಗ್ರೆಸ್‌ನ 224 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿ: ಕರಂದ್ಲಾಜೆ ದೂರು
ಕಾಂಗ್ರೆಸ್ ಧನಾತ್ಮಕ ಅಂಶಗಳು
ಕ್ಯಾಸಿನೋ ಉದ್ಯಮಿ ವೀರೇಂದ್ರ ಪಪ್ಪಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯ ಕೈ ಅಭ್ಯರ್ಥಿಗೆ ವರವಾಗಿದೆ. ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಾಗಿದ್ದು ಕಾಂಗ್ರೆಸ್ ಪರ ಇರುವ ಅಹಿಂದ ಮತಗಳೇ ನಿರ್ಣಾಯಕ ಎನಿಸಿದೆ.
ಋಣಾತ್ಮಕ ಅಂಶಗಳು
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಾಗಿದ್ದು,ಕಾಂಗ್ರೆಸ್ ಅಭ್ಯರ್ಥಿ ಪಪ್ಪಿಗೆ ಬಂಡಾಯ ಮುಳುವಾಗುವ ಸಾಧ್ಯತೆಯಿದೆ. ಮೊದಲ ಸಾಲಿನ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಎದುರಾಗಿದೆ. ಕ್ಷೇತ್ರದಲ್ಲಿ ಹೊಸಮುಖ ಹಾಗೂ ವಲಸಿಗರಿಗೆ ಮಣೆ ಹಾಕಲಾಗಿದೆ.
ಜೆಡಿಎಸ್ ಧನಾತ್ಮಕ ಅಂಶಗಳು
ರಘು ಆಚಾರ್ ಎರಡು ಬಾರಿ ಎಂಎಲ್‌ಸಿ ಆಗಿದ್ದವರು. ಚಿತ್ರದುರ್ಗ ಕ್ಷೇತ್ರದ ಪರಿಚಯ ಚೆನ್ನಾಗಿದೆ. ಗ್ರಾಪಂ ಸದಸ್ಯರ ಮೂಲಕ ಮತದಾರರನ್ನು ತಲುಪುವುದು ಸುಲಭ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದರು.
ಜೆಡಿಎಸ್ ಋಣಾತ್ಮಕ ಅಂಶಗಳು
ಎಂಎಲ್‌ಸಿ ಆಗಿದ್ದಾಗ ಜನರನ್ನು ಭೇಟಿಯಾಗಿಲ್ಲವೆಂಬ ಆರೋಪ ರಘು ಆಚಾರ್ (Raghu Achar) ಮೇಲಿದೆ. ಕೈ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ರಘು ಆಚಾರ್ ಸೇರ್ಪಡೆಯಾಗಿದ್ದಾರೆ. ವಲಸಿಗರೆಂಬ ಹಣೆಪಟ್ಟಿ ಇವರ ಮೇಲಿದೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ
ಕ್ಷೇತ್ರದಲ್ಲಿ ಒಟ್ಟು 2,62,700 ಮತದಾರರಿದ್ದು 1,29,255 ಪುರುಷರು ಇದ್ದರೆ 1,32,411 ಮಹಿಳೆಯರಿದ್ದರೆ. ಇತರರು 34 ಮಂದಿ ಇದ್ದಾರೆ.
ಯಾರ ವೋಟು ಎಷ್ಟು?
ಲಿಂಗಾಯತ – 49,000
ಮುಸ್ಲಿಂ – 45,000
ಎಸ್ಸಿ – 31,500
ಕುರುಬ – 22,000
ನಾಯಕ – 24,000
ಯಾದವ – 29000
ರೆಡ್ಡಿ – 18,200
ಇತರೆ – 44,000