ಚಿಕ್ಕಮಗಳೂರು: ಬಿಜೆಪಿಯ (BJP) ಭದ್ರಕೋಟೆಯಾದ ಚಿಕ್ಕಮಗಳೂರು (Chikmagaluru) ತಾಲೂಕಿನಲ್ಲಿ ಈ ಬಾರಿ ಗುರು-ಶಿಷ್ಯರ ಕಾಳಗದಲ್ಲಿ ಚುನಾವಣಾ ಕಣ ರಂಗೇರಿದೆ. ಒಂದೆಡೆ ಹಿಂದೂ ಹುಲಿ ಎಂದೇ ಕರೆಸಿಕೊಳ್ಳುವ ಬಿಜೆಪಿಯ ಸಿ.ಟಿ.ರವಿ (CT Ravi) ಮತ್ತೊಂದೆಡೆ ಅದೇ ಹಿಂದೂ ಹುಲಿ ಗರಡಿಯಲ್ಲಿ ಕಾಂಗ್ರೆಸ್ಸಿನ ಹೆಚ್.ಡಿ.ತಮ್ಮಯ್ಯ (H D Thammaiah) ಪಳಗಿದ್ದು ಇಬ್ಬರ 20 ವರ್ಷಗಳ ಸ್ನೇಹ ಇದೀಗ ನಾನಾ-ನೀನಾ ಎನ್ನುವಂತಿದೆ.
2004ರ ಚುನಾವಣೆಯಿಂದ ಸತತ ಗೆಲ್ಲುತ್ತಿರುವ ಸಿ.ಟಿ.ರವಿಗೆ ಈ ಚುನಾವಣೆ ಒಂದಷ್ಟು ಟೆನ್ಷನ್ ತಂದಿರುವುದು ಸತ್ಯ. ಸಿ.ಟಿ.ರವಿಯ ಜೊತೆಗೆ ಇದ್ದು ರಾಜಕೀಯ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದ ಮಾಜಿ ಬಿಜೆಪಿ ನಾಯಕ, ಹಾಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಇದೀಗ ಅದೇ ರಾಜಕೀಯ ಒಳ ಏಟುಗಳನ್ನು ಸಿ.ಟಿ.ರವಿಗೆ ಕೊಡುತ್ತಿರುವುದರಿಂದ ಬಿಜೆಪಿಗೆ ಬಿಸಿ ತುಪ್ಪವಾಗಿದೆ.
Advertisement
Advertisement
ಹೆಚ್.ಡಿ.ತಮ್ಮಯ್ಯನವರ ಗೆಲುವು ಅಷ್ಟು ಸುಲಭವಿಲ್ಲ. ಪಕ್ಷಕ್ಕೆ ಸೇರಿದ ಎರಡೇ ತಿಂಗಳಲ್ಲಿ ಅರ್ಜಿ ಹಾಕದೇ ಟಿಕೆಟ್ ತಂದ ಹೆಚ್.ಡಿ.ತಮ್ಮಯ್ಯನವರ ಪರ ಮೂಲ ಕಾಂಗ್ರೆಸ್ಸಿಗರು ಮನಸ್ಸು ಬಿಟ್ಟಿದ್ದಾರೆ. ಕಾಂಗ್ರೆಸ್ ವರಿಷ್ಠರಿಗೆ ಸಿ.ಟಿ.ರವಿ ಮೇಲಿದ್ದ ಕೋಪಕ್ಕೆ ಕಾಫಿನಾಡ ಮೂಲ ಕಾಂಗ್ರೆಸ್ಸಿಗರು ಬಲಿಯಾದರು ಎಂಬ ಮಾತು ಇದೆ. ಕಾಫಿನಾಡ ಮೂಲ ಕಾಂಗ್ರೆಸ್ಸಿಗರು ಡಿಕೆಶಿ ಜೊತೆ ಅರ್ಧ ರಾತ್ರಿವರೆಗೂ ಸಭೆ ನಡೆಸಿದರೂ ಕೈ ನಾಯಕರು ತಮ್ಮಯ್ಯಗೆ ಮಣೆ ಹಾಕಿರುವುದು ಬ್ಯಾನರ್ ಕಟ್ಟಿದ ಕೈ ಕಟ್ಟಾಳುಗಳಿಗೆ ಬೇಸರ ತರಿಸಿದೆ. ಇಬ್ಬರು ಲಿಂಗಾಯುತ ಸಮುದಾಯದ ನಾಯಕರಿದ್ದರೂ ಕೂಡ ತಮ್ಮಯ್ಯಗೆ ಮಣೆ ಹಾಕಿರುವುದು ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆತ
Advertisement
ಸಿ.ಟಿ.ರವಿ ಅಭಿವೃದ್ಧಿಯೇ ನನ್ನ ಶ್ರೀರಕ್ಷೆ ಎಂದು ಅಖಾಡಕ್ಕಿಳಿದು ಶಿಷ್ಯನಿಗೆ ಮತ್ತೊಂದು ರಾಜಕೀಯ ಪಾಠ ಮಾಡುತ್ತಿದ್ದಾರೆ. 12, 13 ಸಾವಿರ ಜಾತಿ ಮತದ ಸಿ.ಟಿ.ರವಿ 20 ವರ್ಷ ಗೆದ್ದು ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಸಿ.ಟಿ.ರವಿಯ ವರ್ಚಸ್ಸು, ರಾಜಕೀಯ ತಂತ್ರಗಾರಿಕೆ, ಮಾತಿನ ಶೈಲಿ, ಹಿಂದುತ್ವದ ಬ್ರಾಂಡ್ ಮಧ್ಯೆ ಶಿವಮೊಗ್ಗ-ಹಾಸನ-ಮೈಸೂರು-ಮಂಗಳೂರು-ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಿದ್ದ ಸಿಎಂ ಕುರ್ಚಿ ಕಾಫಿನಾಡಿಗೂ ಬರಬಹುದು ಎನ್ನುವುದು ಸಿಟಿ ರವಿ ಬೆಂಬಲಿಗರ ಅಭಿಪ್ರಾಯ.
Advertisement
ಈ ಮಧ್ಯೆ ಜೆಡಿಎಸ್ ಪರಿಷತ್ ಸದಸ್ಯ ಬೋಜೇಗೌಡ ಬಹಿರಂಗವಾಗಿಯೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಚಿಕ್ಕಮಗಳೂರಿನಲ್ಲಿ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರಾ ನೇರ ಸ್ಪರ್ಧೆ ನಡೆಯುತ್ತಿದೆ.
2018ರ ಚುನಾವಣೆ ಯಾರಿಗೆ ಎಷ್ಟು ಮತ?
ಒಟ್ಟು ಮತದಾರರು : 2,16,230
ಚುಲಾವಣೆಯಾದ ಮತಗಳು : 1,61,387
ನೋಟಾ : 1,224
ಸಿ.ಟಿ.ರವಿ : ಬಿಜೆಪಿ : 70,863
ಬಿ.ಎಲ್. ಶಂಕರ್ : ಕಾಂಗ್ರೆಸ್ : 44,549
ಬಿ.ಹೆಚ್.ಹರೀಶ್ : ಜೆಡಿಎಸ್ : 3,8317
ಅಂತರ – 26,314
ಚಿಕ್ಕಮಗಳೂರು ಕ್ಷೇತ್ರದ ಜಾತಿ ವಿವರ :
ಲಿಂಗಾಯಿತರು : 45,291
ಒಕ್ಕಲಿಗರು : 15,629
ಮುಸ್ಲಿಂರು : 35,902
ಕುರುಬರು : 32.212
ಪ.ಜಾತಿ /ಪ.ಪಂ : 48,820
ಬ್ರಾಹ್ಮಣರು : 6,122
ಕ್ರಿಶ್ಚಿಯನ್ : 5,100
ತಮಿಳರು : 6,640