ಚಿಕ್ಕೋಡಿ: ಕಳೆದ ಬಾರಿ ಗಣೇಶ ಹುಕ್ಕೇರಿ, ಬಿಜೆಪಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ಗಣೇಶ ಅವರಿಗೆ ಬಿಜೆಪಿಯಿಂದ ಮಾಜಿ ಸಂಸದ ರಮೇಶ ಕತ್ತಿ (Ramesh Katti) ಪ್ರತಿಸ್ಪರ್ಧಿಯಾಗಿದ್ದಾರೆ.
ಚಿಕ್ಕೋಡಿ(Chikkodi) ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿ ಗಣೇಶ ಹುಕ್ಕೇರಿ (Ganesh hukkeri) ಹಾಗೂ ಅವರ ತಂದೆ ಪ್ರಕಾಶ ಹುಕ್ಕೇರಿ (Prakash Hukkeri) ಅಪಾರ ಅಭಿಮಾನ ಬಳಗ ಹೊಂದಿದ್ದಾರೆ. ಆದರೆ ಬಿಜೆಪಿಗೆ (BJP) ಕಾರ್ಯಕರ್ತರ ಕೊರತೆಯಿದೆ. ಇದು ರಮೇಶ ಕತ್ತಿಯವರಿಗೆ ಹುಕ್ಕೇರಿ ಕ್ಷೇತ್ರದಲ್ಲಿ ವರ್ಚಸ್ಸು ಕಡಿಮೆಯಾಗಲು ಕಾರಣವಾಗಿದೆ.
Advertisement
ಬಿಜೆಪಿಗೆ ಧನಾತ್ಮಕ ಅಂಶಗಳು
ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ತನ್ನದೇ ಅಭಿಮಾನ ಬಳಗ ಹೊಂದಿದ್ದಾರೆ. ಜೊಲ್ಲೆ ಕುಟುಂಬ ಕವಟಗಿಮಠ ಕ್ಷೇತ್ರದ ರಾಜಕಾರಣದಲ್ಲಿ ಸಕ್ರಿಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ ಜನರಿಗೆ ಮನವರಿಕೆಯಾಗಿದೆ. ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದರಿಂದ ಸಹಜವಾಗಿಯೆ ಬಿಜೆಪಿಗೆ ಇದು ಅನುಕೂಲಕರವಾಗಿದೆ.
Advertisement
Advertisement
ಬಿಜೆಪಿಗೆ ಋಣಾತ್ಮಕ ಅಂಶಗಳು
ವಸ್ತುಗಳ ಬೆಲೆ ಏರಿಕೆ ವಿಚಾರದಲ್ಲಿ ಜನ ಬೇಸತ್ತಿದ್ದಾರೆ. ಅಲ್ಲದೆ ಸದಲಗಾ ಭಾಗದಲ್ಲಿ ಪ್ರಕಾಶ ಹುಕ್ಕೇರಿ ಪ್ರಭಾವ ಬಹಳವಿದೆ. ಹೀಗಾಗಿ ಬಿಜೆಪಿಗೆ ಬರುವ ಮತಗಳು ಚದುರುವ ಸಾಧ್ಯತೆ ಇದೆ.
Advertisement
ಕಾಂಗ್ರೆಸ್ ಧನಾತ್ಮಕ ಅಂಶಗಳು
ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ವರ್ಚಸ್ಸು ಕ್ಷೇತ್ರದಲ್ಲಿದೆ. ಇಬ್ಬರೂ ಕಾರ್ಯಕರ್ತರಿಗೆ ಸುಲಭವಾಗಿ ಲಭ್ಯವಾಗುವ ನಾಯಕರಾಗಿದ್ದಾರೆ. ವಿಧಾನಸಭಾ ಹಾಗೂ ಪರಿಷತ್‍ನಲ್ಲಿ ತಂದೆ ಮಕ್ಕಳ ಆಯ್ಕೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಹಾಯಕವಾಗಲಿದೆ.
ಕಾಂಗ್ರೆಸ್ ಋಣಾತ್ಮಕ ಅಂಶಗಳು
ಕುಟುಂಬ ರಾಜಕಾರಣದಿಂದ ಬೇಸತ್ತ ಜನರು ಬೇರೆ ಪಕ್ಷದ ಅಭ್ಯರ್ಥಿಗೆ ಮತ ನೀಡುವ ಸಾಧ್ಯತೆಯಿದೆ. ಬಹಳ ವರ್ಷಗಳಿಂದ ಒಂದೇ ಕುಟುಂಬಕ್ಕೆ ಸೀಮಿತವಾಗಿರುವ ಅಧಿಕಾರ ಕಾಂಗ್ರೆಸ್‍ಗೆ ಮುಳುವಾಗಬಹುದು. ಬೆಳಗಾವಿಯನ್ನು ಹೊರತುಪಡಿಸಿದರೆ ಮತ್ತೊಂದು ಉಪವಿಭಾಗ ಮತ್ತು ಲೋಕಸಭಾ ಕ್ಷೇತ್ರ ಚಿಕ್ಕೋಡಿ. ಪ್ರಕಾಶ್ ಹುಕ್ಕೇರಿ ಇಲ್ಲಿಂದ ಸತತವಾಗಿ ಆರಿಸಿ ಬಂದಿದ್ದಾರೆ. ಈ ಹಿಂದಿನ ಲೋಕಸಭೆಗೆ ಪ್ರಕಾಶ್ ಹುಕ್ಕೇರಿಯವರು ಸ್ಪರ್ಧೆ ಮಾಡಿರಲಿಲ್ಲ. ಅವರಿಂದ ತೆರವಾದ ಕ್ಷೇತ್ರಕ್ಕೆ ಅವರ ಮಗ ಗಣೇಶ ಹುಕ್ಕೇರಿಯವರನ್ನು ನಿಲ್ಲಿಸಿದ್ದರು. ಗಣೇಶ ಹುಕ್ಕೇರಿಯವರೂ ಸಹ ಸತತ ಎರಡು ಬಾರಿ ಈ ಮತಕ್ಷೇತ್ರದಿಂದ ತಂದೆಯಂತೆ ಆರಿಸಿ ಬಂದಿದ್ದಾರೆ. ಚಿಕ್ಕೋಡಿಯಲ್ಲಿಯೇ ಪ್ರಭಾವಿ ಬಿಜೆಪಿ ನಾಯಕರಿದ್ದರೂ ಸಹ ಈವರೆಗೂ ಚಿಕ್ಕೋಡಿ ವಿಧಾನಸಭಾ ಮತಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.
ಪ್ರತಿ ಬಾರಿಯೂ ಕೃಷ್ಣಾ ನದಿಯ ಪ್ರವಾಹ ಅಪ್ಪಳಿಸಿದಾಗ ಸಾವಿರಾರು ಜನ ಬೀದಿಗೆ ಬೀಳುವ ಪರಿಸ್ಥಿತಿ ಇದೆ. ಹೀಗಿದ್ದರೂ ಸಹ ಇಲ್ಲಿ ಪ್ರಕಾಶ್ ಹುಕ್ಕೇರಿ ಕಳೆದ 5 ಬಾರಿ ಆರಿಸಿ ಬಂದು ಸಚಿವರಾಗಿದ್ದರು. ನಂತರ ಅವರ ಮಗ ಗಣೇಶ ಹುಕ್ಕೇರಿ ಎರಡು ಬಾರಿ ಆರಿಸಿ ಬಂದು ಈಗ ಮೂರನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿಗೆ ಇಲ್ಲಿ ಸಮಬಲವಿದ್ದರೂ ಸಹ ಪ್ರಕಾಶ್ ಹುಕ್ಕೇರಿಯವರು ಕ್ಷೇತ್ರದಾದ್ಯಂತ ಮಾಡಿರುವ ಅಭಿವೃದ್ದಿ ಕೆಲಸಗಳು ಹಾಗೂ ಜನರಿಗೆ ಸ್ಪಂದಿಸುವ ರೀತಿಯಿಂದ ಜನ ಹುಕ್ಕೇರಿ ಮನೆತನಕ್ಕೆ ಮಣೆ ಹಾಕುತ್ತಾರೆ ಎಂಬ ಮಾತಿದೆ. ಮೀಸೆ ಮಾವ ಎಂದೇ ಪ್ರಖ್ಯಾತಿ ಹೊಂದಿರುವ ಪ್ರಕಾಶ್ ಹುಕ್ಕೇರಿಯವರ ಅಭಿವೃದ್ಧಿಯ ಆಲೋಚನೆಗಳು ಕಳೆದ ಎರಡು ಚುನಾವಣೆಗಳಲ್ಲಿ ಅವರ ಮಗ ಗಣೇಶ ಹುಕ್ಕೇರಿಯವರ ಕೈ ಹಿಡಿದಿವೆ. ಸಮರ್ಥ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದರೆ ಕಾಂಗ್ರೆಸ್ ಕೋಟೆ ಬಿಜೆಪಿಗೆ ಕೈ ಸೇರಲಿದೆ ಎಂಬ ಲೆಕ್ಕಾಚಾರಗಳಿದ್ದರೂ ಸಹ ಈ ವರೆಗೂ ಅದು ಸಾಧ್ಯವಾಗಿಲ್ಲ.
ಈಗಾಗಲೇ ಒಂದು ಬಾರಿ ಅಣ್ಣಾಸಾಹೇಬ್ ಜೊಲ್ಲೆ ಮತ್ತೊಂದು ಬಾರಿ ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಇಬ್ಬರೂ ಸಹ ತಂದೆ ಪ್ರಕಾಶ ಹುಕ್ಕೇರಿ ಹಾಗೂ ಮಗ ಗಣೇಶ ಹುಕ್ಕೇರಿ ವಿರುದ್ಧ ಪರಾಭವಗೊಂಡಿದ್ದಾರೆ. ಹೇಳಿಕೊಳ್ಳುವ ವ್ಯವಹಾರದ ಲಾಬಿ ಇಲ್ಲದಿದ್ದರೂ ಸಹ ಕ್ಷೇತ್ರದಾದ್ಯಂತ ಪ್ರಕಾಶ ಹುಕ್ಕೇರಿಯವರ ಹಿಡಿತ ಸಾಧ್ಯವಾಗಿದೆ ಎನ್ನುವುದು ಒಂದು ವಿಶ್ಲೇಷಣೆ. ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಮಾತ್ರ ಹುಕ್ಕೇರಿ ಮನೆತನದ ಕೈ ಹಿಡಿದಿವೆ ಎನ್ನುವುದು ರಾಜಕೀಯ ಪಂಡಿತರ ವಾದವಾಗಿದೆ.
ಚಿಕ್ಕೋಡಿ ಕ್ಷೇತ್ರದ ಜಾತಿವಾರು ಮತದಾರರ ಲೆಕ್ಕಾಚಾರ
ಒಟ್ಟು ಮತದಾರರು
2,15,711
ಪುರುಷ : 1,08,686
ಮಹಿಳೆಯರು : 1,07,025
ಜಾತಿ ಲೆಕ್ಕಾಚಾರ
ಲಿಂಗಾಯತರು: 40,000
ಬ್ರಾಹ್ಮಣ: 10,000
ಎಸ್ ಸಿ ಎಸ್ ಟಿ; 25,000
ಮುಸ್ಲಿಂ: 28000
ಕುಂಬಾರ: 6000
ಜೈನ್: 35000
ಮರಾಠ: 18000
ಬಲಜಿಗ: 5000
ನೇಕಾರ: 5000
ವಿಶ್ವಕರ್ಮ: 3000
ಮಡಿವಾಳ: 3000