ಬೆಂಗಳೂರು: ಟಿಕೆಟ್ ಕೈತಪ್ಪಿದ್ದಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿ ನಾಮಪತ್ರ ಸಲ್ಲಿಸಿದ್ದ ಗಂಗಾಂಬಿಕೆ (Gangambike Mallikarjun) ಅವರ ಮನವೊಲಿಸುವಲ್ಲಿ ಕೊನೆಗೂ ಕಾಂಗ್ರೆಸ್ (Congress) ನಾಯಕರು ಯಶಸ್ವಿಯಾಗಿದ್ದಾರೆ. ಗಂಗಾಂಬಿಕೆ ಅವರು ನಾಮಪತ್ರ ವಾಪಸ್ ತೆಗೆದುಕೊಂಡಿದ್ದು, ಚಿಕ್ಕಪೇಟೆಯಿಂದ (Chikkapete) ಆರ್.ವಿ.ದೇವರಾಜ್ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವಂತಾಗಿದೆ.
ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಪಕ್ಷ ಟಿಕೆಟ್ ನೀಡಲಿಲ್ಲ. ಬದಲಿಗೆ ಆರ್.ವಿ.ದೇವರಾಜ್ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಗಂಗಾಂಬಿಕೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಚಿಕ್ಕಪೇಟೆಯಲ್ಲಿ ಮತ ವಿಭಜನೆಯಾಗುವ ಭೀತಿ ಕೈ ನಾಯಕರಲ್ಲಿತ್ತು. ಹೀಗಾಗಿ ಗಂಗಾಂಬಿಕೆ ಮನವೊಲಿಸಲು ನಿರಂತರ ಪ್ರಯತ್ನ ಮಾಡಿದ್ದರು. ಇದನ್ನೂ ಓದಿ: ಟಿಕೆಟ್ ವಂಚಿತ ಶಾಸಕ ರಾಮದಾಸ್‌ರನ್ನು ತಬ್ಬಿ ಬೆನ್ನು ತಟ್ಟಿದ ಅಮಿತ್ ಶಾ
ಈ ಕುರಿತು ಪ್ರತಿಕ್ರಿಯೆ ನೀಡಿದ ಗಂಗಾಂಬಿಕೆ, ಪಕ್ಷದ ಸೂಚನೆಯಂತೆ ನಾಮಪತ್ರ ವಾಪಾಸ್ ಪಡೆಯುತ್ತೇನೆಂದು ಪ್ರಕಟಿಸಿದ್ದಾರೆ. ನಾನು ನಾಮಪತ್ರ ವಾಪಸ್ ಪಡೆಯುತ್ತೇನೆಂದು ತಿಳಿಸಿದ್ದಾರೆ.
ನಮ್ಮ ಹೈಕಮಾಂಡ್‌ನ ಎಲ್ಲಾ ನಾಯಕರು ದೂರವಾಣಿ ಮೂಲಕ ಮಾತನಾಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷದಲ್ಲೇ ಇರಬೇಕು. ಹಾಗಾಗಿ ನಾಯಕರ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆಯುತ್ತಿದ್ದೇವೆ. ನಮ್ಮಿಂದ ಯಾವುದೇ ಡಿಮ್ಯಾಂಡ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಜನರ ಭಾವನೆ ಕೆರಳಿಸುವ ಯತ್ನ: ಸಿದ್ದು ಪರ ಬ್ಯಾಟ್ ಬೀಸಿದ ಸವದಿ