ಬೆಂಗಳೂರು: ಟ್ರಾಫಿಕ್ ಮತ್ತು ಮಳೆಯ ಕಾರಣದಿಂದ ಮೇ 6ರಂದು ನಿಗದಿಯಾಗಿದ್ದ ಮೋದಿ (Narendra Modi) ಬೆಂಗಳೂರು (Bengaluru) ರೋಡ್ ಶೋನಲ್ಲಿ ಬದಲಾವಣೆ ಮಾಡಲು ಬಿಜೆಪಿ ಮುಂದಾಗಿದೆ.
ಚುನಾವಣೆ (Election) ಹಿನ್ನೆಲೆ ಮೋದಿ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದು, ಮೇ 6ರಂದು ಬೆಂಗಳೂರಿನಲ್ಲಿ ರೋಡ್ ಶೋ (Road Show) ನಡೆಸಲಿದ್ದಾರೆ. ಒಂದು ಇಡೀ ದಿನ ರೋಡ್ ಶೋ ನಡೆಸುವುದರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಅಸ್ತವ್ಯಸ್ತಗೊಳ್ಳಲಿದೆ. ಅಲ್ಲದೇ ಸತತವಾಗಿ ಮಳೆ ಬರುತ್ತಿರುವ ಹಿನ್ನೆಲೆ ಸ್ವತಃ ಮೋದಿಯವರೇ ಶನಿವಾರ ಮತ್ತು ಭಾನುವಾರ ಎರಡು ದಿನ ರೋಡ್ ಶೋ ಆಯೋಜಿಸುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಬಿಜೆಪಿ (BJP) ನಾಯಕರು ಗುರುವಾರ ಮಧ್ಯಾಹ್ನ ಮಹತ್ವದ ಸಭೆಯನ್ನು ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ
Advertisement
Advertisement
ಶನಿವಾರ ಬೆಳಗ್ಗೆ ಮತ್ತು ಸಂಜೆಯಿಂದ ರಾತ್ರಿಯವರೆಗೂ ಮೋದಿ ರೋಡ್ ಶೋ ನಡೆಸಲು ಈ ಮೊದಲು ಸಿದ್ಧತೆ ನಡೆಸಲಾಗಿತ್ತು. ಇದೀಗ ಶನಿವಾರ ಮಧ್ಯಾಹ್ನದ ನಂತರದ ರೋಡ್ ಶೋ ಕಾರ್ಯಕ್ರಮವನ್ನು ಭಾನುವಾರಕ್ಕೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಶನಿವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗಿನ ಮೋದಿ ರೋಡ್ ಶೋನಲ್ಲಿ ಯಾವುದೇ ಬದಲಾವಣೆಯಿಲ್ಲ. ಇದನ್ನೂ ಓದಿ: ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ
Advertisement
Advertisement
ಶನಿವಾರ 10.1 ಕಿ.ಮೀ ರೋಡ್ ಶೋ ನಡೆಸಲಿದ್ದು, ಮಧ್ಯಾಹ್ನ 4ರಿಂದ ರಾತ್ರಿ 9 ಗಂಟೆವರೆಗೆ ನಿಗದಿಯಾಗಿದ್ದ ರೋಡ್ ಶೋವನ್ನು ಭಾನುವಾರ ಬೆಳಗ್ಗೆ ಮುಂದುವರೆಸಲಿದ್ದಾರೆ. ಭಾನುವಾರ ಒಟ್ಟು 26.5 ಕಿ.ಮೀ ರೋಡ್ ಶೋ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್
ಏಪ್ರಿಲ್ 29 ರಂದು ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ಮಾಗಡಿ ರಸ್ತೆಯ ನೈಸ್ ರೋಡ್‌ನಿಂದ ಸುಮನಹಳ್ಳಿವರೆಗೆ ಮೋದಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಗುರಿಯಾಗಿಸಿ ಮತಯಾಚನೆ ಮಾಡಿದ್ದರು. ಇದನ್ನೂ ಓದಿ: ಚಾಮರಾಜನಗರದಲ್ಲಿ ಹೈವೋಲ್ಟೇಜ್ ಫೈಟ್ – ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?