ಶಿವಮೊಗ್ಗ: ಕೋವಿಡ್ ಸಮಯದಲ್ಲಿ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ಆಗಿದ್ದರೆ ಪಾಕಿಸ್ತಾನ, ಶ್ರೀಲಂಕಾಕ್ಕಿಂತ ನಮ್ಮ ದೇಶ ಮೊದಲು ದಿವಾಳಿ ಆಗುತ್ತಿತ್ತು ಎಂದು ಶಿಕಾರಿಪುರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದರು.
ಪ್ರಚಾರದ ವೇಳೆ ಮಾತನಾಡಿದ ಅವರು, 50-60 ವರ್ಷಗಳ ಕಾಲ ಕಾಂಗ್ರೆಸ್ (Congress) ದೇಶವನ್ನು, ರಾಜ್ಯವನ್ನು ಆಳಿದೆ. ಮೋದಿ ಪ್ರಧಾನಿಯಾದ ಬಳಿಕ ದೇಶದ ದಿಕ್ಕನ್ನು ಬದಲಾಯಿಸಿದ್ದಾರೆ. ಕೋವಿಡ್ ಸಮಯದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಿದ್ದರೆ ಪಾಕಿಸ್ತಾನ, ಶ್ರೀಲಂಕಾಕ್ಕಿಂತ ನಮ್ಮ ದೇಶ ಮೊದಲು ದಿವಾಳಿ ಆಗುತಿತ್ತು ಎಂದು ವ್ಯಂಗ್ಯವಾಡಿದರು.
Advertisement
Advertisement
ರಾಜ್ಯದ ಭವಿಷ್ಯ ರೂಪಿಸುವ ಚುನಾವಣೆ ಇದಾಗಿದೆ. ಅಭಿವೃದ್ಧಿ ರಥ ತೆಗೆದುಕೊಂಡು ಹೋಗುವ ಮಹಾ ಚುನಾವಣೆಯಾಗಿದ್ದು, ದೇಶದ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕದ ಪಾತ್ರ ಮಹತ್ವವಾದುದ್ದಾಗಿದೆ. ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ. ಅತಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುವ ಮೂಲಕ ಅಭಿವೃದ್ಧಿಗೆ ಮುಂಚೂಣಿಗೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಾಯುಸೇನೆಯ ವಿಮಾನ ಪತನ- ಮೂವರ ದುರ್ಮರಣ
Advertisement
Advertisement
ರಾಜ್ಯದ ವಾತಾವರಣ ನಮ್ಮ ನಿರೀಕ್ಷೆ ಮೀರಿ ಚೆನ್ನಾಗಿದೆ. ಕನಿಷ್ಠ ಬಿಜೆಪಿ 130-135 ಸ್ಥಾನ ಗಳಿಸಲಿದೆ. ಪ್ರಧಾನಿ ಮೋದಿ ಅವರು ಬಂದ ಹೋದ ನಂತರ ವಾತಾವರಣ ಬದಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ 25 ಲಕ್ಷ ರೂ. ಮೌಲ್ಯದ 1800 ಕುಕ್ಕರ್ ಜಪ್ತಿ